SWR: ದಸರಾ ಪ್ರಯುಕ್ತ ಮೈಸೂರಿನಿಂದ ವಿವಿಧ ಮಾರ್ಗಗಳಲ್ಲಿ ವಿಶೇಷ ರೈಲುಗಳ ಕಾರ್ಯಾಚರಣೆ, ವೇಳಾಪಟ್ಟಿ
South Western Railway: ದಸರಾ ಹಬ್ಬದ ಪ್ರಯುಕ್ತ ಮೈಸೂರಿಗೆ ಬರುವವರು ಮತ್ತು ಇಲ್ಲಿಂದ ರಾಜ್ಯದ ಬೇರೆಡೆಗೆ ತೆರಳುವವರ ಸಂಖ್ಯೆ ಹೆಚ್ಚಿರುತ್ತದೆ. ಈ ಸಂಬಂಧ ನೈಋತ್ಯ ರೈಲ್ವೆ (SWR) ಮೈಸೂರು ವಿಭಾಗವು ಪ್ರಯಾಣಿಕರ ಅನುಕೂಲಕ್ಕಾಗಿ ಹಲವು ವಿಶೇಷ ರೈಲುಗಳನ್ನು ಸಂಚಾರಕ್ಕೆ ಬಿಟ್ಟಿದೆ. ಸೆಪ್ಟೆಂಬರ್ 27ರಿಂದಲೇ ಸಂಚಾರ ಆರಂಭಿಸಿದ್ದು, ಅಕ್ಟೋಬರ್ 6ರವರೆಗೆ ಈ ವಿಶೇಷ ರೈಲುಗಳು ಮೈಸೂರು ಸೇರಿದಂತೆ ವಿವಿಧ ಮಾರ್ಗಗಳಲ್ಲಿ ಸಂಚರಿಸಲಿವೆ.
ಬೆಂಗಳೂರು ಮಾರ್ಗದಲ್ಲಿ ನೋಡುವುದಾರೆ, ಮೈಸೂರಿನಿಂದ ಬೆಂಗಳೂರು ಕಡೆ ಹಲವು ರೈಲುಗಳು ವ್ಯವಸ್ಥೆಯಾಗಿದೆ. ಬೆಳಗ್ಗೆ 8 ಗಂಟೆಗೆ ಮೈಸೂರು-ಬೆಂಗಳೂರು ವಿಶೇಷ (06284), ಸಂಜೆ 4.20ಕ್ಕೆ ಅಶೋಕಪುರಂ-ಬೆಂಗಳೂರು (06286) ರೈಲುಗಳು ಸಂಚರಿಸಲಿವೆ. ಜೊತೆಗೆ ಮೈಸೂರಿನಿಂದ ತಿರುವನೇಲಿ, ಕಾರೈಕುಡಿ, ಎಸ್‌ಎಂವಿಬಿ, ಸಿಕಂದರಾಬಾದ್, ಧಾರವಾಡ, ಅಜ್ಮೇರ್ ಮತ್ತು ಬೆಳಗಾವಿಗೆ ಸಂಪರ್ಕ ಕಲ್ಪಿಸುವ ರೈಲುಗಳು ಸಂಚರಿಸಲಿವೆ. ಅಗತ್ಯತೆ ನೋಡಿಕೊಂಡು ಪ್ರಯಾಣಿಕರು ಸಂಚಾರ ಮಾಡಬೇಕಿದೆ.

ಚಾಮರಾಜನಗರ ಮಾರ್ಗ
ಗಡಿ ಜಿಲ್ಲೆಯಾದ ಚಾಮರಾಜನಗರ ಮಾರ್ಗವಾಗಿ ವಿಶೇಷ ರೈಲು ಸಂಚರಿಸಲಿದೆ. ಮೈಸೂರಿನಿಂದ ಹಾಗೂ ಬೆಂಗಳೂರು-ಚಾಮರಾಜನಗರ ನಡುವೆಯೂ ವಿಶೇಷ ರೈಲುಗಳು ಕಾರ್ಯಾಚರಣೆ ಮಾಡಲಿವೆ. 06293 ಮತ್ತು 06289 ರೈಲುಗಳು ಸೆಪ್ಟೆಂಬರ್ 27ರಿಂದ ಅಕ್ಟೋಬರ್ 5ರವರೆಗೆ ಸಂಚಾರ ಮಾಡಲಿವೆ.
