Sunny Leone: ದರ್ಶನ್‌ ಪ್ರಕರಣದ ಬಗ್ಗೆ ಸನ್ನಿಲಿಯೋನ್‌ ಸ್ಫೋಟಕ ಹೇಳಿಕೆ

Sunny Leone: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಈ ಪ್ರಕರಣದಲ್ಲಿ ಎ1 ಆರೋಪಿ ಪವಿತ್ರಾ ಗೌಡ ಆಗಿದ್ದರೆ, ಎ2 ಆರೋಪಿ ದರ್ಶನ್‌ ಆಗಿದ್ದಾನೆ. ಇನ್ನು ಈ ಬಗ್ಗೆ ಹಲವರು ಈಗಾಗಲೇ ಪ್ರತಿಕ್ರಿಯೆ ನೀಡಿದ್ದಾರೆ. ಹಾಗೆಯೇ ಇದೀಗ ಬಾಲಿವುಡ್‌ ನಟಿ ಸನ್ನಿಲಿಯೋನ್‌ ಕೂಡ ಮಾತನಾಡಿ ಗರಂ ಆಗಿದ್ದಾರೆ. ಹಾಗಾದರೆ ಏನು ಹೇಳಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ1 ಆರೋಪಿ ಆಗಿರುವ ದರ್ಶನ್‌ ಇದೀಗ ಅನ್ನಪೂರ್ಣೇಶ್ವರಿನಗರ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಇನ್ನು ಈ ಬಗ್ಗೆ ಕೆಲ ಅಂಧಾಭಿಮಾನಿಗಳು ಡಿ ಬಾಸ್‌ ಏನು ಮಾಡಿಲ್ಲ ಅಂತಾ ಹೇಳುತ್ತಿದ್ದರೆ, ಮತ್ತೆ ಕೆಲವರು ಅವರು ಏನೇ ಮಾಡಿದರೂ ಸರಿ ಇರತ್ತೆ ಎನ್ನುವ ಮಾತುಗಳನ್ನು ರಾಜರೋಷವಾಗಿ ಹೇಳುತ್ತಿದ್ದಾರೆ.

Sunny Leone s Reaction about Darshan Case know details

ಪವಿತ್ರಾ ಗೌಡಗೆ ರೇಣುಕಾಸ್ವಾಮಿ ಅಶ್ಲೀಲ ಸಂದೇಶ ಕಳುಹಿಸಿದ್ದಾರೆ ಅಂತಾ ಕೊಲೆ ಮಾಡಿರುವ ಆರೋಪ ದರ್ಶನ್‌ ಮತ್ತು ಗ್ಯಾಂಗ್‌ ಮೇಲಿದ್ದು, ಸದ್ಯ ಬೆಂಗಳೂರಿನ ಅನ್ನಪೂರ್ಣೇಶ್ವರಿನಗರ ಠಾಣೆಯ ಪೊಲೀಸ್‌ ಕಸ್ಟಡಿಯಲ್ಲಿದ್ದಾರೆ. ಇನ್ನು. ಈ ಬಗ್ಗೆ ಮಾತನಾಡಿದ ಬಾಲಿವುಡ್‌ ನಟಿ ಸನ್ನಿಲಿಯೋನ್‌ ಕೂಡ ಆಕ್ರೋಶ ಹೊರಹಾಕಿದ್ದಾರೆ.

ನಟಿ ಸನ್ನಿಲಿಯೋನ್‌ ಬೆಂಗಳೂರಿನ ಹೆಚ್‌.ಆರ್‌.ಬಿ.ಆರ್‌ ಲೇಔಟ್‌ನಲ್ಲಿ ನೂತನಾವಿ ಆರಂಭ ಆಗುತ್ತಿರುವ ನ್ಯಾಚುರಲ್‌ ಬ್ಯೂಟಿ ಆಂಡ್‌ ಎಕ್ಸ್ಪಿರಿಯನ್ಸ್‌ ಉದ್ಘಾಟನೆಗಾಗಿ ಪತಿ ಡೇನಿಯಲ್‌ ವೇಬರ್‌ ಜೊತೆ ಬಂದಿದ್ದರು. ಈ ವೇಳೆ ಮಾಧ್ಯಮದವರು ದರ್ಶನ್‌ ಪ್ರಕರಣದ ಬಗ್ಗೆ ಕೇಳಿದಾಗ, ಇದು ತುಂಬಾ ಕಷ್ಟಕರವಾದ ಪ್ರಶ್ನೆಯಾಗಿದೆ. ತಂಗಿ, ಪತ್ನಿ ಮತ್ತು ತಾಯಿಯನ್ನು ಖುಷಿಪಡಿಸಲು ಯಾವ ವಸ್ತು ಖರೀದಿ ಮಾಡುತ್ತೀರಿ ಹೇಳಿ. ಆಗಲ್ಲವಲ್ಲಾ, ಇದು ಸಹ ಹಾಗೆ ಎಂದು ಹೇಳುವ ಮೂಲಕ ಸನ್ನಿಲಿಯೋನ್‌ ಕೊಂಚ ಗರಂ ಆದ ಘಟನೆ ನಡೆದಿದೆ.

ಐ ಲವ್‌ ಯು ಬೆಂಗಳೂರು: ಕನ್ನಡ ಕಲಿಯುತ್ತೇನೆ ಎಂದು ಮಾತು ಆರಂಭಿಸಿದ ಸನ್ನಿಲಿಯೋನ್‌, ಐ ಲವ್‌ ಯು ಬೆಂಗಳೂರು ಎಂದು ಜೋರಾಗಿ ಕೂಗಿದ್ದಾರೆ. ಅಷ್ಟೇ ಅಲ್ಲದೆ, ನನಗೆ ಸ್ವಲ್ಪ ಕನ್ನಡ ಬರುತ್ತದೆ. ಇನ್ನೂ ಕಲಿಯುತ್ತೇನೆ ಎಂದು ಹೇಳಿ ಗಮನ ಸೆಳೆದಿದ್ದಾರೆ.

ಇನ್ನು ಸನ್ನಿ ಲಿಯೋನ್‌ ಕಾರ್‌ನಿಂದ ಇಳಿಯುತ್ತಿದ್ದಂತೆ ಅಭಿಮಾನಿಗಳು ಜೋರಾಗಿ ಶಿಳ್ಳೆ, ಚಪ್ಪಾಳೆ ಹೊಡೆಯುವ ಮೂಲಕ ಅವರನ್ನು ಸಿಲಿಕಾನ್‌ ಸಿಟಿಗೆ ಸ್ವಾಗತ ಎಂದು ಅದ್ಧೂರಿಯಾಗಿ ಸ್ವಾಗತಿಸಿಕೊಂಡಿದ್ದಾರೆ. ಇನ್ನುಳಿದ ಅಭಿಮಾನಿಗಳು ದೂರದಲ್ಲೇ ನಿಂತು ಸನ್ನಿಲಿಯೋನ್‌ ಫೋಟೋ ಸೆರೆಹಿಡಿದು, ಅಲ್ಲಿಂದಲೇ ಸೆಲ್ಫಿ ಕ್ಲಿಕ್ಕಿಸಿಕೊಂಡು ಕುಣಿದು ಕುಪ್ಪಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+