ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕುಮಾರಸ್ವಾಮಿಗೆ ಹಾಸಿಗೆ ಇಲ್ಲ ಎಂದ ಆಸ್ಪತ್ರೆ; ಆರೋಗ್ಯ ಸಚಿವರ ಸ್ಪಷ್ಟನೆ

|
Google Oneindia Kannada News

ಬೆಂಗಳೂರು, ಏಪ್ರಿಲ್ 17: ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಶನಿವಾರ ಕೊರೊನಾ ಸೋಂಕು ದೃಢಪಟ್ಟಿದ್ದು, ಚಿಕಿತ್ಸೆಗೆ ಮಣಿಪಾಲ್ ಆಸ್ಪತ್ರೆ ಸೇರಲು ಬಯಸಿದ ಅವರಿಗೆ ಬೆಡ್ ಸಿಕ್ಕಿಲ್ಲ ಎಂಬ ವಿಚಾರದ ಕುರಿತು ರಾಜ್ಯ ಆರೋಗ್ಯ ಸಚಿವ ಡಾ. ಸುಧಾಕರ್ ಪ್ರತಿಕ್ರಿಯೆ ನೀಡಿದ್ದಾರೆ.

ಶನಿವಾರ ವಿಧಾನಸೌಧದಲ್ಲಿ ಮಾತನಾಡಿದ ಅವರು, "ನಾನೇ ಖುದ್ದಾಗಿ ಕುಮಾರಸ್ವಾಮಿ ಅವರ ಹತ್ತಿರ ಮಾತಾಡಿದ್ದೇನೆ. ಮಣಿಪಾಲ್ ಆಸ್ಪತ್ರೆಯವರ ಜತೆ ಕೂಡ ಮಾತಾಡಿದ್ದೇನೆ. ನನಗೆ ಸರ್ಜರಿಯಾಗಿದೆ. ಅಪೋಲೊದಲ್ಲಿ ಸಂಬಂಧಪಟ್ಟ ವೈದ್ಯರಿದ್ದಾರೆ. ಹೀಗಾಗಿ ನಾನು ಅಲ್ಲೇ ಹೋಗುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು" ಎಂದಿದ್ದಾರೆ.

ಕೊರೊನಾ ಸೋಂಕಿಗೆ ತುತ್ತಾದ ಕುಮಾರಸ್ವಾಮಿಗೆ ಬೆಡ್ ಇಲ್ಲ ಎಂದ ಮಣಿಪಾಲ್ ಆಸ್ಪತ್ರೆಕೊರೊನಾ ಸೋಂಕಿಗೆ ತುತ್ತಾದ ಕುಮಾರಸ್ವಾಮಿಗೆ ಬೆಡ್ ಇಲ್ಲ ಎಂದ ಮಣಿಪಾಲ್ ಆಸ್ಪತ್ರೆ

"ಕುಮಾರ ಸ್ವಾಮಿ ಅವರಿಗೆ ಅಪೋಲೊ ಆಸ್ಪತ್ರೆಯ ಸಿಇಒ ಬಳಿ ಸರ್ಕಾರದ ಪರವಾಗಿ ಮಾತಾಡುತ್ತೇವೆ ಎಂದು ತಿಳಿಸಿ, ತಾವು ಆದಷ್ಟು ಬೇಗ ಗುಣಮುಖರಾಗಿ ಬನ್ನಿ ಅಂತ ಹೇಳಿದ್ದೆ. ಅವರಿಗೆ ಈಗ ಮಣಿಪಾಲ್ ನಲ್ಲಿ ಹಾಸಿಗೆ ಸಿದ್ಧವಿದೆ. ಈ ಮಾಹಿತಿಯನ್ನು ಖುದ್ದಾಗಿ ಎಚ್‌ಡಿಕೆಯಿಂದ ಪಡೆದಿದ್ದೇನೆ" ಎಂದು ಹೇಳಿದರು. ಆಸ್ಪತ್ರೆಯಲ್ಲಿ ಕುಮಾರಸ್ವಾಮಿ ಅವರಿಗೆ ಹಾಸಿಗೆ ಸಿಗುತ್ತಿಲ್ಲ ಎಂಬುದು ಸರಿಯಲ್ಲ, ಇದು ಅನಗತ್ಯ ಎಂದಿದ್ದಾರೆ.

 Sudhakar Reaction To Allegation Over No Availability Of Bed For Kumaraswamy In Manipal Hospital

Recommended Video

ಕುಂಭಮೇಳದಲ್ಲಿ 3,700ಕ್ಕೂ ಅಧಿಕ ಜನರಿಗೆ ಸೋಂಕು | Oneindia Kannada

ಕೊರೊನಾ ದೃಢಪಡುತ್ತಿದ್ದಂತೆ ಮಣಿಪಾಲ್ ಆಸ್ಪತ್ರೆ ಸೇರಲು ನಿರ್ಧರಿಸಿದ ಕುಮಾರಸ್ವಾಮಿ ಅವರು ಸಂಬಂಧಿಸಿದವರನ್ನು ಸಂಪರ್ಕಿಸಿದರೆ, ಬೆಡ್ ಇಲ್ಲ ಎಂಬ ಉತ್ತರ ಸಿಕ್ಕಿದ್ದು, ಈ ವಿಷಯ ತಿಳಿದ ಕೂಡಲೇ ಆರೋಗ್ಯ ಸಚಿವ ಸುಧಾಕರ್ ಅವರು ಮಣಿಪಾಲ್ ಆಸ್ಪತ್ರೆಯಲ್ಲಿ ಹಾಸಿಗೆ ದೊರಕಿಸಿಕೊಡಲು ಯತ್ನಿಸಿದ್ದಾರಾದರೂ ಅದು ಫಲ ಕೊಟ್ಟಿಲ್ಲ ಎಂಬ ಮಾತು ಕೇಳಿಬಂದಿತ್ತು.

English summary
Health minister K Sudhakar reacted to allegation over no availability of bed for HD Kumaraswamy in manipal hospital
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X