'ಕೋವಿಡ್-19'ಗಾಗಿ ಬಂದಿದೆ ಸ್ಪೆಷಲ್ ವೆಂಟಿಲೇಟರ್ 'ಸ್ವಸ್ಥ್ ವಾಯು'

ಬೆಂಗಳೂರು, ಮೇ 12: ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡಲು ಕೇವಲ 36 ದಿನಗಳಲ್ಲಿ ಸಿ.ಎಸ್.ಐ.ಆರ್ - ನ್ಯಾಷನಲ್ ಏರೋಸ್ಪೇಸ್ ಲ್ಯಾಬೊರೇಟರೀಸ್ (ಎನ್.ಎ.ಎಲ್) Non-Invasive BiPAP ವೆಂಟಿಲೇಟರ್ 'ಸ್ವಸ್ಥ್ ವಾಯು' ಅನ್ನು ಅಭಿವೃದ್ಧಿ ಪಡಿಸಿದೆ.

ನಾನ್-ಇನ್ವೇಸಿವ್ BiPAP ವೆಂಟಿಲೇಟರ್ 'ಸ್ವಸ್ಥ್ ವಾಯು' ಮೈಕ್ರೋ ಕಂಟ್ರೋಲರ್ ಆಧಾರಿತ ನಿಖರವಾದ ಕ್ಲೋಸ್ಡ್-ಲೂಪ್ ಅಡಾಪ್ಟಿವ್ ಕಂಟ್ರೋಲ್ ಸಿಸ್ಟಮ್ ಆಗಿದ್ದು, ಬಯೋ ಕಂಪಾಟಬಲ್ 3D ಪ್ರಿಂಟೆಡ್ ಮ್ಯಾನಿಫೋಲ್ಡ್ ಮತ್ತು ಕೋಪ್ಲರ್ ಜೊತೆಗೆ HEPA ಫಿಲ್ಟರ್ ಹೊಂದಿದೆ.

ಈ ವಿಶಿಷ್ಟ ಫೀಚರ್ ವೈರಸ್ ಹರಡುವ ಭಯವನ್ನು ನಿವಾರಿಸಲು ಸಹಕಾರಿ ಆಗುತ್ತದೆ. ಇದು ಆಕ್ಸಿಜನ್ ಸಾಂದ್ರಕ ಅಥವಾ ಪುಷ್ಟೀಕರಣ ಘಟಕವನ್ನು ಬಾಹ್ಯವಾಗಿ ಸಂಪರ್ಕಿಸುವ ಅವಕಾಶದೊಂದಿಗೆ ಸ್ವಯಂಪ್ರೇರಿತ, CPAP, AUTO BiPAP ಮೋಡ್ ಗಳನ್ನು ಹೊಂದಿದೆ.

Swasth Vayu - A Non Invasive Ventilator Developed For Covid-19

NABL ಮಾನ್ಯತೆ ಪಡೆದ ಏಜೆನ್ಸಿಗಳು ಈ ವೆಂಟಿಲೇಟರ್ ನ ಸುರಕ್ಷತೆ ಮತ್ತು ಕಾರ್ಯಕ್ಷಮತೆಯನ್ನು ಪ್ರಮಾಣೀಕರಿಸಿದೆ. ಅಂದ್ಹಾಗೆ, ಈ ವೆಂಟಿಲೇಟರ್ ಎನ್.ಎ.ಎಲ್ ಆರೋಗ್ಯ ಕೇಂದ್ರದಲ್ಲಿ ಬಯೋಮೆಡಿಕಲ್ ಪರೀಕ್ಷೆಗಳು ಮತ್ತು ಬೀಟಾ ಕ್ಲಿನಿಕಲ್ ಪ್ರಯೋಗಗಳಿಗೆ ಒಳಗಾಗಿದೆ.

ಯಾವುದೇ ವಿಶೇಷ ಶುಶ್ರೂಷೆ ಇಲ್ಲದೆ ಈ ವೆಂಟಿಲೇಟರ್ ಅನ್ನು ಬಳಸಬಹುದು. ಇದು ಅತ್ಯಂತ ಸರಳವಾಗಿದ್ದು, ಪರಿಣಾಮಕಾರಿಯಾಗಿದೆ.

ವಾರ್ಡ್ ಗಳಲ್ಲಿ ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡಲು 'ಸ್ವಸ್ಥ್ ವಾಯು' ಸಹಕಾರಿಯಾಗಿದೆ. ಈ ವೆಂಟಿಲೇಟರ್ ನ ಅನುಮೋದನೆಗಾಗಿ ರೆಗ್ಯುಲೇಟರಿ ಅಥಾರಿಟಿಗಳ ಮುಂದೆ ಹೋಗುವ ಪ್ರಕ್ರಿಯೆಗೆ ಸಿ.ಎಸ್.ಐ.ಆರ್-ಎನ್.ಎ.ಎಲ್ ಚಾಲನೆ ನೀಡಿದೆ. ಪ್ರಮುಖ ಸಾರ್ವಜನಿಕ/ಖಾಸಗಿ ಕೈಗಾರಿಕೆಗಳೊಂದಿಗೆ ಸಾಮೂಹಿಕ ಉತ್ಪಾದನೆಗೆ ಪಾಲುದಾರರಾಗಲು ಸಿ.ಎಸ್.ಐ.ಆರ್-ಎನ್.ಎ.ಎಲ್ ಈಗಾಗಲೇ ಮಾತುಕತೆ ನಡೆಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+