ನಾಳೆ, ನಾಡಿದ್ದು ಬೆಂಗಳೂರಿನಿಂದ ಪ್ರಮುಖ ನಗರಗಳಿಗೆ 09 ವಿಶೇಷ ರೈಲು ವ್ಯವಸ್ಥೆ, ಮಾರ್ಗಗಳ ವಿವರ
ಬೆಂಗಳೂರು, ಅಕ್ಟೋಬರ್ 26: ದೀಪಾವಳಿ ಹಬ್ಬದ ಪ್ರಯುಕ್ತ ಪ್ರಯಾಣಿಕರ ದಟ್ಟಣೆಯನ್ನು ನಿಭಾಯಿಸಲು ಮತ್ತು ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಲು ನೈಋತ್ಯ ರೈಲ್ವೆಯು (SWR) ಬೆಂಗಳೂರಿನಿಂದ ಹಲವು ಹಬ್ಬದ ವಿಶೇಷ ರೈಲುಗಳ ಕಾರ್ಯಾಚರಣೆ ಘೋಷಿಸಿದೆ. 2025 ಅಕ್ಟೋಬರ್ 27 ಮತ್ತು 28 ರಂದು ಈ ರೈಲುಗಳು ಸಂಚರಿಸಲಿವೆ ಎಂದು ರೈಲ್ವೆ ಅಧಿಕಾರಿಗಳು ಭಾನುವಾರ ಮಾಹಿತಿ ನೀಡಿದ್ದಾರೆ.
ಈ ವಿಶೇಷ ರೈಲುಗಳು ಪ್ರಮುಖವಾಗಿ ಉತ್ತರ ಮತ್ತು ಪೂರ್ವ ಭಾರತದ ನಗರಗಳಾದ ದಾನಾಪುರ, ಭುವನೇಶ್ವರ, ವಿಶಾಖಪಟ್ಟಣಂ, ಗೋಮತಿ ನಗರ, ಹಾಗೂ ಲಾಲಕುನ್ ಜಂಕ್ಷನ್‌ಗೆ ಸಂಪರ್ಕ ಒದಗಿಸುತ್ತವೆ. ಕೇರಳದ ತಿರುವನಂತಪುರಂ ನಾರ್ತ್‌ಗೂ ಒಂದು ವಿಶೇಷ ರೈಲು ಲಭ್ಯವಿದೆ.

2025 ಅಕ್ಟೋಬರ್ 27 ರಂದು ಐದು ರೈಲುಗಳು ಹೊರಡಲಿವೆ. ಇದರಲ್ಲಿ ಯಶವಂತಪುರ-ಭುವನೇಶ್ವರ (02812) ಮತ್ತು ಎಸ್‌ಎಂವಿಟಿ ಬೆಂಗಳೂರು-ದಾನಾಪುರ (03242) ರೈಲುಗಳು ಸೇರಿವೆ. 2025 ಅಕ್ಟೋಬರ್ 28ರಂದು ನಾಲ್ಕು ರೈಲುಗಳು ಸಂಚರಿಸಲಿವೆ. ಈ ದಿನ ಎಸ್‌ಎಂವಿಟಿ ಬೆಂಗಳೂರು-ನಾರಂಗಿ (06559) ಮತ್ತು ಕೆಎಸ್‌ಆರ್ ಬೆಂಗಳೂರು-ಲಾಲಕುನ್ ಜಂಕ್ಷನ್ (05073) ರೈಲುಗಳು ಹೊರಡಲಿವೆ.
ಪ್ರಯಾಣಿಕರು ಈ ರೈಲುಗಳ ನಿಖರವಾದ ವೇಳಾಪಟ್ಟಿ, ನಿಲುಗಡೆಗಳು ಮತ್ತು ಇತರ ವಿವರಗಳನ್ನು ಪಡೆಯಲು ಅಧಿಕೃತ ವೆಬ್‌ಸೈಟ್ www.enquiry.indianrail.gov.in ಗೆ ಭೇಟಿ ನೀಡಬಹುದು ಅಥವಾ NTES ಆ್ಯಪ್ ಬಳಸಿ ಅಥವಾ 139 ಗೆ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ. ದೀಪಾವಳಿಯ ಶುಭ ಸಂದರ್ಭದಲ್ಲಿ ಲಕ್ಷಾಂತರ ಪ್ರಯಾಣಿಕರಿಗೆ ಈ ವಿಶೇಷ ರೈಲುಗಳು ಅನುಕೂಲ ಕಲ್ಪಿಸಲಾಗಿದೆ.
ವಿಶೇಷ ರೈಲುಗಳ ಪಟ್ಟಿ
* ಯಶವಂತಪುರ - ಭುವನೇಶ್ವರ ವಿಶೇಷ ರೈಲು (02812): ಅಕ್ಟೋಬರ್ 27
* SMVT ಬೆಂಗಳೂರು - ದಾನಪುರ ವಿಶೇಷ ರೈಲು (03242) ಅಕ್ಟೋಬರ್ 27
* SMVT ಬೆಂಗಳೂರು - ತಿರುವನಂತಪುರಂ ಉತ್ತರ ವಿಶೇಷ ರೈಲು (06523) ಅಕ್ಟೋಬರ್ 27
* SMVT ಬೆಂಗಳೂರು - ಗೋಮತಿ ವಿಶೇಷ ರೈಲು (06529) ಅಕ್ಟೋಬರ್ 27
* SMVT ಬೆಂಗಳೂರು - ವಿಶಾಖಪಟ್ಟಣಂ ವಿಶೇಷ ರೈಲು (08582) ಅಕ್ಟೋಬರ್ 27
* SMVT ಬೆಂಗಳೂರು - ದಾನಾಪುರ ವಿಶೇಷ ರೈಲು (0325) ಅಕ್ಟೋಬರ್ 28
* ಯಶವಂತಪುರ - ದಾನಾಪುರ ವಿಶೇಷ ರೈಲು (03262) ಅಕ್ಟೋಬರ್ 28
* KSR ಬೆಂಗಳೂರು - ಲಕುನ್ ಜಂಕ್ಷನ್ ವಿಶೇಷ ರೈಲು (05073) ಅಕ್ಟೋಬರ್ 28
* SMVT ಬೆಂಗಳೂರು - ನಾರಂಗಿ ವಿಶೇಷ ರೈಲು (06559) ಅಕ್ಟೋಬರ್ 28












Click it and Unblock the Notifications