Get Updates
Get notified of breaking news, exclusive insights, and must-see stories!

Suburban Rail: ನಮ್ಮ ಮೆಟ್ರೋ ಹೋಲುವ ಪರಿಹಾರದ ಪ್ಯಾಕೇಜ್‌ ಅನಷ್ಠಾನಕ್ಕೆ ಸರ್ಕಾರ ಒಪ್ಪಿಗೆ

ಬೆಂಗಳೂರು, ನವೆಂಬರ್ 22: ಬೆಂಗಳೂರು ಉಪನಗರ ರೈಲು ಯೋಜನೆ (BSRP) ನಿರ್ಮಾಣದ ವೇಳೆ ಸ್ವಾಧೀನಪಡಿಸಿಕೊಳ್ಳುವ ಭೂಮಿ, ಆಸ್ತಿಗಳ ಮಾಲೀಕರಿಗೆ ಪರಿಹಾರ ನೀಡುವ ಪರಿಹಾರ ಮತ್ತು ಪುನರ್ವಸತಿ ಪ್ಯಾಕೇಜ್ (CRP) ಗೆ ರಾಜ್ಯ ಸರ್ಕಾರ ಸಹಮತ ವ್ಯಕ್ತಪಡಿಸಿದೆ. ಈ ಪ್ಯಾಕೇಜ್ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ನಂತೆಯೇ ಉತ್ತಮವಾಗಿದೆ ಎಂದು ಕೆ-ರೈಡ್ ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನೂ 12-ಪುಟದ ಪರಿಹಾರ ಮತ್ತು ಪುನರ್ವಸತಿ ಪ್ಯಾಕೇಜ್ (CRP)ಯಲ್ಲಿ ಒಟ್ಟು 15,767-ಕೋಟಿ ಉಲ್ಲೇಖಿಸಲಾಗಿದೆ. ಇಷ್ಟು ಹಣ ಉಪನಗರ ರೈಲು ಯೋಜನೆಗೆ ಆಸ್ತಿ, ಮನೆ, ಭೂಮಿ ಬಿಟ್ಟುಕೊಟ್ಟ ಮಾಲೀಕರಿಗೆ ಸದ್ಯದ ಆಸ್ತಿ ಬೆಲೆ- ಮಾರುಕಟ್ಟೆ ಬೆಲೆ ಎರಡು ಗಮನವಿಟ್ಟುಕೊಂಡು ವರದಿಯಲ್ಲಿ ಉಲ್ಲೇಕಿಸಲಾಗಿದೆ. ಇದರ ಅನುಷ್ಠಾನಕ್ಕೆ ಸರ್ಕಾರ ಒಪ್ಪಿದೆ ಎಂದು ಕರ್ನಾಟಕ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ಕಂಪನಿ (K-RIDE) ಮೂಲಗಳು ತಿಳಿಸಿವೆ.

suburban-rail-project-assets-compensation-package

ಸಿಆರ್‌ಪಿಯಲ್ಲಿ ತಿಳಿಸಿರುವಂತೆ ಸ್ವಾಧೀನಪಡಿಸಿಕೊಳ್ಳಬೇಕಾದ ಭೂಮಿಗೆ ಮಾರ್ಗದರ್ಶನ ಮೌಲ್ಯ ಅಥವಾ ಭೂಮಿಯ ಮಾರುಕಟ್ಟೆ ಮೌಲ್ಯದಷ್ಟು ಹಣ ಪಾವತಿಸಲಾಗುವುದು. ಸ್ವಾಧೀನಪಡಿಸಿಕೊಂಡ ಭೂಮಿಗಳ ಪರಿಹಾರವನ್ನು ಶೇಕಡಾ 100ರಷ್ಟು ಸೊಲಾಟಿಯಂ ಮತ್ತು ವಾರ್ಷಿಕವಾಗಿ ಹೆಚ್ಚಾಗುವ ಮಾರುಕಟ್ಟೆಯ ಶೇ.12 ಮೌಲ್ಯವನ್ನು ಪರಿಗಣಿಸಿ ಫಲಾನುಭವಿಗಳಿಗೆ ನೀಡಲು ನಿರ್ಧರಿಸಲಾಗಿದೆ.

ಸಿಆರ್‌ಪಿಯಲ್ಲಿ ವಿವಿಧ ಅಂಶಗಳು

ಯೋಜನೆ ವ್ಯಾಪ್ತಿಗೆ ಒಳಪಟ್ಟ ಸ್ಲಂ ನಿವಾಸಿಗಳಿಗೆ ವಸತಿ ಬೆಂಬಲ ಅನುದಾನವಾಗಿ ರೂ 5 ಲಕ್ಷ ನೀಡಲಾಗುವುದು. ಇದರೊಂದಿಗೆ ಮಾಲೀಕರ ವರ್ಗಗಳ (ಮನೆ-ವಾಣಿಜ್ಯ-ಸ್ಲಂ) ವಿವರಗಳು ಮತ್ತು ಪರಿಹಾರದ ಜೊತೆಗೆ ಪಾವತಿಸಬೇಕಾದ ಶಿಫ್ಟಿಂಗ್ ಭತ್ಯೆ, ಮತ್ತು ನಿವಾಸ ಬದಲಾಯಿಸುವ ಭತ್ಯೆಯ ಅಂಶಗಳನ್ನು ಸಿಆರ್‌ಪಿಯಲ್ಲಿ ತಿಳಿಸಲಾಗಿದೆ.

