ನಿಮ್ಮ ಬ್ರೌಸರ್ ನಲ್ಲಿ ಕನ್ನಡದ ಸ್ಪೆಲ್ ಚೆಕ್ಕರ್ ಹಾಕ್ಕೊಳ್ಳಿ
ನೀವೆಲ್ಲ MS Word ಅಥವಾ ಬೇರೆ ಯಾವುದಾದರೂ ತಂತ್ರಾಂಶಗಳನ್ನು ಬಳಸುವಾಗ, ಕಾಗುಣಿತ ದೋಷ ಕಂಡುಬಂದಲ್ಲಿ ಅದಕ್ಕೆ ಕೆಂಪು ಅಡಿಗೆರೆ (underline) ಕಂಡುಬರುವುದನ್ನು ಗಮನಿಸಿರುತ್ತೀರಿ. ಅದಕ್ಕೆ ಸ್ಪೆಲ್ ಚೆಕ್ಕರ್ (spell checker) ಎಂದು ಕರೆಯುತ್ತಾರೆ. ಹೆಚ್ಚಾಗಿ ನಾವು ಬಳಸುವುದು ಆಂಗ್ಲ ಭಾಷೆಯೇ ಆದರೂ ಎಲ್ಲ ಭಾಷೆಗಳಲ್ಲೂ ಇದನ್ನು ಮಾಡುವುದು ಸಾಧ್ಯ ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಸಾಫ್ಟ್ ವೇರ್ ತಜ್ಞ ಹರೀಶ್ ಎಂ.ಜಿ. ಕನ್ನಡ ಸ್ಪೆಲ್ ಚೆಕ್ಕರ್ ಬಳಕೆ ಬಗ್ಗೆ ಹರೀಶ್ ನೀಡಿರುವ ವಿವರಣೆ ಮುಂದಿದೆ ತಪ್ಪದೇ ಓದಿ.
ಒಂದು ವರ್ಷದ ಹಿಂದೆ ಇದರ ಬಗ್ಗೆ ಸ್ವಲ್ಪ ಗಮನ ಕೊಟ್ಟಾಗ, Firefox ಮುಂತಾದ web browserಗಳಲ್ಲೂ ಸಹ ಈ ರೀತಿ ಸ್ಪೆಲ್ ಚೆಕ್ಕರ್ ಇರುವುದು ಗಮನಕ್ಕೆ ಬಂದಿತು. ಆದರೆ ಫೈರ್‌ಫಾಕ್ಸಿನಲ್ಲಿ ಕನ್ನಡಕ್ಕೆ ಯಾವುದೇ ರೀತಿಯ ಸ್ಪೆಲ್ ಚೆಕ್ಕರ್ ಇರಲಿಲ್ಲ. ['ಪದ' ತಂತ್ರಾಂಶ ಬಳಕೆ ಬಗ್ಗೆ ಇಲ್ಲಿ ಓದಿ]
https://addons.mozilla.org/en-US/firefox/language-tools/ - ಈ ಪುಟಕ್ಕೆ ಹೋದರೆ ಅಲ್ಲಿ ತಮಿಳು, ತೆಲುಗು, ಹಿಂದೀ ಭಾಷೆಗಳಿಗೆ ಸ್ಪೆಲ್ ಚೆಕ್ಕರ್ ಇದ್ದರೂ ಕನ್ನಡದ ಮುಂದೆ ಖಾಲಿ ಜಾಗವಿದ್ದಿದ್ದು ಬೇಸರ ತಂದಿತ್ತು. ಅದು ಓಪನ್ ಸೋರ್ಸ್ ಆಗಿರುವುದರಿಂದ ನಾನೇ ಏಕೆ ಮಾಡಬಾರದು ಎಂದುಕೊಂಡೆ. ಅಂತೆಯೇ ನನ್ನ ಕೈಲಾದ ಮಟ್ಟಿಗೆ ಒಂದು ಸ್ಪೆಲ್ ಚೆಕ್ಕರ್ ಮಾಡಿ ಹಾಕಿದೆ. ಈಗ ಈ ಸ್ಪೆಲ್ ಚೆಕ್ಕರ್‌ಗೆ ಐದು ನೂರಕ್ಕೂ ಹೆಚ್ಚು ಬಳಕೆದಾರರಿದ್ದಾರೆ.
ನಿಮ್ಮ ವೆಬ್ ಬ್ರೌಸರ್ ನಲ್ಲಿ ಕನ್ನಡ ಸ್ಪೆಲ್ ಚೆಕ್ಕರ್ ಅಳವಡಿಸಿಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ.. ಸ್ಪೆಲ್ ಚೆಕ್ಕರ್ ಬಳಸುವ ವಿಧಾನ ಹೇಗೆ ಎಂಬುದನ್ನು ಮುಂದೆ ವಿವರಿಸಲಾಗಿದೆ ತಪ್ಪದೇ ಓದಿ...

