ಕೋವಿಡ್ ಮುಂಚೂಣಿ ಕಾರ್ಯಕರ್ತರಿಗೆ ಎಲ್ಡರ್ಲಿ ಅಸಿಸ್ಟೆಂಟ್ ಗ್ರೂಪ್ ಬೆಂಬಲ

ಬೆಂಗಳೂರು, ಜೂನ್ 28: ಕೋವಿಡ್ ಮಹಾಮಾರಿ ಕಾಡುತ್ತಿರುವ ಸಂದರ್ಭದಲ್ಲಿ ಮುಂಚೂಣಿ ಕಾರ್ಯಕರ್ಯರಾಗಿ ಸೇವೆ ಸಲ್ಲಿಸುತ್ತಿರುವವರ ಬೆಂಬಲ ಕಾರ್ಯಕ್ರಮದ ಅಂಗವಾಗಿ, ನಿವೃತ್ತ ಬ್ಯಾಂಕ್ ಅಧಿಕಾರಿ ಮತ್ತು ಅವರ ಉದ್ಯೋಗನಿರತ ಪುತ್ರ ಬೆಂಗಳೂರಿನ ಕೋರಮಂಗಲ 8ನೇ ಬ್ಲಾಕ್ ಮತ್ತು ಸುತ್ತಮುತ್ತಲಿನ ಪ್ರದೇಶದ ಎಲ್ಲ ಕೋವಿಡ್ ಮುಂಚೂಣಿ ಕಾರ್ಯಕರ್ತರಿಗಾಗಿ ಒಂದು ಉಪಕ್ರಮವನ್ನು ಪ್ರಾರಂಭಿಸಿದ್ದಾರೆ.

ಎಲ್ಡರ್ಲಿ ಅಸಿಸ್ಟೆಂಟ್ ಗ್ರೂಪ್ (ಹಿರಿಯರ ಸಹಾಯ ಸಮೂಹ) ಸಹಯೋಗದೊಂದಿಗೆ ನಿವೃತ್ತ ಬ್ಯಾಂಕ್ ಅಧಿಕಾರಿ ಎ. ಚಂದ್ರಶೇಖರ್ ಹೆಬ್ಬಾರ್ ತಮ್ಮ ಪತ್ನಿ ಮತ್ತು ಸಂವಹನ ವೃತ್ತಿಪರ ಪ್ರಮೀತ್ ಹೆಬ್ಬಾರ್ ತಮ್ಮ ತಾಯಿಯಾದ ನಿರ್ಮಲಾ ಹೆಬ್ಬಾರ್ ಅವರ ನೆನಪಿಗಾಗಿ ಈ ಉಪಕ್ರಮವನ್ನು ಹಮ್ಮಿಕೊಂಡಿದ್ದಾರೆ.

ಮುಂಚೂಣಿ ಕಾರ್ಯಕರ್ತರಿಗೆ ನೀಡಿದ ಪ್ಯಾಕೇಜ್‌ನಲ್ಲಿ ಕೋವಿಡ್ ಎದುರಿಸಲು ಅಗತ್ಯವಿರುವ ಸಾಧನಗಳಾದ ಸ್ಯಾನಿಟೈಜರ್‍ಗಳು, ಸಾಬೂನುಗಳು, ಮಾಸ್ಕ್ ಜೊತೆಗೆ ಮುಂಚೂಣಿ ಕಾರ್ಯಕರ್ತರಿಗೆ ಸೂಪ್ ಬೈಟ್‌ಗಳು ಮತ್ತು ಮಾವಿನ ಹಣ್ಣುಗಳು ಸೇರಿವೆ. ಚಂದ್ರಶೇಖರ್ ಹೆಬ್ಬಾರ್ ಮತ್ತು ಪುತ್ರ ಪ್ರಮೀತ್ ಹೆಬ್ಬಾರ್ ಪ್ರಾರಂಭಿಸಿದ ಮತ್ತು ನೀಡುತ್ತಿರುವ ಈ ಧನಸಹಾಯ ಉಪಕ್ರಮಕ್ಕೆ ಕೋರಮಂಗಲ 8ನೇ ಬ್ಲಾಕ್‌ನ ಹಿರಿಯರ ಸಹಾಯ ಸಮೂಹದ ಸದಸ್ಯರು ಸಹ ಬೆಂಬಲ ನೀಡಿದ್ದು ಹೆಮ್ಮೆಯ ಸಂಗತಿ.

Bengaluru: Support Program For Covid Frontline Workers In Association With Elders Assist Group

