ಬೆಂಗಳೂರಲ್ಲಿ 10 ದಿನಗಳಲ್ಲಿ 23 ಎಚ್1ಎನ್1 ಪ್ರಕರಣ ಪತ್ತೆ
ಬೆಂಗಳೂರು, ಅಕ್ಟೋಬರ್ 8: ಬೆಂಗಳೂರಿನಲ್ಲಿ 10 ದಿನಗಳಲ್ಲಿ 23 ಎಚ್1ಎನ್1 ಪ್ರಕರಣಗಳು ಬೆಳಕಿಗೆ ಬಂದಿವೆ. ಇದು ಐಟಿ ಸಂಸ್ಥೆಗಳು ಹೆಚ್ಚಾಗಿರುವ ಮಹದೇವಪುರದಲ್ಲಿ ಕಾಣಿಸಿಕೊಂಡಿದೆ.
ನಗರ ಜಿಲ್ಲಾ ಆರೋಗ್ಯಾಧಿಕಾರಿಗಳು ಈ ಕುರಿತು ಸಮೀಕ್ಷೆ ನಡೆಸಿದ್ದು, ಸುಮಾರು 150 ಕುಟುಂಬಗಳಲ್ಲಿ ರೋಗದ ಲಕ್ಷಣಗಳು ಗೋಚರವಾಗಿದ್ದು, ಮಾತ್ರೆಗಳನ್ನು ವಿತರಿಸಲಾಗಿದೆ. ರಾಜ್ಯದಲ್ಲಿ ಈವರೆಗೆ 314 ಪ್ರಕರಾಣಗಳು ವರದಿಯಾಗಿದ್ದು ಅದರಲ್ಲಿ ಬೆಂಗಳೂರಲ್ಲಿ 76 ಪ್ರಕರಣಗಳು ಪತ್ತೆಯಾಗಿದೆ.
ಬೆಂಗಳೂರಿನ ಸಿಂಗಸಂದ್ರ, ಕೋಣನಕುಂಟೆ, ಬೇಗೂರು, ದೊಮ್ಮಸಂದ್ರ, ಎಂಎಸ್ ಪಾಳ್ಯ, ಆವಲಹಳ್ಳಿ, ಕಾಡುಗೋಡಿ, ಸಿದ್ದಾಪುರ, ಕೋಡಿ, ವರ್ತೂರು ಮಹದೇವಪುರ ವ್ಯಾಪ್ತಿಯಲ್ಲಿ ಹೆಚ್ಚು ಪ್ರಕರಣಗಳು ದಾಖಲಾಗಿದೆ.

ಡೆಂಗ್ಯೂ 313, ಚಿಕೂನ್ ಗುನ್ಯ 26 ಪ್ರಕರಣಗಳು ಜನವರಿಯಿಂದ ಅಕ್ಟೋಬರ್ ವರೆಗೆ ಪತ್ತೆಯಾಗಿದೆ. ತಾಲೂಕು, ಜಿಲ್ಲಾ ಆಸ್ಪತ್ರೆಗಳು ಸೇರಿದಂತೆ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಟಾಮಿಪ್ಲೊ ಮಾತ್ರೆ ಸೇರಿದಂತ ಅಗತ್ಯ ವೈದ್ಯಕೀಯ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ.












Click it and Unblock the Notifications