ಇದನ್ನು ಬಳಸುವುದು ಹೇಗೆ?
* ಮೊದಲು ಫೈರ್ ಫಾಕ್ಸ್ ಬ್ರೌಸರ್ ಅನ್ನು ತೆರೆದುಕೊಳ್ಳಿ. https://addons.mozilla.org/en-US/firefox/addon/kannada-spell-checker/ ಈ ಕೊಂಡಿಗೆ ಹೋಗಿ.
* "+ Add to Firefox" ಎಂಬ ಬಟನ್ ಕ್ಲಿಕ್ಕಿಸಿ.
* 3 ಸೆಕೆಂಡುಗಳ ಕಾಲ ಕಾದು, ನಂತರ "Install Now" ಒತ್ತಿ.
* ಇದರಿಂದ ಆಡ್ ಆನ್ ಅನುಸ್ಥಾಪನೆಗೊಳ್ಳುತ್ತದೆ.

ಭಾಷೆ ಆಯ್ಕೆ
ನಂತರ ಯಾವುದಾದರೂ text fieldಗೆ ಹೋಗಿ (ಕಮೆಂಟ್ ಬರೆಯುವ, ಪೋಸ್ಟ್ ಬರೆಯುವ - ಇತ್ಯಾದಿ ಟೈಪ್ ಮಾಡಬಹುದಾದ ಸ್ಥಳಗಳು) ರೈಟ್ ಕ್ಲಿಕ್ ಮಾಡಿ Check Spelling ಎಂಬುದನ್ನು ಆಯ್ದುಕೊಳ್ಳಿ.
ನಂತರ ಮತ್ತೆ ರೈಟ್ ಕ್ಲಿಕ್ ಮಾಡಿ Languages->Kannada ಎಂಬುದನ್ನು ಆಯ್ದುಕೊಳ್ಳಿ.

ನಿಮ್ಮ ಸಹಕಾರ ಅಗತ್ಯ
ನೀವು ಬರೆಯುತ್ತಾ ಹೋದಂತೆ ತಪ್ಪು ಪದಗಳು ಕಂಡಲ್ಲಿ ಅಡಿಗೆರೆ ಮೂಡಲಾರಂಭಿಸುತ್ತದೆ. ಯಾವ ಪದಗಳಿಗೆ ಯಾವ ಪ್ರತ್ಯಯಗಳು ಸೇರುತ್ತವೆ ಎಂಬುದನ್ನೆಲ್ಲ ಪಟ್ಟಿ ಮಾಡಿ ಅವುಗಳನ್ನು ವಿಂಗಡಿಸಿ ಬರೆಯಬೇಕಾಗಿದೆ. ಇದಕ್ಕಿಂತ ಹೆಚ್ಚಾಗಿ ಪದಗಳ ಪಟ್ಟಿ ಬೇಕು. ಇದಕ್ಕಾಗಿ ನನ್ನ ಅನೇಕ ಗೆಳೆಯರು ಸಹಕರಿಸಿದರು. ಅವರಿಗೆಲ್ಲ ನನ್ನ ಧನ್ಯವಾದಗಳು ಎಂದು ಡೆವಲಪರ್ ಹರೀಶ್ ಮಂಚಾಲೆ ಹೇಳಿದ್ದಾರೆ.

