• search
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನೀನು ಇರೋ ಜಾಗ ನಂಗೆ ಗೊತ್ತಿದೆ ಹುಷಾರ್‌ ಎಂದಿದ್ದ ಓಲಾ ಡ್ರೈವರ್‌

By Nayana
|

ಬೆಂಗಳೂರು, ಜು.7 : 'ನಿನ್ನ ಮನೆ ಎಲ್ಲಿದೆ ಎಂದು ನನಗೆ ಗೊತ್ತು' ಎಂದು ಓಲಾ ಡ್ರೈವರ್‌ ಆವಾಜ್‌ ಹಾಕಿದ್ದ ಎಂದು ಓಲಾದಲ್ಲಿ ಪ್ರಯಾಣಿಸುತ್ತಿದ್ದ ಯುವತಿ ಘಟನೆ ವಿವರ ನೀಡಿದ್ದಾಳೆ.

ಬೆಂಗಳೂರು ಏರ್‌ಪೋರ್ಟ್‌ ಬಳಿ ಓಲಾ ಕ್ಯಾಬ್‌ ಚಾಲಕನೊಬ್ಬ ಅನುಚಿತವಾಗಿ ವರ್ತಿಸಿದ್ದಲ್ಲದೇ ಅವಳ ಅಪಹರಣಕ್ಕೂ ಮುಂದಾಗಿರುವ ಘಟನೆ ವರದಿಯಾಗಿತ್ತು.

ಬೆಂಗಳೂರು: ಮಹಿಳೆ ಅಪಹರಣಕ್ಕೆ ಯತ್ನ: ಓಲಾ ಚಾಲಕನ ಬಂಧನ

ಈ ಕುರಿತು ಯುವತಿ ಮಾಹಿತಿ ಹಂಚಿಕೊಂಡಿದ್ದು ನಾನು ಕಾರಿನಿಂದ ಬೇರೆಯವರ ಸಹಾಯ ಕೇಳಲು ಯತ್ನಿಸಿದಾಗ ನಿಮ್ಮ ಮನೆಯ ವಿಳಾಸ ನನಗೆ ಗೊತ್ತಿದೆ, ನನ್ನ ಮನೆಯಿಂದ ನಿಮ್ಮ ಮನೆಗೆ ಕೆಲವೇ ನಿಮಿಷಗಳ ದಾರಿ ಎಂದು ಹೇಳಿ ಬೆದರಿಸಿದ್ದ ಎಂದು ಹೇಳಿದ್ದಾರೆ.

Taxi drivers behavior becomes challenge to women in cities

ಚಾಲಕ ಕಾರಿನ ವೇಗವನ್ನು ಹೆಚ್ಚಿಸಿದಾಗ ನಾನು ಕಾರಿನಿಂದ ಇಳಿಯಲು ಪ್ರಯತ್ನಿಸಿದೆ, ಬೇರೆಯವರ ಸಹಾಯಕ್ಕಾಗಿ ಕೂಗಿದೆ ಆ ಸಂದರ್ಭದಲ್ಲಿ ನನ್ನ ಬಾಯಿ ಮುಚ್ಚಿಸಲು ಚಾಲಕ ಪ್ರಯತ್ನ ಪಟ್ಟಿದ್ದ, ಒಂದೊಮ್ಮೆ ನೀನು ಈಗ ಇಲ್ಲಿ ಸಹಾಯಕ್ಕಾಗಿ ಕೂಗಿದರೆ ನಿಮ್ಮ ಮನೆಯ ವಿಳಾಸ ನನಗೆ ಗೊತ್ತಿದೆ ಎನ್ನುವ ರೀತಿಯಲ್ಲಿ ಮಾತನಾಡಿದ್ದಾಗಿ ಆಕೆ ಹೇಳಿದ್ದಾಳೆ.

ಯುವತಿ ಮೂಲತಃ ಪಶ್ಚಿಮ ಬಂಗಾಳದವಳು, ಗುರುವಾರ ಬೆಳಗಿನ ಜಾವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮುಂಬೈಗೆ ತೆರಳವವರಿದ್ದರು ಹಾಗಾರಿ ರಾತ್ರಿ 11.30ರ ಸಮಯಕ್ಕೆ ಓಲಾ ಬುಕ್‌ ಮಾಡಿದ್ದರು.ಹೆಬ್ಬಾಳ ಫ್ಲೈಓವರ್ ಬರುತ್ತಿದ್ದಂತೆಯೇ ಕಾರಿನ ವೇಗವನ್ನು ಹೆಚ್ಚಿಸಿದ್ದಾನೆ ನಂತರ ಬಳ್ಳಾರಿ ರಸ್ತೆಯ ಟೋಲ್‌ಗೇಟ್‌ ಬಳಿ ಕಾರಿ ನಿಧಾನವಾಗಿ ಚಲಿಸಿದ ಸಮಯದಲ್ಲಿ ಆಕೆ ಸಹಾಯಕ್ಕಾಗಿ ಕೂಗಿದ್ದಾರೆ.

ಕಾರು ನಿಲ್ಲಿಸಿ ನನಗೆ ಇಲ್ಲಿಯೇ ಇಳಿಯಬೇಕು ಎಂದು ಹೇಳಿದರೂ ಕೂಡ ಸುರೇಶ್‌ ಕೇಳಲು ತಯಾರಿರಲಿಲ್ಲ. ಮತ್ತಷ್ಟು ಕಾರಿನ ವೇಗವನ್ನು ಹೆಚ್ಚಿಸಿದ್ದ, ನಂತರ ಟೋಲ್‌ ಬಂದಾಗ ಸಹಾಯಕ್ಕಾಗಿ ಕೇಳಿಕೊಂಡ ಟೋಲ್‌ಬೂತ್‌ನಲ್ಲಿ ಕೆಲಸ ಮಾಡುವವರೊಬ್ಬರು ನನ್ನ ಸಹಾಯಕ್ಕೆ ಬಂದರು, ಅಲ್ಲಿಂದ ಪೊಲೀಸರಿಗೆ ಕರೆ ಮಾಡಲಾಯಿತು ನಂತರ ಹೊಯ್ಸಳ ವಾಹನ ತಕ್ಷಣವೇ ನನ್ನ ಸಹಾಯಕ್ಕೆ ಬಂದಿತು ಎಂದು ಮಾಹಿತಿ ನೀಡಿದ್ದಾರೆ.

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Ever since cab aggregators like Ola and Uber became operational in cities across the country, there have been several horror stories of women passengers being allegedly sexually assaulted or sexually harassed by the drivers.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more