SWIFT City: 400 ಎಕ್ರೆ ಭೂಸ್ವಾಧೀನ ನೋಟಿಸ್ ಪಡೆದ ರೈತರಿಂದ ಭಾರೀ ವಿರೋಧ, ಅಸಲಿ ಕಾರಣವೇನು?

ಬೆಂಗಳೂರು, ಜನವರಿ 02: ಕರ್ನಾಟಕ ಕೈಗಾರಿಕೆ ಬೆಳವಣಿಗೆಗೆ ಪೂರಕವಾಗಿ ರಾಜ್ಯ ಸರ್ಕಾರ ಬರೋಬ್ಬರಿ 1000 ಎಕರೆ ಪ್ರದೇಶದಲ್ಲಿ ಹೊಸ ನಗರ ನಿರ್ಮಿಸಲು ಮುಂದಾಗಿದೆ. ಈ ಸಂಬಂಧ ರೈತರಿಗೆ ನೂರಾರು ಎಕ್ರೆ ಜಮೀನನ್ನು ಭೂಸ್ವಾಧೀನ ಮಾಡಿಕೊಳ್ಳಲಾಗುವುದಾಗಿ ಹೇಳಿ ನೋಟಿಸ್ ಜಾರಿ ಮಾಡಿದೆ. ಇದಕ್ಕೆ ನೀರಾವರಿ ಜಮೀನಿರುವ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರದ ವಿರುದ್ಧ ಪ್ರತಿಭಟನೆಗೆ ಸಿದ್ಧವೆಂದು ಎಚ್ಚರಿಸಿದ್ದಾರೆ.

ನಗರದ ಆನೇಕಲ್ ತಾಲ್ಲೂಕಿನ ಸರ್ಜಾಪುರ ವ್ಯಾಪ್ತಿಯಲ್ಲಿ 1,050 ಎಕರೆಯಲ್ಲಿ ರಾಜ್ಯ ಕೈಗಾರಿಕೆ ಇಲಾಖೆಯು ''ಸ್ವಿಫ್ಟ್ ಸಿಟಿ'' (SWIFT City -Startups, Work-spaces, Innovation, Finance, and Technology) ನಿರ್ಮಾಣಕ್ಕೆ ಮುಂದಾಗಿದೆ. ಇದು ಮತ್ತೊಂದು ಎಲೆಕ್ಟ್ರಾನಿಕ್ ಸಿಟಿ, ಐಟಿಪಿಎಲ್‌ನಂತಹ ಬೃಹತ್ ಸ್ಥಾಪಿಸಲು ಉದ್ದೇಶಿಸಲಾಗಿದೆ. ಭುಸ್ವಾಧೀನಕ್ಕಾಗಿ ಇತ್ತೀಚೆಗೆ ರೈತರಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು THNE ವರದಿ ಮಾಡಿದೆ.

SWIFT City Project Farmers Opposed Land Acquisition after KIADB Notice Issued

ಕೈಗಾರಿಕೆ ಬೆಳವಣಿಗೆ ಉದ್ದೇಶದಿಂದ ಈ ಸ್ವಿಫ್ಟ್ ಸಿಟಿ ನಿರ್ಮಿಸಲಾಗುತ್ತಿದೆ ಎಂದಿರುವ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (KIAB) ರೈತರಿಗೆ ಬಿ.ಹೊಸಹಳ್ಳಿಯಲ್ಲಿ 400 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗುವುದು ಎಂದು ನೋಟಿಸ್ ನಲ್ಲಿ ತಿಳಿಸಲಾಗಿದೆ. ಇದಕ್ಕೆ ಗರಂ ಆಗಿರುವ ರೈತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಉಲ್ಟಾ ಹೊಡೆಯಿತಾ ಸರ್ಕಾರ?

