ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಡ್ಯದ ಜನರ ಆಶಯದಂತೆ ಭವಿಷ್ಯದ ರಾಜಕೀಯ ನಿರ್ಧಾರ: ಸುಮಲತಾ ಸ್ಪಷ್ಟನೆ

|
Google Oneindia Kannada News

ಬೆಂಗಳೂರು, ಏ.4: ಅಂಬರೀಶ್ ಅಭಿಮಾನಿಗಳ ಆಶಯದಂತೆ ಮಂಡ್ಯದ ಜನರಿಗಾಗಿ ಸ್ವತಂತ್ರಳಾಗಿ ಸ್ಪರ್ಧಿಸುತ್ತೇನೆ, ಒಂದು ವೇಳೆ ಗೆದ್ದರೆ ಮಂಡ್ಯದ ಜನರ ಅಭಿಪ್ರಾಯ ಪಡೆದು ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇನೆ ಹೊರತು ನಾನಾಗಿಯೇ ಯಾವ ಪಕ್ಷಕ್ಕೂ ಸೇರುವುದಿಲ್ಲ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಶ್ ಸ್ಪಷ್ಟಪಡಿಸಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಬೆಂಗಳೂರು ಪ್ರೆಸ್‌ಕ್ಲಬ್ ಗುರುವಾರ ಏರ್ಪಡಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು,ಮನಸ್ಸು ಮಾಡಿದ್ದರೆ ರಾಜಕೀಯದಲ್ಲಿ ಅನಾಯಾಸವಾಗಿ ಸ್ಥಾನ-ಮಾನ ಬೇಕಿದ್ದರೆ ಕಾಂಗ್ರೆಸ್‌ನಿಂದ ರಾಜ್ಯಸಭೆಗೋ, ಜೆಡಿಎಸ್‌ನಿಂದ ವಿಧಾನಪರಿಷತ್‌ಗೋ ನೇಮಕಗೊಂಡು ಸಂತೋಷದಿಂದ ಇರಬಹುದಾಗಿತ್ತು.

ಸುಮಲತಾ ಜಾತಿ ಪ್ರಸ್ತಾಪಿಸಿದ ಶಿವರಾಮೇಗೌಡ ವಿರುದ್ಧ ಕ್ರಮ: ಎಚ್ ವಿಶ್ವನಾಥ್ ಸುಮಲತಾ ಜಾತಿ ಪ್ರಸ್ತಾಪಿಸಿದ ಶಿವರಾಮೇಗೌಡ ವಿರುದ್ಧ ಕ್ರಮ: ಎಚ್ ವಿಶ್ವನಾಥ್

ಆದರೆ ಅಂಬರೀಶ್ ತಮ್ಮ ಜೀವನದಲ್ಲಿ ಮಂಡ್ಯದ ಜನರ ಹಿತವನ್ನು ಬಿಟ್ಟು ಬೇರಾವುದಕ್ಕೂ ಆಸೆ ಪಡಲಿಲ್ಲ. ಅವರು ಮಾಡಿದ ಕೆಲಸವನ್ನು ಪೂರ್ಣಗೊಳಿಸುವವರೆಗೆ ನಾನು ಯಾರಿಗೂ ಹೆದರಿ ಮಂಡ್ಯದಿಂದ ದೂರವಾಗವ ಮಾತೇ ಇಲ್ಲ ಎಂದು ತಮ್ಮ ವಿರೋಧಿಗಳಿಗೆ ಸ್ಪಷ್ಟ ಸಂದೇಶ ರವಾನಿಸಿದರು.

sumalatha says my political decision will be taken by Mandya people

ಆದರೆ ನನ್ನ ಅಂತಃಸತ್ವ ಮಂಡ್ಯದ ಜನರ ಜೊತೆಗೆ ಬೆರೆತು ಹೋಗಿದೆ. ಹೀಗಾಗಿ ಮಂಡ್ಯದ ಜನರ ಸೇವೆಯೇ ನನ್ನ ಏಕೈಕ ಉದ್ದೇಶ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಶ್ ಸ್ಪಷ್ಟಪಡಿಸಿದ್ದಾರೆ.

ಮಂಡ್ಯದ ಅನೇಕ ಗ್ರಾಮಗಳಲ್ಲಿ ಇಂದಿಗೂ ಜನರು ನೀರು, ಉದ್ಯೋಗ, ಉಪಜೀವನಕ್ಕಾಗಿ ಪರಿತಪಿಸುತ್ತಿದ್ದಾರೆ. ನಾನು ಭೇಟಿಕೊಟ್ಟ ಅನೇಕ ಕಡೆಗಳಲ್ಲಿ ಹೆಣ್ಣುಮಕ್ಕಳು ದಿಕ್ಕಿಲ್ಲದೆ ಮನೆಯಲ್ಲೇ ಕಾಲ ದೂಡುತ್ತಿದ್ದಾರೆ.

ರಾಜ್ಯದ ಸಂಸದರಲ್ಲಿ ಯಾರ ವಿರುದ್ಧ ಎಷ್ಟು ಕ್ರಿಮಿನಲ್ ಪ್ರಕರಣಗಳಿವೆ?

