ರಾಜಧಾನಿಯಲ್ಲಿ ಬಿಸಿಲ ಝಳಕ್ಕೆ ಹೊರಬೀಳುತ್ತಿವೆ ಹಾವುಗಳು

ಬೆಂಗಳೂರು, ಮಾರ್ಚ್ 1: ಬಿಸಿಲ ಝಳ ಹೆಚ್ಚಾಗುತ್ತಿದ್ದಂತೆಯೇ ಹಾವುಗಳು ಕೂಡ ಎಲ್ಲೆಂದರಲ್ಲಿ ಡಜನ್ ಗಟ್ಟಲೆ ಕಾಣಲು ಪ್ರಾರಂಭವಾಗುತ್ತದೆ. ಇದೀಗ ಅಕ್ಕಪಕ್ಕದ ಮನೆಗಳಿಂದ ರಾಜಭವನದ ಉದ್ಯಾನದಲ್ಲಿ ಹಾವುಗಳು ಬಂದು ಸೇರಿಕೊಳ್ಳುತ್ತಿವೆ.

ಬಿಬಿಎಂಪಿಯು ದಿನಕ್ಕೆ 60 ಕ್ಕಿಂತಲೂ ಹೆಚ್ಚು ಹಾವು ಸಂಬಂಧಿ ಕರೆಗಳನ್ನು ಸ್ವೀಕರಿಸಲಾಗುತ್ತಿದೆ. ನಗರದಲ್ಲಿ ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಸಿಯಸ್ ನಷ್ಟು ದಾಖಲಾಗಿದ್ದು, ಹಾವುಗಳು ಕಾಣಿಸುತ್ತಿರುವ ಕುರಿತಂತೆ ದೂರುಗಳು ಬರಲಾರಂಭಿಸಿವೆ ಎನ್ನುತ್ತಾರೆ ಹಾವು ಹಿಡಿಯುವಲ್ಲಿ ತಜ್ಞರಾಗಿರುವ ಕೆ.ಮೋಹನ್.

ಪ್ರತಿವರ್ಷ ಫೆಬ್ರವರಿ ಮಧ್ಯದಿಂದ ಸೆಪ್ಟೆಂಬರ್‌ ವರೆಗೆ ದಿನಕ್ಕೆ 50 ರಿಂದ 60 ಕರೆಗಳು ಬರುತ್ತವೆ. ನಂತರದ ದಿನಗಳಲ್ಲಿ ದಿನಕ್ಕೆ 20ರಿಂದ 30 ಕರೆಗಳು ಬರುತ್ತವೆ. ಬೇಸಿಗೆಯಲ್ಲಿ ಕುದಿ ಹೆಚ್ಚಾಗಿ ಪೊದೆ ಅಥವಾ ಮನೆಗಳಿಂದ ಹೊರಬಂದರೆ ಮಳೆಗಾಲದಲ್ಲಿ ನೀರು ಹೊಕ್ಕು ಪೊದೆಗಳಿಂದ ಹೊರ ಬರುತ್ತವೆ ಎಂದು ವಿವರಿಸುತ್ತಾರೆ.

Summer scare: BBMP gets 60 snake rescue calls a day

ಬೇಸಿಗೆಯಲ್ಲಿ ವಿಪರೀತ ಝಳದಿಂದ ಪೊದೆ ಅಥವಾ ಪೊಟರೆಗಳಿಂದ ಹೊರಬಂದು ತಂಪು ಜಾಗ ಹುಡುಕಿಕೊಂಡು ನೀರಿನ ಸಂಪು, ಶೌಚಾಲಯ ಅಥವಾ ಏರ್ ಕೂಲರ್ ಗಳಿರುವ ಸಂದಿಗೊಂದಿಗಳಲ್ಲಿ ಅವಿತುಕೊಳ್ಳಲು ಹಾವುಗಳು ಪ್ರಯತ್ನಿಸುತ್ತವೆ. ಈ ವೇಳೆ ಮಾನವನ ಕಣ್ಣಿಗೆ ಬಿದ್ದು ಆತಂಕ ಸೃಷ್ಟಿಸುತ್ತವೆ.

ಇತ್ತೀಚೆಗೆ ಅಲಸೂರು ಕೆರೆ ಬಳಿ ರಾಮಮೂರ್ತಿ ನಗರದ ಬೆಡ್ ರೂಮ್‌ವೊಂದರಲ್ಲಿ ಹಾವು ಸಿಕ್ಕಿತ್ತು. ಸಾಮಾನ್ಯವಾಗಿ ಕರಿನಾಗರ, ಕೆರೆ ಹಾವುಗಳು ಬೆಂಗಳೂರಿನಲ್ಲಿ ಕಾಣಸಿಗುತ್ತೆ. ನಗರದ ಹೊರವಲಯದ ತಂಪು ಪ್ರದೇಶಗಳಲ್ಲಿ ಹಾವುಗಳು ಹೆಚ್ಚಾಗಿ ಕಾಣ ಸಿಗುತ್ತವೆ. ಕೆ.ಆರ್.ಪುರಂ, ಬಾಣಸವಾಡಿ, ವೈಟ್ ಫೀಲ್ಡ್, ಬೊಮ್ಮನಹಳ್ಳಿ, ಪದ್ಮನಾಭನಗರ, ಎಚ್‌ಎಸ್‌ಆರ್ ಲೇಔಟ್, ರಾರಾಜೇಶ್ವರಿ ನಗರ, ನಾಗರಭಾವಿ, ಹೆಬ್ಬಾಳ ಮತ್ತು ಎಂಎಸ್ ಪಾಳ್ಯ ಪ್ರದೇಶ ಗಳಲ್ಲಿ ಹಾವುಗಳ ಸಂಖ್ಯೆ ಹೆಚ್ಚಾಗಿದೆ. ಬೆಂಗಳೂರಿನ ಒಳಭಾಗದ ಪ್ರದೇಶಗಳಲ್ಲೂ ವಿಪರೀತ ತ್ಯಾಜ್ಯವಿರುವ ಚಂರಡಿ, ತೆರೆದ ಸ್ಥಳ, ತೆರೆದ ಗಟಾರುಗಳಲ್ಲೂ ಹಾವುಗಳು ಹೆಚ್ಚಾಗಿ ವಾಸಿಸುತ್ತಿವೆ ಎನ್ನುತ್ತಾರೆ ವನ್ಯಜೀವಿ ಕಾರ್ಯಕರ್ತ ಶರತ್ ಆರ್.ಬಾಬು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+