ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡೊನಾಲ್ಡ್ ಟ್ರಂಪ್ ರಿಂದ 'ಸೂಪರ್' ಕಾಪ್' ಸಾಂಗ್ಲಿಯಾನಗೆ ಆಹ್ವಾನ

By Mahesh
|
Google Oneindia Kannada News

ಬೆಂಗಳೂರು, ಜನವರಿ 11: ಕರ್ನಾಟಕದ ಮಾಜಿ 'ಸೂಪರ್ ಕಾಪ್' ಎಚ್ಟಿ ಸಾಂಗ್ಲಿಯಾನಾ ಅವರಿಗೆ ಯುಎಸ್ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಂದ ಆಹ್ವಾನ ಬಂದಿದೆ. ವಿಶೇಷ ಆಹ್ವಾನಿತರಾಗಿ ಫೆಬ್ರವರಿ 02ರಂದು ಬೆಳಗ್ಗೆ ಉಪಹಾರ ಸೇವಿಸುವ ಅವಕಾಶ ಸಾಂಗ್ಲಿಯಾನಾ ಅವರಿಗೆ ಲಭ್ಯವಾಗಿದೆ.

ಈ ಬಗ್ಗೆ ಸಂತಸವ್ಯಕ್ತಪಡಿಸಿ ಒನ್ ಇಂಡಿಯಾ ಪ್ರತಿನಿಧಿಯೊಂದಿಗೆ ಮಾತನಾಡಿದ ಸಾಂಗ್ಲಿಯಾನಾ, ವಾಷಿಂಗ್ಟನ್ ಹಿಲ್ಟನ್ ನಲ್ಲಿ ಫೆ.2ರಂದು ಬೆಳಗ್ಗೆ ನ್ಯಾಷನಲ್ ಪ್ರೇಯರ್ ಬ್ರೇಕ್ ಫಾಸ್ಟ್ ಗೆ ಹೋಗುತ್ತಿದ್ದೇನೆ ಎಂದರು. ಪ್ರತಿವರ್ಷ ಫೆಬ್ರವರಿ ತಿಂಗಳ ಮೊದಲ ಗುರುವಾರದಂದು ಈ ಕಾರ್ಯಕ್ರಮ ನಡೆಯಲಿದೆ.

Super cop Sangliana invited to meet Donald Trump

ರಾಜಕೀಯ, ಸಾಮಾಜಿಕ ಹಾಗೂ ಉದ್ಯಮ ರಂಗದ ಗಣ್ಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. 1953ರಿಂದ ಯುನೈಟೆಡ್ ಸ್ಟೇಟ್ಸ್ ನ ಅಧ್ಯಕ್ಷರ ಭಾಷಣ ಕಾರ್ಯಕ್ರಮದ ಮುಖ್ಯಾಂಶವಾಗಿದೆ.

'ನಾನು ಪ್ರಮಾಣ ವಚನ ಸಮಾರಂಭಕ್ಕೆ ಹೋಗಲು ಆಗುತ್ತಿಲ್ಲ. ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ನಾನು ಶುಭ ಕೋರುತ್ತೇನೆ. ಪ್ರೇಯರ್ ಬ್ರೇಕ್ ಫಾಸ್ಟ್ ನಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ಈ ಕಾರ್ಯಕ್ರಮಕ್ಕೆ ಆಹ್ವಾನಿಸಿದ ಸೆನೆಟರ್ ಗಳಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ ಎಂದು ಸಾಂಗ್ಲಿಯಾನಾ ಹೇಳಿದರು.

English summary
Former top cop of Karnataka, H T Sangliana, is all set to meet US President-designate Donald Trump after he takes over the highest office in the US. Sangliana has been invited to be part of the National Prayer Breakfast on February 2 at Washington Hilton. The event held on the first Thursday of February each year is a designated forum for political, social and business elite to convene and connect. The President of the United States has been a key speaker in the meet since 1953.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X