Suburban rail: ಹೀಲಲಿ-ರಾಜಾನುಕುಂಟೆ 'ಕನಕ' ಕಾರಿಡಾರ್ ಬಗ್ಗೆ ಸಿಹಿ ಸುದ್ದಿ, ಜನವರಿಗೆ ಕಾಮಗಾರಿ ಆರಂಭ

ಬೆಂಗಳೂರು, ಡಿಸೆಂಬರ್ 26: ಬೆಂಗಳೂರಿನ ಪಾಲಿಗೆ ವರದಾನವಾಗಿರುವ ಉಪ ನಗರ ರೈಲು ಯೋಜನೆಯ (BSRP) ಕೊನೆಯ ಕಾರಿಡಾರ್ ಹೀಲಲಿಗೆ - ರಾಜಾನುಕುಂಟೆ ವರೆಗಿನ 'ಕನಕ' ನಿರ್ಮಾಣ ಸಂಬಂಧಿಸಿದಂತೆ ಇದ್ದ ವಿಘ್ನಗಳು ನಿವಾರಣೆ ಆಗಿವೆ. ಕೆ-ರೈಡ್ ಮತ್ತ ರೈಲ್ವೆ ಇಲಾಖೆ ಮಧ್ಯದ ಭೂಮಿ ಹಸ್ತಾಂತರದ ಜಗಳ ಅಂತ್ಯಗೊಂಡಿದೆ.

'ಹೀಲಲಿಗೆ - ರಾಜಾನುಕುಂಟೆ' 4ನೇ ಕಾರಿಡಾರ್ ಮಾರ್ಗದಲ್ಲಿ ಕಾಮಗಾರಿ ಆರಂಭವಾಗಿರಲಿಲ್ಲ. ಕಾರಣ ಇಲ್ಲಿ ರೈಲ್ವೆ ಇಲಾಖೆಯು ಕರ್ನಾಟಕ ರೈಲ್ ಇನ್‌ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್‌ ಕಂಪನಿಗೆ (K-RIDE) ಅಗತ್ಯ ಭೂಮಿ ನೀಡಿರದ ಕಾರಣ ಈ ಮಾರ್ಗ ನಿರ್ಮಾಣವು ವಿಳಂಬವಾಗಬಹುದು ಎಂದು ಅಂದಾಜಿಸಲಾಗಿತ್ತು.

Suburban Rail: Railway Dept Agree to give Land to K-RIDE For Rajanukunte-Hilali Corridor

ಇದೀಗ ರೈಲ್ವೆ ಇಲಾಖೆಗೆ 115.472 ಎಕರೆ ಭೂಮಿ ಹಸ್ತಾಂತರ ಮಾಡಲು ಒಪ್ಪಿಕೊಂಡಿದೆ. ಭೂಮಿ ಕೊಡದ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆಗೆ ಒಟ್ಟು 194.07 ಎಕರೆ ಭೂಮಿಗೆ ಬೇಡಿಕೆ ಇಟ್ಟಿತ್ತು, ಅದರಲ್ಲಿ ಇಲಾಖೆ 115.472 ಭೂಮಿ ನೀಡುವುದಾಗಿ ಒಪ್ಪಿದೆ. ಭೂಮಿ ಸರ್ವೆ ಆರಂಭಿಸಲಾಗಿದ್ದು, ಮುಂದಿನ ದಿನಗಳಲ್ಲಿ ಹೀಲಲಿಗೆ- ರಾಜಾನುಕುಂಟೆ ಮಾರ್ಗದ ಕಾಮಗಾರಿ ಆರಂಭ ನಿರೀಕ್ಷಿಸಹುದು.

ಭೂಮಿ ಹಸ್ತಾಂತರ ಪ್ರಕ್ರಿಯೆ ನಡೆಯುತ್ತಿವೆ

ಸದ್ಯ ಕೊಟ್ಟಿರುವ ಭೂಮಿಯ ಪೈಕಿ ಕಾಮಗಾರಿಗೆ ಇನ್ನೂ ಶೇಕಡಾ ಐದರಷ್ಟು ಖಾಸಗಿ ಭೂಮಿ ನೀಡಬೇಕಿದೆ. ಸದ್ಯ ಭೂಮಿ ದೊರೆತಿದ್ದು, ಟ್ರ್ಯಾಕ್‌ ಅಲೈನ್‌ಮೆಂಟ್‌ ಅನುಮೋದನೆ ದೊರೆಯುವುದು ಬಾಕಿ ಇದೆ. ಸದ್ಯ ಭೂಮಿ ಹಸ್ತಾಂತರ ಪ್ರಕ್ರಿಯೆಗಳು ನಡೆಯುತ್ತಿವೆ.

