ಅನಾರೋಗ್ಯದಿಂದ ಆರು ತಿಂಗಳ ಕಂದಮ್ಮ ಸಾವು: ಅಗಲಿಕೆ ನೋವಿಂದ ತಾಯಿ ಆತ್ಮಹತ್ಯೆ !

ಬೆಂಗಳೂರು, ಫೆ. 15: ' ಕಂದಾ ನಾನು ನಿನಗೆ ಜನ್ಮ ಕೊಟ್ಟಾಗ ಆದ ಸಂತೋಷ ಅಷ್ಟಿಷ್ಟಲ್ಲ. ನನ್ನ ಜಗತ್ತೇ ನೀನೆ ಎಂದು ನಿನ್ನ ಉಸಿರಲ್ಲಿ ಉಸಿರಾಡುತ್ತಿದ್ದೆ. ಮುದ್ದು ಕಂದ ನೀನೇ ಇಲ್ಲದ ಮೇಲೆ ನಾನು ಈ ಭೂಮಿ ಮೇಲೆ ಒಂದು ಕ್ಷಣ ಇರಲು ಸಾಧ್ಯವಿಲ್ಲ. ನಿನ್ನ ಹಾರೈಕೆ ನಾನೇ ಬರ್ತೇನೆ. ನಿನ್ನೊಂದಿಗೆ ನಾನು ಇರ್ತೇನೆ.. !'-ತಾಯಿ ಬರೆದ ಡೆತ್ ನೋಟ್

ಹೌದು. ಅನಾರೋಗ್ಯಕ್ಕೆ ತುತ್ತಾಗಿ ಆರು ತಿಂಗಳ ಕೂಸು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ತಾಯಿ ಕೂಡ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಬೆಂಗಳೂರಿನ ಸುದ್ದುಗುಂಟೆಪಾಳ್ಯದಲ್ಲಿ ನಡೆದಿದೆ.

ನಾಗಮಂಗಲ ಮೂಲದ ಪಲ್ಲವಿ ಮೂರು ವರ್ಷದ ಹಿಂದೆ ವೃತ್ತಿಯಲ್ಲಿ ಲ್ಯಾಬ್ ಟೆಕ್ನೀಷಿಯನ್ ಆಗಿದ್ದ ಸಿದ್ದು ಎಂಬುವರನ್ನು ಮದುವೆಯಾಗಿದ್ದರು. ಇಬ್ಬರಿಗೆ ಆರು ತಿಂಗಳ ಹಿಂದೆ ಗಂಡು ಮಗು ಜನಿಸಿತ್ತು. ಮುದ್ದಾದ ಮಗುವಿನೊಂದಿಗೆ ತಾಯಿ ಪಲ್ಲವಿ ಕಾಲ ಕಳೆಯುತ್ತಿದ್ದಳು. ಆದರೆ ವಿಧಿ ಬರಹ ಬೇರೆಯದ್ದೇ ಆಗಿತ್ತು. ಅವಧಿ ಮುನ್ನ ಜನಿಸಿದ್ದ ಮಗುವಿಗೆ ಹೃದಯ ಸಂಬಂಧಿ ಕಾಯಿಲೆ ಕಾಣಿಸಿಕೊಂಡಿತ್ತು. ಎಲ್ಲಾ ಆಸ್ಪತ್ರೆಗಳಿಗೆ ಸುತ್ತಾಡಿ ಚಕಿತ್ಸೆ ಕೊಡಿಸಿದ್ದರು. ಆದರೆ ವಿಧಿಯಾಟ ಬೇರೆಯದ್ದೇ ಆಗಿತ್ತು.

Bengaluru: Suddugunte Palya Woman Commits Suicide After Her 6 Month Old Baby Dies Due to Illness

ಮಗು ಸಾವು: ಅನಾರೋಗ್ಯದಿಂದ ಬಳಲುತ್ತಿದ್ದ ಮುದ್ದಾದ ಮಗು ಉಸಿರಾಟದ ಸಮಸ್ಯೆಯಿಂದ ಫೆ. 14 ರಂದು ಬೆಳಗ್ಗೆ ಸಾವನ್ನಪ್ಪಿತ್ತು. ಮಗುವಿನ ಸಾವು ನೋಡಿ ತಾಯಿ ಕುಸಿದು ಬಿದ್ದಿದ್ದಳು. ತಬ್ಬಿಕೊಂಡು ಗೋಳಾಡಿದ್ದಳು. ಬೇರೆ ದಾರಿಯಿಲ್ಲದೇ ಮಗುವಿನ ಅಂತ್ಯ ಸಂಸ್ಕಾರ ಮುಗಿಸಿ ಮನೆಗೆ ಬಂದಿದ್ದರು. ಮಗುವಿನ ಅಗಲಿಕೆಯಿಂದ ನೊಂದ ತಾಯಿ ಪಲ್ಲವಿ ಕೂಡ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಹಿಂದೆ ಅಬಾರ್ಷನ್ ಗೆ ಒಳಗಾಗಿದ್ದ ಪಲ್ಲವಿ ಮಾನಸಿಕವಾಗಿ ನೊಂದಿದ್ದಳು. ಆ ಬಳಿಕ ಗಂಡುಮಗುವಾದ ಬಳಿಕ ಪಲ್ಲವಿ ಖುಷಿಯಲ್ಲಿ ತೇಲಾಡಿದ್ದಳು. ಆದರೆ ಆ ಖುಷಿ ಶಾಶ್ವತವಾಗಿ ಉಳಿಯಲಿಲ್ಲ. ಮಗು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಪಲ್ಲವಿ ತನ್ನ ಮುದ್ದು ಕಂದಮ್ಮನ ಬಿಟ್ಟು ಇರಲಾರೆ ಎಂದು ಡೆತ್ ನೋಟ್ ಬರೆದಿಟ್ಟು ತನ್ನ ಬದುಕನ್ನೂ ಅಂತ್ಯಗೊಳಿಸಿದ್ದಾಳೆ.

ಕೆಲಸ ಮುಗಿಸಿ ಮನೆಗೆ ಬಂದ ಬಳಿಕ ಪತಿ ಸಿದ್ದುಗೆ ವಿಷಯ ಗೊತ್ತಾಗಿದೆ. ಕೂಡಲೇ ಆಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದಾರೆ. ಅಷ್ಟರಲ್ಲಿ ಪಲ್ಲವಿ ಮೃತಪಟ್ಟಿರುವುದು ಖಚಿತ ಪಟ್ಟಿದೆ. ಇನ್ನು ಪಲ್ಲವಿ ಪೋಷಕರು ಮಗಳ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಸುದ್ದುಗುಂಟೆ ಪಾಳ್ಯ ಪೊಲೀಸರಿಗೆ ದೂರು ನೀಡಿದ್ದಾರೆ. ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Helplines: COOJ Mental Health Foundation (COOJ)- 0832-2252525, ಪರಿವರ್ತನ್- +91 7676 602 602, Connecting Trust- +91 992 200 1122/+91-992 200 4305 or Sahai- 080-25497777/ [email protected]

ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ ಸ್ನೇಹಾ ಫೌಂಡೇಷನ್ ಸಹಾಯವಾಣಿ ಇಂತಿದೆ: 04424640050, ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸ್ 02225521111ಗೆ ಕರೆ ಮಾಡಬಹುದು.

Recommended Video

      RCB ಆಟಗಾರರ ಕಾಂಬಿನೇಷನ್ ನೋಡಿದ್ರೆ ಗ್ಯಾರೆಂಟಿ ಕಪ್ ನಮ್ದೇ | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+