ಕೋವಿಡ್ ಎರಡನೇ ಅಲೆ ವ್ಯಾಪಿಸಿರುವ ಈ ಸಂದರ್ಭದಲ್ಲಿ ಕಷ್ಟಪಟ್ಟು ದುಡಿಯುತ್ತಿರುವ ಕೋವಿಡ್ ಯೋಧ ತಂಡಗಳಿಗೆ ಅಗತ್ಯ ವಸ್ತುಗಳನ್ನು ವಿತರಿಸಲಾಯಿತು. ಆಗ್ನೇಯ ವಿಭಾಗದ ಉಪ ಪೊಲೀಸ್ ಆಯುಕ್ತ ಶ್ರೀಕಾಂತ್ ಜೋಶಿ, ಕೋರಮಂಗಲ ಪೊಲೀಸ್ ಠಾಣೆ ಪೊಲೀಸ್ ಇನ್ಸ್‍ಪೆಕ್ಟರ್ ಕೆ.ಬಿ. ರವಿ, ಆಗ್ನೇಯ ವಿಭಾಗದ ಸಂಚಾರ ವಿಭಾಗದ ಉಪ ಆಯುಕ್ತ ಎಸ್ ರೆಡ್ಡಿ, ಅಡುಗೋಡಿ ಸಂಚಾರ ಪೊಲೀಸ್ ಠಾಣೆ ಇನ್ಸ್‍ಪೆಕ್ಟರ್ ಹೆಮಲತಾ, ಡಾ.ರಾಜೇಶ್ವರಿ ಅಡುಗೋಡಿ, ಯುಪಿಎಚ್‍ಸಿ ಮತ್ತು ಬಿಬಿಎಂಪಿ ಹೆರಿಗೆ ಆಸ್ಪತ್ರೆ ಸಂಕೀರ್ಣದ ಯುಪಿಎಚ್‍ಸಿ ಡಾ.ರಾಜತಾ ಆಡುಗೋಡಿ ಅವರಿಗೆ ಅಗತ್ಯ ಕಿಟ್‌ಗಳನ್ನು ಹಸ್ತಾಂತರಿಸಲಾಯಿತು.

ಬೆಂಗಳೂರಿನ ಕೋರಮಂಗಲ 8ನೇ ಬ್ಲಾಕ್, ಹಲಸೂರು, ಆಡುಗೋಡಿ, ಹೊಸೂರು ರಸ್ತೆ, ಎಸ್ಟಿ ಬೆಡ್ ಪ್ರದೇಶ, ಎಚ್‍ಎಸ್‍ಆರ್ ಲೇಔಟ್ ಮತ್ತು ಎಚ್‍ಎಸ್‍ಆರ್ ಲೇಔಟ್ ಬಳಿಯ ಅಗರ ಕೆರೆ ಭಾಗದ 800ಕ್ಕೂ ಹೆಚ್ಚು ವ್ಯಕ್ತಿಗಳನ್ನು ಒಳಗೊಂಡ 500ಕ್ಕೂ ಹೆಚ್ಚು ಕುಟುಂಬಗಳಿಗೆ ಈ ಯೋಜನೆಯ ಫಲವನ್ನು ತಲುಪಿಸಲಾಯಿತು. ನಿರ್ಮಾಣ ಸ್ಥಳಗಳು, ವಲಸೆ ಕುಟುಂಬಗಳು, ಕೊಳೆಗೇರಿ ನಿವಾಸಿಗಳು, ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿನ ಪೌರಕರ್ಮಿಕರು ದೈನಂದಿನ ಸ್ಥಳ ಕಾರ್ಮಿಕರಿಗೆ ಪಡಿತರ ಕಿಟ್‌ಗಳು ಅಥವಾ ಆಹಾರ ಪ್ಯಾಕೆಟ್‌ಗಳನ್ನು ಒದಗಿಸಲು ಪರಿಕಲ್ಪನೆ ರೂಪಿಸಲಾಗಿದೆ.

Bengaluru: Support Program For Covid Frontline Workers In Association With Elders Assist Group

Recommended Video

      ಸಿದ್ದುಗೆ ಟಾಂಗ್ ಕೊಟ್ಟವರ ಮುಖಭಂಗ ಮಾಡಿದ ಜಮಿರ್ | Oneindia Kannada

      ಕಾರ್ಯಕ್ರಮಕ್ಕೆ ಈ ಕೆಳಗಿನ ಸ್ನೇಹಿತರು ಮತ್ತು ಕುಟುಂಬದವರ ಸಹಕಾರ ದೊರಕಿದೆ. ಪ್ರಜ್ಞಾ ಹೆಬ್ಬಾರ್, ನಮ್ರತಾ ರಾವ್, ಲೆಸ್ಲಿ ಫರ್ನಾಂಡಿಸ್, ಕೆನ್ನೆತ್ ಕೌಂಡ್ಸ್, ಬಿನೋ ಜಾನ್, ಗೌತಮ್ ಹೆಬ್ಬಾರ್, ಭಾಗಚಂದ್ರ ಶೆಟ್ಟಿ, ದರ್ಶನ ಶೆಟ್ಟಿ, ಕಾರ್ತಿಕ್ ಮತ್ತು ಕಿರಣ್ ನಾಯರ್, ಪ್ರಶಾಂತ್ ಮತ್ತು ರಾಮ ಕೃಷ್ಣಮೂರ್ತಿ, ಇಕ್ರಾಮ್, ಸುಶಾಂತ್ ಕೊಂಡಾಜೇ ಕೃಷ್ಣ, ಸುಮಾ ನಾಯರ್, ರಶ್ಮಿ ನಾಯರ್, ಸಮಾಜ ಸೇವಕ ಮಂಜುನಾಥ್, ರಿಜ್ವಿ, ಮಹೇಶ್, ವಿನೋದ್ ಮತ್ತು ಇತರರು ಭಾಗವಹಿಸಿದ್ದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+