SWR: ರಾಜಧಾನಿಯಿಂದ ಹೊರಡುವ ವಿವಿಧ ಎಕ್ಸ್‌ಪ್ರೆಸ್ ರೈಲುಗಳ ಸೇವೆ ವಿಸ್ತರಣೆ, ವೇಳಾಪಟ್ಟಿ

ಬೆಂಗಳೂರು, ಜುಲೈ 03: ಕರ್ನಾಟಕದಲ್ಲಿ ರೈಲ್ವೆ ಸೇವೆ ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ಉತ್ತಮ ಸೇವೆ ಹಾಗೂ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಯು ಕಾರಣವಾಗಿರಬಹುದು. ರಾಜ್ಯದಲ್ಲಿ ರೈಲ್ವೆ ವಿದ್ಯುದೀಕರಣ ಪೂರ್ಣಗೊಂಡಿದೆ. ದ್ವಿಪಥ ರೈಲ್ವೆ ಹಳಿ ಕಾಮಗಾರಿ ಸಹ ಮುಗಿದಿದೆ. ಹೊಸ ರೈಲ್ವೆ ಯೋಜನೆಗಳು ಜಾರಿ ಮಾಡಲಾಗುತ್ತಿದೆ. ಈ ಮಧ್ಯೆ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿರುವ ಕಾರಣ ನೈಋತ್ಯ ರೈಲ್ವೆ (SWR) ಬೆಂಗಳೂರಿನಿಂದ ಇತರ ಕಡೆಗಳಿಗೆ ಹೊರಡುವ ಎಕ್ಸ್‌ಪ್ರೆಸ್ ರೈಲುಗಳ ಸೇವೆ ವಿಸ್ತರಣೆ ಮಾಡಿದೆ.

SWR ಪ್ರಕಾರ, ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಭಾಯಿಸಲು, ನೈಋತ್ಯ ಸೇವೆಯು ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ (SMVT) ಬೆಂಗಳೂರು ಮತ್ತು ಬೀದರ್, ನಾರಂಗಿ ಹಾಗೂ ಮಾಲ್ಡಾ ಟೌನ್ ನಡುವೆ ಈ ಹಿಂದೆ ಚಲಿಸುತ್ತಿದ್ದ ವಿಶೇಷ ರೈಲು ಸೇವೆಗಳನ್ನು ಈಗಿರುವ ಸಮಯ, ನಿಲುಗಡೆಗಳು ಮತ್ತು ಬೋಗಿಗಳ ಸಂಯೋಜನೆ ಸಹಿತ ಮುಂದಿನ ಆದೇಶವರಗೆ ವಿಸ್ತರಣೆ ಮಾಡಲಾಗಿದೆ. ಪ್ರಮುಖ ದಿನಾಂಕಗಳು, ವೇಳಾಪಟ್ಟಿ ಮಾಹಿತಿ.

SWR did Expansion of Express Train Service between Bengaluru SMVT-Bidar-Narangi-Malda Town

ಬೆಂಗಳೂರು SMVT- ಬೀದರ್-ಬೆಂಗಳೂರು ಎಕ್ಸ್‌ಪ್ರೆಸ್ ರೈಲು ವಿಸ್ತರಣೆ

* ಎಸ್‌ಎಂವಿಟಿ ಬೆಂಗಳೂರು - ಬೀದರ್ ಎಕ್ಸ್‌ಪ್ರೆಸ್ ವಿಶೇಷ ರೈಲು (ಸಂಖ್ಯೆ 06539) ಶುಕ್ರವಾರ ಮತ್ತು ಭಾನುವಾರ ಮುಂದುವರಿಯಲಿದೆ. ಈ ಹಿಂದೆ 29.06.2025 ರವರೆಗೆ ಕಾರ್ಯನಿರ್ವಹಿಸಲು ತಿಳಿಸಲಾಗಿತ್ತು. ಇದೀಗ ಆ ಸೇವೆಯನ್ನು ಜುಲೈ 04 ರಿಂದ ಆಗಸ್ಟ್ 31, 2025 ರವರೆಗೆ ವಿಸ್ತರಣೆ ಮಾಡಲಾಗಿದೆ.