ಸರ್ಜಾಪುರದಲ್ಲಿ ಉದ್ದೇಶಿತ ಯೋಜನೆಗೆ 1,050 ಎಕರೆ ಭೂಮಿ ಬೇಕು. ಒಣ ಭೂಮಿಯಲ್ಲಿ ಜಮೀನು ಸ್ವಾಧೀನಪಡಿಸಿಕೊಂಡು ಸ್ವಿಫ್ಟ್ ಸಿಟಿ ನಿರ್ಮಿಸುವುದಾಗಿ ಹೇಳಿದ್ದ ಸರ್ಕಾರ, ಬಿ.ಹೊಸಹಳ್ಳಿಯ ನೀರಾವರಿ ರೈತರಿಗೆ ಭೂಸ್ವಾಧೀನದ ನೋಟಿಸ್ ನೀಡಿದೆ.

ಈ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಬಿ.ಹೊಸಹಳ್ಳಿ ಗ್ರಾಮದ ನಿವಾಸಿಯೊಬ್ಬರು, ಹಿರಿಯರಿಂದ ನನಗೆ 03 ಎಕರೆ 16 ಗುಂಟೆ ಜಮೀನು ದೊರೆತಿದೆ. ಉಳುಮೆ ಮಾಡಿಕೊಂಡು ಬಂದಿದ್ದು, ಈಗಲೂ ನಮಗೆ 300 ಅಡಿ ಆಳದಲ್ಲಿ ನೀರು ಸಿಗುತ್ತದೆ. ಉತ್ತಮ ಬೆಳೆ ಬೆಳೆಯುತ್ತಿದ್ದೇವೆ. ಇದೀಗ ಭೂಮಿ ಸ್ವಾಧೀನ ಮಾಡಿಕೊಳ್ಳುತ್ತೇವೆ ಎಂದು ಸರ್ಕಾರದಿಂದ ನೋಟಿಸ್ ಬಂದಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

SWIFT City Project Farmers Opposed Land Acquisition after KIADB Notice Issued

ಉತ್ತಮ ಬೆಳೆ ಬೆಳೆಯುವ ಭೂಮಿ ಮಾಲೀಕರಿಗೆ ಚಿಂತೆ

ಕೆಐಎಡಿಬಿ ನೋಟಿಸ್ ನೀಡುವ ಮೊದಲು ಈ ಭಾಗದ ರೈತರಿಂದ ಯಾವ ಸಲಹೆ ಪಡೆದಿಲ್ಲ. ಇಲ್ಲಿನ ರೈತರು ನಿತ್ಯ ಬೆಂಗಳೂರಿನ ಕೆ.ಆರ್.ಮಾರುಕಟ್ಟೆ, ಮಡಿವಾಳದ ಮಾರುಕಟ್ಟೆಗೆ 10 ಲಾರಿ ಲೋಡ್ ತರಕಾರಿ, ಹೂ ಹಣ್ಣ ರವಾನಿಸುತ್ತಾರೆ. ಇದರಿಂದ ರೈತರ ಜೀವನ ನಡೆಯುತ್ತಿದೆ ಎಂದರು.

ರಾಜ್ಯ ಸರ್ಕಾರ ಕಳೆದ ಫೆಬ್ರವರಿಯಲ್ಲಿ ಸಚಿವ ಸಂಪುಟದಲ್ಲಿ ಸರ್ಜಾಪುರ ವ್ಯಾಪ್ತಿಯಲ್ಲಿ ಹೊಸ ಸಿಟಿ ನಿರ್ಮಾಣಕ್ಕೆ ಅನುಮೋದನೆ ನೀಡಿತ್ತು. ಯೋಜನೆಗಾಗಿ ಒಣಭುಮಿ ಮಾತ್ರವೇ ಪಡೆಯುವುದಾಗಿ ಹೇಳಿತ್ತು. ಹೀಗಿದ್ದರೂ ನೀರಾವರಿ ಭೂಮಿ ಮಾಲೀಕರಿಗೆ ನೋಟಿಸ್ ಜಾರಿ ಮಾಡಿದೆ. ಬಂಗಾರದಂತಹ ಬೆಳೆ ಬೆಳಯುವ ಜಮೀನು ಕಳೆದುಕೊಂಡು ನಾವು ಬದುಕುವುದಾದರೂ ಹೇಗೆ ಎಂದು ಅಲ್ಲಿನ ರೈತರು ಚಿಂತೆಗೀಡಾಗಿದ್ದಾರೆ.

