ಬೆಂಗಳೂರಿನ ಹೋಟೆಲ್‌ಗಳಲ್ಲಿ ಇನ್ಮುಂದೆ ಬರಲಿದೆ ಟೇಬಲ್ ಬಿಲ್, ಏನಿದು ಹೊಸ ಬಿಲ್, ಯಾಕೆ ಇಲ್ಲಿದೆ ಮಾಹಿತಿ
ಬೆಂಗಳೂರು: ಬೆಂಗಳೂರಿನ ಹೋಟೆಲ್‌ಗಳು ಹೊಸ ನಿಯಮವನ್ನು ಜಾರಿ ಮಾಡುವುದಕ್ಕೆ ಮುಂದಾಗಿದ್ದು, ಇದರಿಂದ ಹೋಟೆಲ್ ಗ್ರಾಹಕರಿಗೆ ಬಿಲ್ ಹೆಚ್ಚಾಗುವ ಆತಂಕ ಶುರುವಾಗಿದೆ. ಇತ್ತೀಚಿನ ವರ್ಷಗಳಲ್ಲಿ ವಿವಿಧ ವಸ್ತುಗಳ ಬೆಲೆ ಏರಿಕೆಯಾಗಿದೆ. ಬೆಲೆ ಏರಿಕೆಯಾದ ಸಂದರ್ಭಗಳಲ್ಲಿ ಹೋಟೆಲ್‌ಗಳು ಆಹಾರ ಪದಾರ್ಥಗಳ ಬೆಲೆಯನ್ನೂ ಹೆಚ್ಚಳ ಮಾಡಿದೆ. ಇದೀಗ ಹೊಸ ಕಾರಣಕ್ಕೆ ಬೆಲೆ ಏರಿಕೆ ಮಾಡುವುದಕ್ಕೆ ಹೋಟೆಲ್‌ಗಳು ಮುಂದಾಗಿವೆ. ಈ ಕಾರಣವೂ ಸಹ ಚರ್ಚೆಗೂ ಕಾರಣವಾಗಿದೆ. ಇಷ್ಟಕ್ಕೂ ಯಾವ ಕಾರಣಕ್ಕೆ ಬೆಂಗಳೂರಿನ ಹೋಟೆಲ್‌ಗಳು ಬೆಲೆ ಏರಿಕೆಗೆ ಮುಂದಾಗಿವೆ.
ಬೆಂಗಳೂರಿನಾದ್ಯಂತದ ಹೋಟೆಲ್‌ಗಳು ಶೀಘ್ರದಲ್ಲೇ ಕಡಿಮೆ ಬೆಲೆಯ ಫುಡ್ ಆರ್ಡರ್ ಮಾಡಿದ ಮೇಲೆ ಗಂಟೆಗಳ ಕಾಲ ಹೋಟೆಲ್‌ಗಳಲ್ಲಿ ಕುಳಿತುಕೊಳ್ಳುವ ಗ್ರಾಹಕರಿಗೆ ಟೇಬಲ್ ಶುಲ್ಕ ನಿಗದಿ ಮಾಡುವುದಕ್ಕೆ ಮುಂದಾಗುತ್ತಿವೆ. ಹೌದು ಹೋಟೆಲ್‌ಗಳಲ್ಲಿ ನೀವು ಇನ್ಮುಂದೆ ತುಂಬಾ ಸಮಯ ಕುಳಿತುಕೊಂಡರೂ ಅದಕ್ಕೂ ಶುಲ್ಕ / ಹೆಚ್ಚುವರಿ ಹಣವನ್ನು ಪಾವತಿ ಮಾಡಬೇಕಾಗುತ್ತದೆ. ಹೋಟೆಲ್‌ಗಳ ಮಾಲೀಕರು ಆದಾಯ ನಷ್ಟ ತಪ್ಪಿಸುವುದು ಹಾಗೂ ಸೀಮಿತ ಆಸನ ಸಾಮರ್ಥ್ಯದ ವಿಷಯಗಳನ್ನು ಗಮನದಲ್ಲಿ ಇರಿಸಿಕೊಂಡು ಈ ಬೆಲೆ ಏರಿಕೆಯನ್ನು ಮಾಡುವುದಕ್ಕೆ ಹೋಟೆಲ್‌ಗಳು ಮುಂದಾಗಿವೆ ಎಂದು ಹೇಳಲಾಗುತ್ತಿದೆ.

ಟೇಬಲ್‌ಗಳಿಗೆ ಬಿಲ್ ನಿಗದಿ ಮಾಡುವುದಕ್ಕೆ ಚರ್ಚೆ
ಬೆಂಗಳೂರಿನಲ್ಲಿ ಸುದೀರ್ಘ ಅವಧಿ ಕುಳಿತುಕೊಂಡು ಕೆಲವು ಗ್ರಾಹಕರು ಮಾತನಾಡುತ್ತಿದ್ದಾರೆ. ಇದರಿಂದ ಇನ್ನುಳಿದ ಅಥವಾ ಹೊಸದಾಗಿ ಬರುವ ಗ್ರಾಹಕರಿಗೆ ಕುಳಿತುಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ. ಅಲ್ಲದೇ ಇದರಿಂದ ಕೆಲವು ಗ್ರಾಹಕರು ಬೇರೆ ಹೋಟೆಲ್‌ಗಳಿಗೆ ಹೋಗುವುದು ಸಹ ನಡೆದಿದೆ. ಬೆಂಗಳೂರು ಹೋಟೆಲ್ ಮಾಲೀಕರ ಸಂಘದಲ್ಲಿ ಈ ಪ್ರಸ್ತಾವನೆಯು ಪ್ರಸ್ತುತ ಚರ್ಚೆಯಲ್ಲಿದೆ ಎಂದು ಹೇಳಲಾಗಿದೆ.
