ಇಂದಿರಾನಗರ ಮೆಟ್ರೋದಲ್ಲಿ ಸಿಕ್ಕಿದ್ದೇನು? ತಲೆಕೆಡಿಸಿಕೊಂಡಿರುವ ಪೊಲೀಸರು
Recommended Video

ಬೆಂಗಳೂರು, ಜು.17: ಇಂದಿರಾನಗರ ಮೆಟ್ರೋ ನಿಲ್ದಾಣದಲ್ಲಿ ಬ್ಲೂಟೂತ್ ಬೀಕಾನ್ ಉಪಕರಣ ಪತ್ತೆಯಾಗಿದ್ದು, ಈ ಕುರಿತು ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಯಾವ ಕಾರಣಕ್ಕೆ ಯಾರು ಇದನ್ನು ಅಳವಡಿಸಿದ್ದಾರೆ ಎನ್ನುವುದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.
ಜು.14ರಂದು ಬೆಳಗ್ಗೆ ಮೆಟ್ರೋ ಹೊರಡುವ ಮುನ್ನ ಪರಿಶೀಲನೆ ನಡೆಸಿದಾಗ ಆಸನದ ಕೆಳಗೆ ಬ್ಲೂಟೂತ್ ಇರುವುದು ಭದ್ರತಾ ಸಿಬ್ಬಂದಿಗೆ ಕಾಣಿಸಿದೆ. ಅದನ್ನು ತೆಗದುಕೊಂಡು ಹೋಗಿ ಸಿಸಿ ಕ್ಯಾಮರಾದಲ್ಲಿ ಪರಿಶೀಲನೆ ನಡೆಸಿದಾಗ ಡೆಲ್ಟಾ ಸರ್ವೀಸ್‌ನ ಸೆಕ್ಯುರಿಟಿ ಗಾರ್ಡ್ ಸರುಣ್ ಎಂಬುವರು ಅದನ್ನು ಅಂಟಿಸಿರುವುದು ತಿಳಿದುಬಂದಿದೆ.
ಮೆಟ್ರೋ ರೈಲುಗಳ ಕಾರ್ಯಾಚರಣೆ ಮತ್ತು ನಿರ್ವಹಣೆ ಕಾಯ್ದೆ ಕಲಂ 62 ಮತ್ತು ಐಪಿಸಿ ಕಲಂ 283ರಲ್ಲಿ ಪ್ರಕರಣ ದಾಖಲಿಸಲಾಗಿದೆ ಸೆಕ್ಯುರಿಟಿ ಗಾರ್ಡ್‌ನ್ನು ವಶಪಡಿಸಿಕೊಳ್ಳಲಾಗಿದೆ, ಆದರೆ ಆತನ ತನಗೇನು ಗೊತ್ತಿಲ್ಲ ತಾನು ಏನು ಇಟ್ಟಿಲ್ಲ ಎನ್ನುತ್ತಿದ್ದಾರೆ ವಿಚಾರಣೆ ಬಳಿಕ ಸತ್ಯ ಹೊರಬರಬೇಕಿದೆ.

ಬ್ಯೂಟೂತ್ ಬೀಕಾನ್ ಎಂದರೇನು?ಮೊಬೈಲ್‌ಫೋನ್ ಮತ್ತು ಬ್ಲೂಟೂತ್ ಬೀಕಾನ್ ನಡುವೆ ಸಂಪರ್ಕ ಕಲ್ಪಿಸಲಾಗುತ್ತದೆ. ನಂತರ ,ಮೊಬೈಲ್ ಫೋನ್‌ನಿಂದಲೇ ಬ್ಲೂಟೂತ್ ಮೂಲಕ ಹಾಡು ಕೇಳುವುದು, ಧ್ವನಿವರ್ಧಕವಾಗಿ ಬಳಸಬಹುದು, ಆದರೆ ಈ ಬ್ಲೂಟೂತ್ ಬಿಕಾನ್ ಸಮೀಪಕ್ಕೆ ಬರುವ ಎಲೆಕ್ಟ್ರಾನಿಕ್ ಸಾಧನಗಳ ಕುರಿತು ಮಾಹಿತಿ ನೀಡುತ್ತದೆ.











Click it and Unblock the Notifications