ಬೆಂಗಳೂರು ಉಪನಗರ ರೈಲು ಯೋಜನೆಯಲ್ಲಿಯೇ ಈ ನಾಲ್ಕನೇ ಕಾರಿಡಾರ್ 'ಕನಕ' ಹೆಚ್ಚು ಉದ್ದದ ಮಾರ್ಗವಾಗಿದೆ. ಇದರ ಕಾಮಗಾರಿ ಆರಂಭಿಸುವ ಆರಂಭದಿಂದಲೂ ವಿಘ್ನಗಳು ಎದುರಾಗಿದ್ದವು. ಈ ನಾಲ್ಕನೇ ಕಾರಿಡಾರ್ ಮಾರ್ಗ ಸಂಪೂರ್ಣವಾಗಿ ಪೂರ್ಣಗೊಂಡರೆ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶ, ಎಲೆಕ್ಟ್ರಾನಿಕ್ಸ್ ಸಿಟಿ ಸೇರಿದಂತೆ ಇನ್ನಿತರ ಪ್ರದೇಶಗಳ ಸಾಕಷ್ಟು ಜನರಿಗೆ ಅನುಕೂಲವಾಗುತ್ತದೆ ಎಂದು ರೈಲ್ವೆ ಇಲಾಖೆ ಮೂಲಗಳು ತಿಳಿಸಿವೆ.

Suburban Rail: Railway Dept Agree to give Land to K-RIDE For Rajanukunte-Hilali Corridor

ಕಾಮಗಾರಿ ಶೇ.80 ರಷ್ಟು ಭೂಮಿ ಲಭ್ಯವಿರಬೇಕು

ಕೆ-ರೈಡ್ ಅಧಿಕಾರಿಗಳ ಪ್ರಕಾರ, ಈ ರೈಲು ಯೋಜನೆಗೆನೀಡಲು ಗುರುತಿಸಲಾಗಿರುವ ಭೂಮಿ ಪೈಕಿ ಶೇಕಡಾ 80 ಪ್ರತಿಶತದಷ್ಟು ಭೂಮಿ ನಮ್ಮಗೆ ದೊರೆತಿರಬೇಕು. ಅದಾಗ ಕಾಮಗಾರಿಗೆ ಚಾಲನೆ ನೀಡಬಹುದಾಗಿದೆ. ಈ ಕುರಿತು ಒಪ್ಪಿಗೆ ನೀಡಿದ್ದ ರೈಲ್ವೆ ಇಲಾಖೆಯು ಕೆರೈಡ್‌ಗೆ ಭೂಮಿ ನೀಡುವಿಲ್ಲ ವಿಳಂಬವಾಗಿತ್ತು. ಹೀಗಾಗಿ ಉಪನಗರ ರೈಲು ಯೋಜನೆಯ ಈ ನಾಲ್ಕನೇ ಕಾರಿಡಾರ್ ಆರಂಭ ತಡವಾಯಿತು.

ಜನವರಿಗೆ ಸಿಲಿಲ್ ಕೆಲಸ ಆರಂಭ?

ಬಿಎಸ್‌ಆರ್‌ಪಿ ಯೋಜನೆಯ ಕಾರಿಡಾರ್‌ಗೆ 'ಕನಕ' ಮಾರ್ಗದ ಸಿವಿಲ್‌ ಕೆಲಸಗಳನ್ನು ಮುಂದಿನ ವರ್ಷ ಜನರಿಯಲ್ಲಿ ಕೆ - ರೈಡ್‌ ಆರಂಭಿಸಲು ಚಿಂತನೆ ನಡೆಸಿದೆ. ಕಳೆದ ಸೆಪ್ಟೆಂಬರ್‌ನಲ್ಲಿ ಟೆಂಡರ್ ಕರೆಯಲಾಗಿತ್ತು. ಎಲ್‌ ಆ್ಯಂಡ್‌ ಟಿ ಕಂಪನಿ 1,021 ಕೋಟಿ ರೂ. ವೆಚ್ಚ ನಮೂದಿಸಿ ಗುತ್ತಿಗೆ ಪಡೆದುಕೊಂಡಿವೆ. ಭೂಮಿ ಹಸ್ತಾಂತರ ಪ್ರಕ್ರಿಯೆ ಪ್ರಗತಿಯಲ್ಲಿದೆ. 2024ರ ಆರಂಭದಲ್ಲಿ ಪೂರ್ಣಗೊಳಿಸುವಂತೆ ಗುಡುವು ನೀಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+