• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಿಖಿಲ್ ಗಿಂತಲೂ ಸುಮಲತಾ ಯೋಗ್ಯ ಅಭ್ಯರ್ಥಿ: ಪ್ರಕಾಶ್ ರೈ

|

ಬೆಂಗಳೂರು, ಏಪ್ರಿಲ್ 11: ಸುಮಲತಾ ಅಂಬರೀಶ್ ಗೆ ಹೋಲಿಸಿದರೆ ನಿಖಿಲ್ ಕುಮಾರಸ್ವಾಮಿ ಅವರಷ್ಟು ಉತ್ತಮ ಅಭ್ಯರ್ಥಿ ಅಲ್ಲ ಎಂದು ನಟ ಪ್ರಕಾಶ್ ರೈ ಹೇಳಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಬೆಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಆಯೋಜಿಸಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಿಖಿಲ್ ಯುವಕ ಆದರೆ ಚುನಾವಣಾ ಕಣದಲ್ಲಿ ವಯಸ್ಸು ಅರ್ಹತೆ ಆಗುವುದಿಲ್ಲ ಎಂದು ಅವರು ಹೇಳಿದ್ದಾರೆ.

'ಜಸ್ಟ್‌ ಆಸ್ಕಿಂಗ್‌' ಬಹುಭಾಷಾ ನಟ ಪ್ರಕಾಶ್ ರೈ ಆಸ್ತಿ ಎಷ್ಟು?

ಸೇವಾ ಮನೋಭಾವ, ನಡತೆ, ಮಾತು, ಅನುಭವ ಇವೆಲ್ಲವೂ ಚುನಾವಣಾ ಕಣದಲ್ಲಿ ಮುಖ್ಯವಾಗುತ್ತದೆ, ಅರ್ಹತೆ ಇದ್ದರೆ ಕುಟುಂಬ ರಾಜಕಾರಣವೂ ಸಹ ಪರಿಗಣನೆಗೆ ಬರುವುದಿಲ್ಲ ಎಂದು ಪ್ರಕಾಶ್ ರೈ ಹೇಳಿದ್ದಾರೆ.

ಸುಮಲತಾ ಅವರಿಗೆ ರಾಜಕೀಯದ ಬಗ್ಗೆ ಸ್ಪಷ್ಟತೆ ಇದೆ, ಅವರು ಗೆಲ್ಲಬೇಕು ಎಂದ ಪ್ರಕಾಶ್ ರೈ, ಸುಮಲತಾ ಅವರಿಗಿಂತಲೂ ಒಳ್ಳೆಯ ಅಭ್ಯರ್ಥಿ ಇದ್ದಿದ್ದರೆ ಅವರನ್ನು ಬೆಂಬಲಿಸಬಹುದಿತ್ತು, ಸುಮಲತಾ ಅವರ ಸ್ಪರ್ಧೆ ಕಾಂಗ್ರೆಸ್‌ಗೆ ನುಂಗಲರಾದ ತುತ್ತಾಗಿದೆ ಎಂದು ಅವರು ಹೇಳಿದರು.

ಕಾಂಗ್ರೆಸ್-ಜೆಡಿಎಸ್ ಮೈತ್ರಿಯನ್ನು ಟೀಕಿಸಿದ ಅವರು, ಎರಡೂ ಪಕ್ಷಗಳು ಕೇವಲ ರಾಜಕೀಯ ಉದ್ದೇಶದಿಂದ ಮೈತ್ರಿ ಮಾಡಿಕೊಂಡಿವೆ. ಆದರೆ ಕಾರ್ಯಕರ್ತರಿಗೆ ಮರ್ಯಾದೆ ಇದೆ ಅವರು ಮೈತ್ರಿಗೆ ಒಪ್ಪುತ್ತಿಲ್ಲ ಎಂದು ಅವರು ಹೇಳಿದರು.

ಮೋದಿ 'ವಿರುದ್ದ' ಮತ ಹಾಕುವಂತೆ ಕಲಾವಿದರ ಭಾರೀ ಅಭಿಯಾನ

ಕಾಂಗ್ರೆಸ್-ಜೆಡಿಎಸ್ ಪಕ್ಷಗಳು 'ನಾವು ಜಾತ್ಯಾತೀತರು' ಎಂದ ತಕ್ಷಣ ನಾವದನ್ನು ನಂಬಿಬಿಡಬೇಕಾ. ಬಿಜೆಪಿಯನ್ನು ಮಾತ್ರವೇ ಏಕೆ ಬೈಯಬೇಕು ಅವರು ಮಾತ್ರವೇ ಕೋಮುವಾದಿಗಳಾ ಎಂದು ಅವರು ಪ್ರಶ್ನಿಸಿದರು.

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಪ್ರಕಾಶ್ ರೈ ಅವರು, ಗೌರಿ ಲಂಕೇಶ್ ಹತ್ಯೆಯಿಂದ ಹುಟ್ಟಿದ ಹೋರಾಟದ ಕೆಚ್ಚಿನಿಂದ ಅಚಾನಕ್ ಆಗಿ ರಾಜಕೀಯಕ್ಕೆ ಬಂದಿದ್ದೇನೆ, ಇನ್ನೂ ಹದಿನೈದು ವರ್ಷ ರಾಜಕೀಯದಲ್ಲಿ ಮುಂದುವರೆಯುತ್ತೇನೆ ಎಂದು ಅವರು ಹೇಳಿದರು.

English summary
Bengaluru central constituency independent candidate Prakash Raj said Sumalatha Ambareesh is better candidate than Nikhil Kumaraswamy in Mandya constituency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X