* ​​ಬೀದರ್ - ಎಸ್‌ಎಂವಿಟಿ ಬೆಂಗಳೂರು ಎಕ್ಸ್‌ಪ್ರೆಸ್ ವಿಶೇಷ ರೈಲು (ಸಂಖ್ಯೆ 06540) ಶನಿವಾರ ಮತ್ತು ಸೋಮವಾರ ತನ್ನ ಸೇವೆ ಮುಂದುವರಿಸಲಿದೆ. ಈ ಹಿಂದೆ 30.06.2025 ರವರೆಗೆ ಕಾರ್ಯನಿರ್ವಹಿಸಲು ತಿಳಿಸಲಾಗಿತ್ತು. ಇದೀಗ ಆ ಸೇವೆಯನ್ನು ಜಲೈ 05 ರಿಂದ ಸೆಪ್ಟಂಬರ್ 01, 2025 ರವರೆಗೆ ವಿಸ್ತರಣೆ ಮಾಡಲಾಗಿದೆ. ಈ ರೈಲುಗಳು ಪ್ರತಿ ಟ್ರಿಪ್‌ನಲ್ಲಿ 18 ಟ್ರಿಪ್ ಸಂಚರಿಸಲಿವೆ ಎಂದು SWR ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಎಸ್‌ಎಂವಿಟಿ ಬೆಂಗಳೂರು-ನಾರಂಗಿ ಎಕ್ಸ್‌ಪ್ರೆಸ್ ರೈಲು ವಿಸ್ತರಣೆ

* ಎಸ್‌ಎಂವಿಟಿ ಬೆಂಗಳೂರು ನಾರಂಗಿ ಎಕ್ಸ್‌ಪ್ರೆಸ್ ವಿಶೇಷ ರೈಲು (06559) ಮಂಗಳವಾರದಿಂದ ಸಂಚಾರ ಮುಂದುವರಿಸಲಿದೆ. ಈ ಹಿಂದೆ 10.06.2025ಕ್ಕೆ ಸಂಚಾರ ನಡೆಸುವುದಾಗಿ ತಿಳಿಸಲಾಗಿತ್ತು. ಸದ್ಯ ಆ ರೈಲನ್ನು ಜುಲೈ 08ರಿಂದ ಜುಲೈ 15ರವರೆಗೆ ವಿಸ್ತರಣೆ ಮಾಡಲಾಗಿದೆ.

* ರೈಲು ಸಂಖ್ಯೆ 06560 ನಾರಂಗಿ - ಎಸ್‌ಎಂವಿಟಿ ಬೆಂಗಳೂರು ಎಕ್ಸ್‌ಪ್ರೆಸ್ ವಿಶೇಷ ರೈಲು ಶನಿವಾರದಂದು ಸಂಚಾರ ಮುಂದುವರಿಸಲಿದೆ. ಜೂನ್ 14ರವರೆಗೆ ಸಂಚರಿಸಿದ್ದ ಈ ರೈಲಿನ ಸೇವೆಯನ್ನು ಜುಲೈ 12ರಿಂದ ಜುಲೈ 19ರವರೆಗೆ ವಿಸ್ತರಣೆ ಮಾಡಲಾಗಿದೆ. ಈ ಎರಡು ರೈಲುರಳು (06559/06560) ಈ ವಿಸ್ತರಣೆಯ ಅವಧಿಯಲ್ಲಿ ಪ್ರತಿ ದಿಕ್ಕಿನಲ್ಲಿ 2 ಟ್ರಿಪ್ ಸಂಚರಿಲಿವೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

SMVT ಬೆಂಗಳೂರು-ಮಾಲ್ಡಾ ಟೌನ್-ಬೆಂಗಳೂರು ಎಕ್ಸ್‌ಪ್ರೆಸ್ ರೈಲು

* ಎಸ್‌ಎಂವಿಟಿ ಬೆಂಗಳೂರು ಮಾಲ್ಡಾ ಟೌನ್ ಎಕ್ಸ್‌ಪ್ರೆಸ್ ವಿಶೇಷ ರೈಲು (06565) ಜೂನ್ 15ರತನಕ ಸೇವೆ ನೀಡಿದ್ದು, ಇದೀಗ ಆ ರೈಲಿನ ಸೇವೆಯನ್ನು ವಿಸ್ತರಣೆ ಮಾಡಲಾಗಿದೆ. ಜುಲೈ 13ರಂದು ಭಾನುವಾರ ಸಂಚಾರ ಮಾಡಲಿದೆ.

* ಮಾಲಾ ಟೌನ್ - ಎಸ್‌ಎಂವಿಟಿ ಬೆಂಗಳೂರು ಎಕ್ಸ್‌ಪ್ರೆಸ್ ರೈಲು (06566) ಜೂನ್ 18ರ ತನಕೆ ಸೇವೆ ನೀಡಿದೆ. ಆ ರೈಲಿನ ಸೇವೆಯನ್ನು ವಿಸ್ತರಿಸಲಾಗಿದ್ದು, ಜುಲೈ 16 ರಂದು ಬುಧವಾರ ಸಂಚರಿಸಲಿದೆ. ಆಯಾ ದಿನಗಳಲ್ಲಿ ಈ ಎರಡು ರೈಲು ತಲಾ ಒಂದು ಟ್ರಿಪ್ ಸಂಚಾರ ಸೇವೆ ನೀಡಲಿವೆ. ನಿಲುಗಡೆ ನಿಲ್ದಾಣಗಳಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ನೈಋತ್ಯ ರೈಲ್ವೆ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+