• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ Work From Home ಕಡೆಗೆ ತಿರುಗಿದ ಐಟಿ ಕಂಪನಿಗಳು

|
Google Oneindia Kannada News

ಬೆಂಗಳೂರು, ಜನವರಿ 18: ಕರ್ನಾಟಕದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ 40,000 ಗಡಿ ದಾಟಿದೆ. ಸಿಲಿಕಾನ್ ಸಿಟಿಯಲ್ಲಿ ಕೊವಿಡ್-19 ಮೂರನೇ ಅಲೆ ಹಾವಳಿ ಹಿನ್ನೆಲೆ ಎಚ್ಚೆತ್ತುಕೊಂಡಿರುವ ಐಟಿ ಕಂಪನಿಗಳು ವರ್ಕ್ ಫ್ರಾಮ್ ಹೋಮ್ ಅನ್ನು ಅಳವಡಿಸಿಕೊಳ್ಳಲು ಮುಂದಾಗಿವೆ. ಶೇ.70ರಷ್ಟು ಸಿಬ್ಬಂದಿ ಮನೆಯಿಂದಲೇ ಕಾರ್ಯ ನಿರ್ವಹಿಸುವುದಕ್ಕೆ ಸೂಚನೆ ನೀಡಲಾಗಿದೆ.

ಡಾಕ್ಯುಮೆಂಟೇಶನ್ ಪ್ರಕ್ರಿಯೆ, ಡಿಜಿಟೈಸ್ ಮತ್ತು ಸ್ವಯಂಚಾಲಿತಗೊಳಿಸುವ ಕೆಲಸಗಳಿಗೆ ಅಗತ್ಯವಾದ ಹಾಗೂ ಕೆಲವು ಸಾಫ್ಟ್‌ವೇರ್ ಉದ್ಯೋಗಿಗಳನ್ನು ಒಳಗೊಂಡಂತೆ ಶೇ.30ರಷ್ಟು ಸಿಬ್ಬಂದಿ ಮಾತ್ರ ಕಚೇರಿಯಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು Signdesk.com ಸಂಸ್ಥೆ ತಿಳಿಸಿದೆ.

"ಬೆಂಗಳೂರಿನಲ್ಲಿ ನಾವು ಮೂರು ಕಚೇರಿಗಳನ್ನು ಹೊಂದಿದ್ದೇವೆ. ನಾವು ಎಲ್ಲಾ ಮಹಾನಗರಗಳಲ್ಲಿಯೂ ಸಂಸ್ಥೆಯ ಕಚೇರಿಗಳನ್ನು ಹೊಂದಿದ್ದೇವೆ. ನೀವು ಒಟ್ಟಾರೆ ಉದ್ಯೋಗಿಗಳನ್ನು ನೋಡಿದರೆ, ನಾವು 30-40 ಪ್ರತಿಶತದಷ್ಟು ಸಾಮರ್ಥ್ಯದಲ್ಲಿ ಕಾರ್ಯ ನಿರ್ವಹಿಸುತ್ತೇವೆ," ಎಂದು Signdesk.com ಸಿಇಒ ಅಭಿಷೇಕ್ ಸಸೀದ್ರನ್ ಹೇಳಿದ್ದಾರೆ.

ಡಿಸೆಂಬರ್ ತಿಂಗಳಿನಲ್ಲಿ ಕಚೇರಿಗೆ ಆಹ್ವಾನ:

ಕಳೆದ ಡಿಸೆಂಬರ್‌ನಲ್ಲಿ ದೊಡ್ಡ ಐಟಿ ಸಂಸ್ಥೆಗಳಾದ ಟಿಸಿಎಸ್ ಮತ್ತು ಟೆಕ್ ಮಹೀಂದ್ರಾ ತಮ್ಮ ಉದ್ಯೋಗಿಗಳು ಕಚೇರಿಗೆ ಆಗಮಿಸುವಂತೆ ಆಹ್ವಾನ ನೀಡಿದ್ದವು. ಈ ವೇಳೆ ಕೆಲವರು 'ವರ್ಕ್ ಫ್ರಮ್ ಹೋಮ್' ಬಗ್ಗೆ ಉಲ್ಲೇಖಿಸಿದರೆ, ಇನ್ನು ಕೆಲವರು ಮಾನವ ಸಂವಹನದ ಕೊರತೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.

ವರ್ಕ್ ಫ್ರಾಮ್ ಹೋಮ್ ಕಷ್ಟ:

"ನೀವು ಸಹೋದ್ಯೋಗಿಗಳೊಂದಿಗೆ ಸಂವಹನ ನಡೆಸುವುದಿಲ್ಲ. ಎಲ್ಲಾ ಕರೆಗಳು ಮತ್ತು ಸಭೆಗಳು ಆನ್‌ಲೈನ್‌ನಲ್ಲಿ ನಡೆಯುತ್ತವೆ. ಯಾವುದೇ ಮಾನವ ಸಂವಹನ ಇರುವುದಿಲ್ಲ. ನೀವು ಜನರನ್ನು ಭೇಟಿ ಮಾಡಿದಾಗ ಮಾತ್ರವೇ ಹೊಸ ಆಲೋಚನೆಗಳು ಸಿಗುತ್ತವೆ. ಆದರೆ ವರ್ಕ್ ಫ್ರಾಮ್ ಹೋಮ್ ನಿಂದಾಗಿ ಇದು ಕಷ್ಟಸಾಧ್ಯವಾಗುತ್ತಿದೆ," ಎಂದು Signdesk.com ಹಣಕಾಸು ವಿಭಾಗದ ಮುಖ್ಯಸ್ಥ ದಿಲೀಪ್ ಅಡಿಗ ಹೇಳಿದ್ದಾರೆ. ಇದರ ಹೊರತಾಗಿ "ಐಟಿ ಉದ್ಯಮವು ತನ್ನ ಸೇವೆಗಳು ಮತ್ತು ಪರಿಹಾರಗಳಿಗಾಗಿ ನಿರಂತರ ಬೇಡಿಕೆಯ ಬಗ್ಗೆ ಆಶಾವಾದಿಯಾಗಿ ಉಳಿದಿದೆ. ಹೈಬ್ರಿಡ್ ಪರಿಸರದಲ್ಲಿ ಅಡೆತಡೆಯಿಲ್ಲದ ಕಾರ್ಯಾಚರಣೆ ಮುಂದುವರಿಸಲು ಸಂಪೂರ್ಣವಾಗಿ ಸಿದ್ಧವಾಗಿದೆ," ಎಂದಿದ್ದಾರೆ.

