ಸೆಪ್ಟೆಂಬರ್ ತನಕ ವಿಶೇಷ ರೈಲು ಸೇವೆ ವಿಸ್ತರಣೆ, ಪಟ್ಟಿ
ಬೆಂಗಳೂರು, ಆಗಸ್ಟ್ 17: ನೈಋತ್ಯ ರೈಲ್ವೆ ವಲಯವು ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ಕಡಿಮೆ ಮಾಡಲು ಕೆಲವು ವಿಶೇಷ ರೈಲುಗಳ ಸಂಚಾರದ ಅವಧಿಯನ್ನು ಸೆಪ್ಟೆಂಬರ್-2023ರ ತನಕ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ.
ಆಗಸ್ಟ್ ತಿಂಗಳಿನಲ್ಲಿ ಅಂತ್ಯವಾಗಬೇಕಿದ್ದ ಕೆಲವು ವಿಶೇಷ ರೈಲುಗಳು ಸೆಪ್ಟೆಂಬರ್ ತನಕ ಸಂಚಾರ ನಡೆಸಲಿವೆ. ಪೂರ್ವ ಮಧ್ಯ ರೈಲ್ವೆ ವಲಯದ ಸೂಚನೆಯಂತೆ ರೈಲು ಸೇವೆ ಮುಂದುವರೆಸಲಾಗುತ್ತಿದೆ ಎಂದು ಆದೇಶ ಹೇಳಿದೆ.

ಒಟ್ಟು 10 ವಿಶೇಷ ರೈಲುಗಳು ಸಾಪ್ತಾಹಿಕ, ದ್ವಿ-ಸಾಪ್ತಾಹಿಕ ರೈಲುಗಳಾಗಿವೆ. ಸೆಪ್ಟೆಂಬರ್ ತಿಂಗಳ ಎಷ್ಟು ದಿನ ರೈಲುಗಳು ಸಂಚಾರ ನಡೆಸುತ್ತವೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ರೈಲು ಪ್ರಯಾಣ ಮಾಡುವ ಜನರು ಈ ಬಗ್ಗೆ ಮಾಹಿತಿ ತಿಳಿದು ಸಂಚಾರ ನಡೆಸಬಹುದಾಗಿದೆ.
ವಿಸ್ತರಣೆಯಾದ ರೈಲುಗಳ ಪಟ್ಟಿ
1. ರೈಲು ನಂಬರ್ 03245 ದಾನಾಪುರ-ಎಸ್‌ಎಂವಿಟಿ, ಬೆಂಗಳೂರು. ಸಾಪ್ತಾಹಿಕವಾಗಿ (ಬುಧವಾರ) ಸಂಚಾರ ನಡೆಸುವ ರೈಲು ಸೇವೆಯನ್ನು ಈ ಹಿಂದೆ 16/8/2023ರ ತನಕ ಓಡಿಸಲು ತೀರ್ಮಾನಿಸಲಾಗಿತ್ತು. ಈಗ 23/8/2023 ರಿಂದ 27/9/2023ರ ತನಕ ವಿಸ್ತರಣೆ ಮಾಡಲಾಗಿದೆ. ರೈಲು 6 ಟ್ರಿಪ್‌ಗಳಲ್ಲಿ ಸಂಚಾರ ನಡೆಸಲಿದೆ.
2. ರೈಲು ನಂಬರ್ 03246. ಎಸ್ಎಂವಿಟಿ-ದಾನಾಪುರ. ಸಾಪ್ತಾಹಿಕ (ಶುಕ್ರವಾರ). ಮೊದಲು 18/8/2023ರ ತನಕ ಓಡಿಸಲು ತೀರ್ಮಾನಿಸಲಾಗಿತ್ತು. ಈಗ 25/8/2023 ರಿಂದ 29/9/2023ರ ತನಕ 6 ಟ್ರಿಪ್ ಸಂಚಾರ ನಡೆಸಲಿದೆ.
3. ರೈಲು ನಂಬರ್ 03251. ದಾನಾಪುರ-ಎಸ್‌ಎಂವಿಟಿ, ಬೆಂಗಳೂರು. ದ್ವಿ-ಸಾಪ್ತಾಹಿಕ (ಭಾನುವಾರ, ಸೋಮವಾರ). ಮೊದಲು 21/8/2023ರ ತನಕ ಓಡಿಸಲು ತೀರ್ಮಾನಿಸಲಾಗಿತ್ತು. ಈಗ 27/8/2023 ರಿಂದ 25/9/2023ರ ತನಕ 10 ಟ್ರಿಪ್ ಸಂಚರಿಸಲಿದೆ.