ನೀವೂ ಸಹಕರಿಸಬಹುದು!
ಈ ಸ್ಪೆಲ್ ಚೆಕ್ಕರ್ ಸಮಗ್ರವಾಗಿಲ್ಲ, ಸಂಪೂರ್ಣವಲ್ಲ. ಏಕೆಂದರೆ ಕನ್ನಡದಲ್ಲಿ ಲಕ್ಷಗಟ್ಟಲೆ ಪದಗಳಿವೆ. ಸದ್ಯಕ್ಕೆ ಇದರಲ್ಲಿ ಮುಖ್ಯವಾದ 4000+ ಪದಗಳು ಮಾತ್ರ ಇವೆ. ಅಲ್ಲದೇ, ಕನ್ನಡದ ಕ್ರಿಯಾಪದಗಳು ಸಂಕೀರ್ಣವಾದ ಪ್ರತ್ಯಯಗಳನ್ನು ಹೊಂದಿರುವುದರಿಂದ ಅವುಗಳನ್ನು ಸ್ಪೆಲ್ ಚೆಕ್ಕರ್ ಸರಿಯಾಗಿ ಗುರುತಿಸದೇ ಇರಬಹುದು. ಮುಂದಿನ ಆವೃತ್ತಿಗಳಲ್ಲಿ ಇದನ್ನು ಖಂಡಿತ ಸರಿಪಡಿಸಲಾಗುವುದು.
ನೀವು ಬರೆಯುವಾಗ ಸರಿಯಾದ ಪದಗಳಿಗೂ ಇದು ಅಡಿಗೆರೆ ತೋರಿಸಿದಲ್ಲಿ, ರೈಟ್ ಕ್ಲಿಕ್ ಮಾಡಿ Add to Dictionary ಎಂಬುದನ್ನು ಒತ್ತಬಹುದು.
ನಂತರ Help -> Troubleshooting Information ಕ್ಲಿಕ್ಕಿಸಿ Profile Directory ಯ ಮುಂದಿರುವ Open Directory ಒತ್ತಿ,ಅದರಲ್ಲಿರುವ persdict.dat ಫೈಲ್ ಅನ್ನು ನನಗೆ ಕಳುಹಿಸಿದರೆ ಅದರಲ್ಲಿನ ಪದಗಳನ್ನು ಮುಂದಿನ ಆವೃತ್ತಿಯಲ್ಲಿ ಅಳವಡಿಸಲಾಗುವುದು.
ತಾಂತ್ರಿಕ ವಿವರಗಳು
ಬೇರೆ ಬೇರೆ ರೀತಿಯ ಸ್ಪೆಲ್ ಚೆಕ್ಕರ್ ಗಳಿದ್ದರೂ ಸಹ aspell ಮತ್ತು hunspell ಮಾದರಿಯ ಸ್ಪೆಲ್ ಚೆಕ್ಕರ್‌ಗಳು ಗಮನಾರ್ಹವಾದವುಗಳು. ಫೈರ್ ಫಾಕ್ಸ್ hunspell ಮಾದರಿಯ ಸ್ಪೆಲ್ ಚೆಕ್ಕರ್ ಬಳಸುತ್ತದೆ. ಈ ಶಿಷ್ಟತೆಯನ್ನು ಅಳವಡಿಸಿಕೊಂಡರೆ ಅದನ್ನು ಫೈರ್ ಫಾಕ್ಸ್ ಅಷ್ಟೇ ಅಲ್ಲದೇ Open Office, Libre Office, Notepad++ ಮುಂತಾದ ಮುಕ್ತ ತಂತ್ರಾಂಶಗಳಲ್ಲಿ ಕೂಡ ಬಳಸಬಹುದು.
ಈ ಸ್ಪೆಲ್ ಚೆಕ್ಕರ್ ನ ಸಂಪೂರ್ಣ ಸೋರ್ಸ್ ಕೋಡ್ ಇಲ್ಲಿ ಲಭ್ಯ: https://github.com/mgharish/kn-hunspell/
ಇದು GNU/GPL v2.0+ ಅನುಮತಿಯನ್ನು ಹೊಂದಿರುವುದರಿಂದ, ಯಾರು ಬೇಕಾದರೂ ಇದನ್ನು ಸ್ವತಃ ಬದಲಾಯಿಸಿಕೊಳ್ಳಬಹುದು.

ಅಭಿವೃದ್ಧಿಪಡಿಸಲು ಸಹಕರಿಸಿ
ಕನ್ನಡ ಸ್ಪೆಲ್ ಚೆಕ್ಕರ್ ತಂತ್ರಾಂಶ, ವಿಂಡೋಸ್ ಹಾಗೂ ಲಿನಾಕ್ಸ್ ಆವೃತ್ತಿ ಎರಡರಲ್ಲೂ ಲಭ್ಯವಿದೆ. ಈ ಆಡ್ ಆನ್ ಇನ್ನಷ್ಟು ಅಭಿವೃದ್ಧಿಪಡಿಸಲು ಆಸಕ್ತಿ ಇರುವವರು ನನ್ನನ್ನು [email protected] ಗೆ ಪತ್ರ ರವಾನೆ ಮಾಡುವ ಮೂಲಕ ಸಂಪರ್ಕಿಸಬಹುದು.
ಹರೀಶ್ ಅವರ ಬ್ಲಾಗ್ ವಿಳಾಸ : ಬಾಳ ದೋಣಿ
-
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video












Click it and Unblock the Notifications