ಬಡ ಹಾಗೂ ಮಧ್ಯಮ ವರ್ಗದ ಮಹಿಳೆ ತಾನಿರುವ ಪ್ರದೇಶದಲ್ಲೇ ದುಡಿಯಲು ಉದ್ಯೋಗ ಬೇಕೆಂದು ಬಯಸುತ್ತಾಳೆ. ಈ ವಿಷಯವನ್ನು ಕೇಂದ್ರವಾಗಿಟ್ಟುಕೊಂಡು ಭವಿಷ್ಯದಲ್ಲಿ ಮಂಡ್ಯದ ಹೆಣ್ಣುಮಕ್ಕಳ, ಬದುಕಿಗೆ ಆಸರೆಯಾಗುವ ಕೆಲಸ ಮಾಡುತ್ತೇನೆ ಎಂದರು.

ಮಂಡ್ಯದ ಹಲವಾರು ಪ್ರದೇಶಗಳಲ್ಲಿ ಈವರೆಗೆ ರಸ್ತೆಗಳಿಲ್ಲ ಎಂದು ಜನರು ಬಂದು ನನ್ನೆದುರು ಹೇಳಿಕೊಳ್ಳುತ್ತಾರೆ, ಅದಕ್ಕೆ ಕಾರಣ ಕೇಳಿದರೆ ಜೆಡಿಎಸ್‌ಗೆ ಮತ ಹಾಕಿಲ್ಲ ಎಂಬ ಕಾರಣಕ್ಕೆ ತಮ್ಮ ಊರಿಗೆ ರಸ್ತೆ ಮಾಡಿಲ್ಲ, ಕುಡಿಯುವ ನೀರು ಕೊಟ್ಟಿಲ್ಲ ಎಂದು ಅಳಲು ತೋಡಿಕೊಳ್ಳುತ್ತಾರೆ. ಇಂತಹ ರಾಜಕೀಯ ದ್ವೇಷ, ಹಗೆತನ ಜನಸಾಮಾನ್ಯರ ಮೇಲೆ ಸಾಧಿಸುವುದನ್ನು ನೋಡಿದರೆ ನನಗೆ ಅಚ್ಚರಿಯಾಗುತ್ತದೆ.

ಜಾತಿ ಬಿಟ್ಟು ಪ್ರಚಾರ ಮಾಡಿ: ಶಿವರಾಮೇಗೌಡರಿಗೆ ಸಚಿವ ಎಂಟಿಬಿ ತರಾಟೆಜಾತಿ ಬಿಟ್ಟು ಪ್ರಚಾರ ಮಾಡಿ: ಶಿವರಾಮೇಗೌಡರಿಗೆ ಸಚಿವ ಎಂಟಿಬಿ ತರಾಟೆ

ಮಂಡ್ಯ ಜಿಲ್ಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಅಕ್ಷರಶಃ ಅನಾಥರಾಗಿದ್ದಾರೆ. ಅವರು ಸ್ವಯಂ ಪ್ರೇರಿತರಾಗಿಯೇ ನನ್ನ ಜೊತೆ ಪ್ರಚಾರಕ್ಕೆ ಬರುತ್ತಿದ್ದಾರೆ. ನನ್ನ ಹಿಂದೆ ಯಾರಿದ್ದಾರೆ ಎಂಬುದು ಗೊತ್ತಿದೆ ಎಂದು ಹೇಳುವ ಮುಖ್ಯಮಂತ್ರಿಗಳಿಗೆ ಮಂಡ್ಯದ ಜನರೇ ನನ್ನ ಬೆನ್ನೆಲುಬು ಎಂಬುದು ಗೊತ್ತಾಗಬೇಕಾಗಿದೆ ಎಂದು ತಿರುಗೇಟು ನೀಡಿದರು.

ಅಂಬರೀಶ್ ನಿಧನದ ನಂತರ ಮಂಡ್ಯ ಜಿಲ್ಲೆಯಲ್ಲಿರುವ ಹಲವಾರು ಸಂಬಂಧಿಗಳು ರಾಜಕೀಯ ಕಾರಣಕ್ಕಾಗಿ ನಮ್ಮಿಂದ ದೂರವಾಗಿದ್ದಾರೆ. ಸಂಬಂಧಿಗಳು ಮಾತ್ರವಲ್ಲ ಅಂಬರೀಶ್ ಅವರ ಜೊತೆ ಹಗಲಿರುಳು ಇರುತ್ತಿದ್ದ ಅನೇಕ ಸ್ನೇಹಿತರು ನಮ್ಮಿಂದ ದೂರ ಸರಿದಿದ್ದಾರೆ.

ಆದರೆ ನಾನು ಯಾರನ್ನೂ ಕೂಡ ವೈಯಕ್ತಿಕವಾಗಿ ದೂರ ಮಾಡುವ ಇಚ್ಛೆ ಹೊಂದಿಲ್ಲ. ವೈಯಕ್ತಿಕ ಸಂಬಂಧವೇ ಬೇರೆ, ರಾಜಕೀಯವೇ ಬೇರೆ. ಚಿತ್ರ ರಂಗದಲ್ಲೂ ನಾನು ಹೀಗೆಯೇ ಇರಬಯಸುತ್ತೇನೆ ಎಂದು ಸ್ಪಷ್ಟಪಡಿಸಿದರು.

English summary
Lok sabha elections 2019: Mandya independent candidate Sumalatha Ambareesh stated that if she win the election she will take political decision only according to people of Mandya.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X