ದೀಪಾವಳಿ : ಹುಬ್ಬಳ್ಳಿಗೆ ವಿಶೇಷ ಸೂಪರ್ ಫಾಸ್ಟ್‌ ರೈಲು

ಬೆಂಗಳೂರು, ಅ. 20 : ದೀಪಾವಳಿ ಹಬ್ಬದ ಅಂಗವಾಗಿ ಉಂಟಾಗುವ ಪ್ರಯಾಣಿಕರ ದಟ್ಟಣೆ ನಿವಾರಿಸಲು ನೈರುತ್ಯ ರೈಲ್ವೆ ಸೂಪರ್‌ ಫಾಸ್ಟ್‌ ವಿಶೇಷ ರೈಲುಗಳ ವ್ಯವಸ್ಥೆಯನ್ನು ಮಾಡಿದೆ. ಅ.21ರಿಂದ 26ರ ತನಕ ಈ ವಿಶೇಷ ರೈಲುಗಳು ವಿವಿಧ ಪ್ರದೇಶಗಳಿಗೆ ಯಶವಂತಪುರ ರೈಲು ನಿಲ್ದಾಣದಿಂದ ಸಂಚರಿಸಲಿವೆ.

ಅ.22ರ ಬುಧವಾರ ಯಶವಂತಪುರದಿಂದ ವಿಶೇಷ ರೈಲು ಹುಬ್ಬಳ್ಳಿಗೆ ಪ್ರಯಾಣಿಸಲಿದೆ. ಯಶವಂತಪುರ-ಹುಬ್ಬಳ್ಳಿ ನಡುವೆ ಒಂದು ಬಾರಿ ವಿಶೇಷ ರೈಲು ಸಂಚಾರ ನಡೆಸಲಿದೆ. ಅ.22ರಂದು ರಾತ್ರಿ 8.40ಕ್ಕೆ ಯಶವಂತಪುರದಿಂದ ಹೊರಡುವ ರೈಲು (ನಂ. 02677) ಮರುದಿನ ಬೆಳಗ್ಗೆ 4.45ಕ್ಕೆ ಹುಬ್ಬಳ್ಳಿಗೆ ತಲುಪಲಿದೆ.

train

ಯಶವಂತಪುರದಿಂದ ಹೊರಡುವ ಈ ವಿಶೇಷ ರೈಲು ತುಮಕೂರು, ಅರಸೀಕೆರೆ ಮತ್ತು ದಾವಣಗೆರೆಯಲ್ಲಿ ಮಾತ್ರ ನಿಲ್ಲಲ್ಲಿದೆ. [ದೀಪಾವಳಿಗೆ ಹೆಚ್ಚುವರಿ ಸರ್ಕಾರಿ ಬಸ್]

ವಿಶೇಷ ರೈಲುಗಳ ಪಟ್ಟಿ

* ಯಶವಂತಪುರ-ನಾಗರಕೊಯಿಲ್‌ ನಡುವೆ ಎರಡು ಬಾರಿ ಸಂಚಾರ. ಅ.21ರಂದು ರಾತ್ರಿ 9.15ಕ್ಕೆ ಯಶವಂತಪುರದಿಂದ ಹೊರಡುವ ರೈಲು (ನಂ. 02689) ಅ.23ರ ಬೆಳಗ್ಗೆ 9.20ಕ್ಕೆ ನಾಗರಕೊಯಿಲ್‌ ತಲುಪಲಿದೆ. [ರೈಲ್ವೆ ಇಲಾಖೆಯ ಸಮಗ್ರ ಮಾಹಿತಿಗೆ ಹೊಸ ಅಪ್ಲಿಕೇಶನ್]

* ಅ.25ರಂದು ರಾತ್ರಿ 10.30ಕ್ಕೆ ಯಶವಂತಪುರದಿಂದ ಹೊರಡುವ ರೈಲು (ನಂ. 06598) ಅ.26ರಂದು ಮಧ್ಯಾಹ್ನ 2.30ಕ್ಕೆ ನಾಗರಕೊಯಿಲ್‌ ತಲುಪಲಿದೆ. [ವಿಶೇಷ ರೈಲುಗಳ ವೇಳಾಪಟ್ಟಿ ಇಲ್ಲಿದೆ]

* ಅ. 22ರಂದು ಮಧ್ಯಾಹ್ನ 2ಕ್ಕೆ ನಾಗರಕೊಯಿಲ್‌ನಿಂದ ಹೊರಡುವ ರೈಲು (ನಂ. 06597) ಅ.23ರ ಬೆಳಗ್ಗೆ 4ಕ್ಕೆ ಯಶವಂತಪುರ ತಲುಪಲಿದೆ.

* ಅ.26ರಂದು ನಾಗರಕೊಯಿಲ್‌ನಿಂದ ಸಂಜೆ 4.40ಕ್ಕೆ ಹೊರಡುವ ರೈಲು (ನಂ. 06599) ಅ.27ರಂದು ಬೆಳಗ್ಗೆ 8ಗಂಟೆಗೆ ಯಶವಂತಪುರಕ್ಕೆ ತಲುಪಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+