ನಾಲ್ವರು ಉದ್ಯೋಗಿಗಳನ್ನು ಹೊಂದಿರುವ ಸಂಸ್ಥೆ:

ಬೆಂಗಳೂರು ಮೂಲದ ಸೈಬರ್ ಸೆಕ್ಯುರಿಟಿ ಸ್ಟಾರ್ಟಪ್ ಆಗಿರುವ ಬಾಟ್‌ಮ್ಯಾನ್ ತನ್ನ ಕಚೇರಿಯಲ್ಲಿ ಕೇವಲ ನಾಲ್ವರು ಉದ್ಯೋಗಿಗಳನ್ನು ಹೊಂದಿದೆ. ಈ ಹೈಬ್ರಿಡ್ ಮಾದರಿಯಿಂದ ಸಂಸ್ಥೆಯ ಕಾರ್ಯಾಚರಣೆಗೆ ಹಿನ್ನಡೆ ಆಗಲಿದೆ ಎಂದು ಸಹ-ಸಂಸ್ಥಾಪಕರು ಭಾವಿಸಿದ್ದಾರೆ.

"ನೀವು ಸ್ಟಾರ್ಟ್‌ಅಪ್ ಆಗಿದ್ದರೆ, ವಿಶೇಷವಾಗಿ ಎಷ್ಟು ಅಗತ್ಯವೋ ಅಷ್ಟೇ ಸಣ್ಣ ತಂಡವಾಗಿದ್ದರೆ, ವೇಗವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ನಾವು ದೊಡ್ಡ ಜವಾಬ್ದಾರಿಗಳನ್ನು ತೆಗೆದುಕೊಳ್ಳುವ ಸಣ್ಣ ತಂಡವಾಗಿದೆ. ಮನೆಯಿಂದ ಕೆಲಸ ಮಾಡುವುದು ಹೆಚ್ಚು ಉತ್ಪಾದಕವಾಗಿ ಇರುವುದಿಲ್ಲ ಎಂದು ಕೆಲವೊಮ್ಮೆ ನನಗೆ ಅನಿಸುತ್ತದೆ," ಎಂದು ಬಾಟ್‌ಮ್ಯಾನ್ ಸಂಸ್ಥೆಯ ಸಹ ಸಂಸ್ಥಾಪಕ ರಾಜಾ ಟಿಎನ್ ಹೇಳಿದ್ದಾರೆ.

ಮನೆಯಲ್ಲಿ ಚಿಕ್ಕ ಮಕ್ಕಳಿರುವ ಅನೇಕ ಉದ್ಯೋಗಿಗಳ ಪಾಲಿಗೆ Work From Home ಒಂದು ವರವಾಗಿದೆ ಎಂಬುದು ಸಾಬೀತಾಗಿದೆ. ಆದರೆ ಕೆಲವರು ಇದರಿಂದ ಮಾನವ ಸಂವಹನವಿಲ್ಲದೆ ಅವರನ್ನು ಪಾತಾಳಕ್ಕೆ ಕುಸಿಯುವಂತೆ ಮಾಡುತ್ತದೆ ಎಂದು ಹೇಳುತ್ತಾರೆ.

ಕರ್ನಾಟಕದಲ್ಲಿ ಹೀಗಿದೆ ಕೊವಿಡ್-19 ಪರಿಸ್ಥಿತಿ:

ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಕೊವಿಡ್-19 ಮಹಾಸ್ಫೋಟ ಸಂಭವಿಸಿದೆ. ಕೊರೊನಾವೈರಸ್ ಪಾಸಿಟಿವಿಟಿ ದರ ಶೇ.22.30ಕ್ಕೆ ಏರಿಕೆಯಾಗಿದೆ. ಒಂದೇ ದಿನದಲ್ಲಿ 41,457 ಮಂದಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 20 ಮಂದಿ ಪ್ರಾಣ ಬಿಟ್ಟಿದ್ದು, 8,353 ಸೋಂಕಿತರು ಗುಣಮುಖರಾಗಿದ್ದಾರೆ. ಮಂಗಳವಾರದ ಅಂಕಿ-ಅಂಶಗಳ ಪ್ರಕಾರ, ರಾಜ್ಯದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 3288700ಕ್ಕೆ ಏರಿಕೆಯಾಗಿದೆ. ಈವರೆಗೂ 2999825 ಸೋಂಕಿತರು ಗುಣಮುಖರಾಗಿದ್ದು, ಸಾವಿನ ಸಂಖ್ಯೆ 38465ಕ್ಕೆ ಏರಿಕೆಯಾಗಿದೆ. ಇದರ ಹೊರತಾಗಿ ಸಕ್ರಿಯ ಪ್ರಕರಣಗಳ ಸಂಖ್ಯೆ 250381ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

English summary
Bengaluru Tech Firms Go Back To Work From Home Amid Coronavirus Surge. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X