4. ರೈಲು ನಂಬರ್ 03252. ಎಸ್‌ಎಂವಿಟಿ, ಬೆಂಗಳೂರು-ದಾನಾಪುರ. ದ್ವಿ-ಸಾಪ್ತಾಹಿಕ (ಮಂಗಳವಾರ, ಬುಧವಾರ). ಮೊದಲು 23/8/2023ರ ತನಕ ಓಡಿಸಲು ಆದೇಶಿಸಲಾಗಿತ್ತು. ಈಗ 28/8/2023 ರಿಂದ 27/9/2023ರ ತನಕ ಒಟ್ಟು 10 ಟ್ರಿಪ್ ರೈಲು ಓಡಲಿದೆ.
5. ರೈಲು ಸಂಖ್ಯೆ 30259. ದಾನಾಪುರ-ಎಸ್‌ಎಂವಿಟಿ, ಬೆಂಗಳೂರು. ಸಾಪ್ತಾಹಿಕ (ಮಂಗಳವಾರ). ಮೊದಲು 29/8/2023ರ ತನಕ ರೈಲು ಓಡಿಸಲು ತೀರ್ಮಾನಿಸಲಾಗಿತ್ತು. ಈಗ 5/9/2023 ರಿಂದ 26/9/2023ರ ತನಕ ವಿಸ್ತರಣೆ ಮಾಡಲಾಗಿದ್ದು, 4 ಟ್ರಿಪ್ ಸಂಚಾರ ನಡೆಸಲಿದೆ.
6. ರೈಲು ಸಂಖ್ಯೆ 03260. ಎಸ್‌ಎಂವಿಟಿ, ಬೆಂಗಳೂರು-ದಾನಾಪುರ. ಸಾಪ್ತಾಹಿಕ (ಗುರುವಾರ). ಮೊದಲು 31/8/2023ರ ತನಕ ರೈಲು ಓಡಿಸಲು ತೀರ್ಮಾನಿಸಲಾಗಿತ್ತು. ಈಗ 7/9/2023 ರಿಂದ 28/9/2023ರ ತನಕ 4 ಟ್ರಿಪ್ ರೈಲು ಸಂಚಾರ ವಿಸ್ತರಣೆ ಮಾಡಲಾಗಿದೆ.
7. ರೈಲು ಸಂಖ್ಯೆ 03247. ದಾನಾಪುರ-ಎಸ್‌ಎಂವಿಟಿ, ಬೆಂಗಳೂರು. ಸಾಪ್ತಾಹಿಕ (ಗುರುವಾರ). ಮೊದಲು 31/8/2023ರ ತನಕ ರೈಲು ಓಡಿಸಲು ತೀರ್ಮಾನಿಸಲಾಗಿತ್ತು. ಈಗ 7/9/2023 ರಿಂದ 28/9/2023ರ ತನಕ 4 ಟ್ರಿಪ್ ವಿಸ್ತರಣೆ ಮಾಡಿ ಆದೇಶಿಸಲಾಗಿದೆ.
8. ರೈಲು ಸಂಖ್ಯೆ 03248. ಎಸ್‌ಎಂವಿಟಿ, ಬೆಂಗಳೂರು-ದಾನಾಪುರ. ಸಾಪ್ತಾಹಿಕ (ಶನಿವಾರ). ಮೊದಲು 2/9/2023ರ ತನಕ ಓಡಿಸಲು ತೀರ್ಮಾನಿಸಲಾಗಿತ್ತು. ಈಗ 9/92023 ರಿಂದ 30/9/2023ರ ತನಕ 4 ಟ್ರಿಪ್ ಓಡಿಸಲು ಆದೇಶಿಸಲಾಗಿದೆ.
9. ರೈಲು ಸಂಖ್ಯೆ 05215. ಬರೌನಿ-ಯಶವಂತಪುರ. ಸಾಪ್ತಾಹಿಕ (ಶನಿವಾರ). ಮೊದಲು 12/8/2023 ತನಕ ಓಡಿಸಲು ತೀರ್ಮಾನಿಸಲಾಗಿತ್ತು. ಈಗ 19/8/2023ರಿಂದ 30/9/2023ರ ತನಕ 7 ಟ್ರಿಪ್ ಸಂಚಾರ ನಡೆಸಲಿದೆ.
10. ರೈಲು ಸಂಖ್ಯೆ 05216 ಯಶವಂತಪುರ-ಬರೌನಿ. ಸಾಪ್ತಾಹಿಕ (ಮಂಗಳವಾರ). ಮೊದಲು 15/8/2023ರ ತನಕ ಓಡಿಸಲು ತೀರ್ಮಾನಿಸಲಾಗಿತ್ತು. ಈಗ 22/8/2023 ರಿಂದ 3/10/2023ರ ತನಕ 7 ಟ್ರಿಪ್ ಓಡಿಸಲು ತೀರ್ಮಾನಿಸಲಾಗಿದೆ.











Click it and Unblock the Notifications