ಜ.4ರಂದು ರೈತರೊಂದಿಗೆ ಸರ್ಕಾರದ ಸಭೆ

ಇರುವ 2.5 ಎಕರೆ ಜಮೀನಿನಲ್ಲಿ ಬೋರ್‌ವೆಲ್ ಕೊರೆಸಿದ್ದೇನೆ. ಹತ್ತಿರದ ಕೆರೆಗಳ ನೀರು ಹಾಯಿಸಿಕೊಂಡು ಹೂ, ಹಣ್ಣು, ತರಕಾರಿ ಬೆಳೆ ಬೆಳೆಯುತ್ತೇನೆ. ಕೃಷಿ ಜೀವನಾಧಾರವಾದಾಗ ಈ ಜಮೀನು ಕೊಟ್ಟು ಬದುಕಿಗೆ ಏನು ಮಾಡಬೇಕು. ಈ ಜಮೀನು ಕೊಡಲು ನಾವು ಸಿದ್ಧರಿಲ್ಲ. ಬೇಕಾದಲ್ಲಿ ನಾವು ಕಾನೂನು ಹೋರಾಟ ಮಾಡುತ್ತೇವೆ. ಸರ್ಕಾರ ಭೂಸ್ವಾಧಿನದಿಂದ ಹಿಂಪಡೆದಿದ್ದರೆ ಪ್ರತಿಭಟನೆ ಮಾಡುತ್ತೇವೆ ಎಂದು ಹೇಳಿದರು.

ರಾಜ್ಯ ಸರ್ಕಾರದಿಂದ ಎಂಟು ಗ್ರಾಮಗಳ 700 ಕ್ಕೂ ಹೆಚ್ಚು ರೈತರಿಗೆ ನೋಟಿಸ್ ಜಾರಿ ಮಾಡಿದೆ. ಈ ಭಾಗದಲ್ಲಿ 800 ಎಕರೆಯಲ್ಲಿ ರೈತರು ಸಾಗುವಳಿ ಮಾಡುತ್ತಿದ್ದಾರೆ. ಸರ್ವೇ ಮಾಡದೇ ಏಕಾಎಕಿ ಜಾಗಕ್ಕಾಗಿ ನೋಟಿಸ್ ನೀಡಿರುವುದು ತಪ್ಪು. ಅಧಿಕಾರಿಗಳು ರೈತರನ್ನು ಸಂಪರ್ಕಿಸದೇ ಹೀಗೆ ಮಾಡಿದ್ದಾರೆ. ಕೃಷಿ ಭೂಮಿ ನೀಡಿದರೆ ರೈತರ ಸ್ಥಿತಿ ಏನಾಗಲಿದೆ ಎಂದು ಊಹಿಸಲು ಸಾಧ್ಯವಿಲ್ಲ ಎಂದು 800 ಎಕರೆಯಲ್ಲಿ ರೈತರು ಸಾಗುವಳಿ ಭಾರತೀಯ ಕಿಸಾನ್ ಸಂಘವು ತಿಳಿಸಿದೆ.

ಸರ್ಕಾರ ಭೂಮಿಸ್ವಾಧೀನ ವಿಚಾರದಲ್ಲಿ ಕೆಲವು ನಿಯಮಗಳನ್ನು ಉಲ್ಲಂಘಿಸಿದೆ. ಒಣ ಭೂಮಿ ಬಿಟ್ಟು ನೀರಾವರಿ ಜಮೀನು ಸ್ವಾಧೀನಕ್ಕೆ ಮುಂದಾಗಿದೆ. ಸರ್ಕಾರದ ಈ ಕ್ರಮವನ್ನು ವಿರೋಧಿಸಿ ಆನೇಕಲ್ ತಾಲ್ಲೂಕಿನಾದ್ಯಂತ ಇರುವ ಗ್ರಾಮಗಳ ಸುಮಾರು 5 ಸಾವಿರ ರೈತರು ಜನವರಿ 4 ರಂದು ಸಭೆ ಸೇರಲಿದ್ದಾರೆ. ಅಂದು ರೈತರು ಯಾವೆಲ್ಲ ನಿರ್ಣಯ ಕೈಗೊಳ್ಳಲಿದ್ದಾರೆ ಎಂದು ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+