ಹಾಸನ-ಅರಸಿಕೇರೆಯ ಮಾರ್ಗದಲ್ಲಿ ರೈಲು
ಮೈಸೂರು ದಸರಾ ಮುಗಿಸಿ ತೆರಳುವವರಿಗೆ ಮೈಸೂರಿನಿಂದ ಅರಸಿಕೇರೆಯವರೆಗೆ (06296) ವಿಶೇಷ ರೈಲು ಲಭ್ಯವಿದೆ. ಈ ರೈಲು ಸೆಪ್ಟೆಂಬರ್ 27ರಿಂದಲೇ ಸೇವೆ ಆರಂಭಿಸಿದ್ದು, ಅಕ್ಟೋಬರ್ 2ರವರೆಗೆ ಲಭ್ಯವಿರಲಿದೆ. ಸಂಜೆ 6.50ಕ್ಕೆ ಅರಸಿಕೇರೆಯಲ್ಲಿ ತಲುಪಲಿದೆ.
ಪ್ರಯಾಣಿಕರಿಗೆ ಅನುಕೂಲ
ಮೈಸೂರು ದಸರಾ ಆಚರಣೆ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಮನಗಂಡು ರೈಲ್ವೆ ಇಲಾಖೆ ಈ ವಿಶೇಷ ರೈಲುಗಳನ್ನು ಚಾಲನೆ ಮಾಡುತ್ತಿದೆ. ಬೆಂಗಳೂರು, ಹಾಸನ, ಅರಸಿಕೇರೆಯ ಜೊತೆಗೆ ತಮಿಳುನಾಡು, ಆಂಧ್ರ, ರಾಜಸ್ಥಾನ ಸೇರಿದಂತೆ ಹಲವು ರಾಜ್ಯಗಳಿಗೆ ರೈಲು ಸಂಪರ್ಕ ಲಭ್ಯವಾಗಲಿದೆ. ಇದರಿಂದ ದಟ್ಟಣೆ ನಿವಾರಣೆ ಜೊತೆಗೆ ಸೂಕ್ತ ಸಮಯಕ್ಕೆ ಮರಳಿ ತಮ್ಮೂರು ತಲುಪಲು ಸಾಧ್ಯವಾಗುತ್ತದೆ.
ರೈಲ್ವೆ ಅಧಿಕಾರಿಗಳ ಪ್ರಕಾರ, ಈ ವಿಶೇಷ ರೈಲುಗಳಿಗೆ ಸಾಮಾನ್ಯ ಹಾಗೂ ರಿಸರ್ವೇಶನ್ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಆನ್‌ಲೈನ್ ಹಾಗೂ ಕೌಂಟರ್ ಮೂಲಕ ಮುಂಗಡ ಟಿಕೆಟ್ ಬುಕ್ಕಿಂಗ್ ಆರಂಭವಾಗಿದ್ದು, ಪ್ರಯಾಣಿಕರು ತಮ್ಮ ಪ್ರಯಾಣವನ್ನು ಮುಂಚಿತವಾಗಿ ಯೋಜಿಸಲು ವಿನಂತಿಸಲಾಗಿದೆ. ದಸರಾ ಉತ್ಸವದ ಸಮಯದಲ್ಲಿ ಯಾವುದೇ ಅಡಚಣೆ ಉಂಟಾಗದಂತೆ ನಿಲ್ದಾಣಗಳಲ್ಲಿ ಹೆಚ್ಚುವರಿ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ SWR ಮಾಹಿತಿ ನೀಡಿದೆ.












Click it and Unblock the Notifications