ಹೋಟೆಲ್‌ಗಳಲ್ಲಿ ಹಲವು ಗ್ರಾಹಕರು ಒಂದು ಕಪ್ ಚಹಾ, ಕಾಫಿ ಅಥವಾ ಉಪಹಾರವನ್ನು ಮಾತ್ರ ಆರ್ಡರ್ ಮಾಡಿ, ತಾಸುಗಳ ಕಾಲ ಹೋಟೆಲ್ ಟೇಬಲ್ ಬಳಕೆ ಮಾಡುತ್ತಿದ್ದಾರೆ ಎನ್ನಲಾಗಿದ್ದು, ಇದು ಹೋಟೆಲ್ ಉದ್ಯಮಗಳ ಮೇಲೆ ಪರಿಣಾಮ ಬೀರುತ್ತಿರುವ ಹಿನ್ನೆಲೆಯಲ್ಲಿ ಈ ಹೊಸ ನಿಯಮವನ್ನು ಅಳವಡಿಸಿಕೊಳ್ಳುವುದಕ್ಕೆ ಬೆಂಗಳೂರು ಹೋಟೆಲ್‌ಗಳ ಮಾಲೀಕರು ಮುಂದಾಗಿದ್ದಾರೆ ಎನ್ನಲಾಗದೆ. ಬೆಂಗಳೂರಿನ ಹೋಟೆಲ್‌ಗಳಲ್ಲಿ ಇದು ಹೊಸ ಸಮಸ್ಯೆಯಾಗಿ ಬದಲಾಗಿದೆ.
ಬೆಂಗಳೂರಿನ ಹೋಟೆಲ್ ಮಾಲೀಕರು ಕಡಿಮೆ ಬೆಲೆಯ ಆಹಾರ ತೆಗೆದುಕೊಂಡು ನಂತರ ದೀರ್ಘಕಾಲದವರೆಗೆ ಕುಳಿತುಕೊಳ್ಳುವ ಗ್ರಾಹಕರಿಗೆ ಟೇಬಲ್ ಶುಲ್ಕವನ್ನು ನಿಗದಿ ಮಾಡುವ ಚಿಂತನೆಯನ್ನು ನಡೆಸಿದ್ದಾರೆ. ಆದಾಯ ನಷ್ಟ ತಪ್ಪಿಸುವುದು ಮತ್ತು ಸೀಮಿತ ಆಸನ ಸಾಮರ್ಥ್ಯ ಇದಕ್ಕೆ ಪ್ರಮುಖ ಕಾರಣವಾಗಿದೆ. ಈ ಪ್ರಸ್ತಾವನೆಯು ಬೆಂಗಳೂರು ಹೋಟೆಲ್ ಮಾಲೀಕರ ಸಂಘದಲ್ಲಿ ಚರ್ಚೆಯ ಹಂತದಲ್ಲಿದೆ ಎಂದು ಹೇಳಲಾಗಿದೆ. ಈ ವಿಚಾರದಲ್ಲಿ ಕರ್ನಾಟಕ ಸರ್ಕಾರವು ಸಹ ಮಧ್ಯ ಪ್ರವೇಶ ಮಾಡುವ ಸಾಧ್ಯತೆ ಇದೆ.
ಪೀಕ್ ಅವರ್‌ನಲ್ಲಿ ಸಮಸ್ಯೆ, ಆದಾಯದ ಕಡಿಮೆ
ಇನ್ನು ಬೆಂಗಳೂರಿನಲ್ಲಿ ಗ್ರಾಹಕರು ಹೋಟೆಲ್‌ಗಳಲ್ಲಿ ಅವಶ್ಯಕತೆಗಿಂತ ಹೆಚ್ಚು ಅಥವಾ ಆಹಾರ ಸೇವಿಸಿದ ಮೇಲೂ ತುಂಬಾ ಸಮಯ ಕುಳಿತುಕೊಳ್ಳುತ್ತಿರುವುದು ಮುಖ್ಯವಾಗಿ ಪೀಕ್ ಅವರ್‌ನಲ್ಲಿ ಸಮಸ್ಯೆ ಆಗುತ್ತಿದೆ ಎಂದು ಹೇಳಲಾಗಿದೆ. ಪೀಕ್ ಸಮಯದಲ್ಲಿ ಹೆಚ್ಚು ಸಮಯ ಕುಳಿತುಕೊಳ್ಳುವುದು ಊಟ ಮಾಡುವವರಿಗೆ ಆಸನಗಳ ಸಮಸ್ಯೆಯನ್ನು ಸೃಷ್ಟಿ ಮಾಡಿದೆ. ಅಲ್ಲದೇ ಹೋಟೆಲ್ ವಹಿವಾಟುಗಳ ಮೇಲೂ ಇದು ಪರಿಣಾಮ ಬೀರಿದೆ ಎಂದು ಹೇಳಲಾಗುತ್ತಿದೆ.












Click it and Unblock the Notifications