ಉದಾಹರಣೆಗೆ ವ್ಯಕ್ತಿಯೊಬ್ಬರು ಆಸ್ತಿ ಮತ್ತು ಮನೆಯನ್ನು ಕಳೆದುಕೊಂಡಿದ್ದರೆ ಅವರಿಗೆ ಈ ಕೆಳಗಿನವುಗಳನ್ನು ಭತ್ಯೆಯಾಗಿ ಪಾವತಿಸಲಾಗುತ್ತದೆ. 1,000 ಚದರ ಅಡಿವರೆಗಿನ ಸ್ವಾಧೀನಕ್ಕೆ 25,000 ರೂಪಾಯಿ, 1,001 ಚದರ ಅಡಿಗೆ ಪ್ರತಿ ಚ.ಅಡಿಗೆ 1,500 ರೂನಂತರ ಒಟ್ಟು 30,000ರೂ. 1,500 ಚದರ ಅಡಿಗಿಂತ ಹೆಚ್ಚು ಸ್ವಾಧೀನವಾಗಿದ್ದರೆ 35,000 ರೂ. ಒಂದು ಬಾರಿ ಅನನುಕೂಲತೆ ಭತ್ಯೆ ಪಾವತಿ 70,000 ರೂಪಾಯಿ ಪಾವತಿಸಲಾಗುವುದು ಎಂದು ಪ್ಯಾಕೇಜ್ ನಲ್ಲಿ ವಿವರಿಸಲಾಗಿದೆ.

suburban-rail-project-assets-compensation-package

ಮೆಟ್ರೋ ಮಾದರಿಯ ಉತ್ತಮ ಪ್ಯಾಕೇಜ್

ಬೆಂಗಳೂರು ಮೆಟ್ರೋ ಮಾದರಿಯಲ್ಲಿರುವ ಇದೊಂದು ಅತ್ಯುತ್ತಮ ಪರಿಹಾರ ಪ್ಯಾಕೇಜ್ ಎಂದು ಕೆ-ರೈಡ್‌ನ ಹಿರಿಯ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಉಪನಗರ ರೈಲು ಯೋಜನೆಗಾಗಿ ಬಳಕೆ ಆಗುವ ಸುಮಾರು ಶೇಕಡಾ 90 ಭೂಮಿ ಭಾರತೀಯ ರೈಲ್ವೇ ಒದಗಿಸಲಿದೆ. ಈ ವೇಳೆ ಖಾಸಗಿ ಭೂಮಾಲೀಕರಿಗೆ ಅವರ ಮನೆ ಸ್ಥಳಾಂತರ ಅಥವಾ ಮನೆ-ಆಸ್ತಿ ಭಾಗ ಯೋಜನೆ ನೀಡುವಾಗ ಅದನ್ನು ಪರಿಹಾರಕ್ಕೆ ಹೋಲಿಕೆ ಮಾಡಿದರೆ ಗಣನೀಯವಾಗಿ ಕಡಿಮೆ ಇರುತ್ತದೆ ಎಂದರು.

ಉಪನಗರ ರೈಲು ಯೋಜನೆಗೆ ವ್ಯಾಪ್ತಿಗೆ ಒಳಪಟ್ಟ ನಿಖರ ಆಸ್ತಿಗಳ ಸಂಖ್ಯೆ ಮತ್ತು ಯೋಜನೆ ಪರಿಣಾಮ ಬೀರುವ ವ್ಯಕ್ತಿಗಳ ಕುರಿತು ಸಮೀಕ್ಷೆ ನಡೆಸಲಾಗುತ್ತಿದೆ. ಸಮೀಕ್ಷೆ ಬಳಿಕ ಸಿದ್ಧವಾಗಿರುವ ಪ್ಯಾಕೇಜ್ ಅಡಿಯಲ್ಲಿ ಮಾಲೀಕರಿಗೆ ಪರಿಹಾರ ನೀಡಲು ಸಾಧ್ಯವಾಗಲಿದೆ ಎಂದು TNIEಗೆ ಕೆರೈಡ್ ಅಧಿಕಾರಿಗಳು ತಿಳಿಸಿದ್ದಾರೆ.

ಕಾರಿಡಾರ್-2ಕ್ಕೆ ಈ 40 ಆಸ್ತಿಗಳು ಅಗತ್ಯ

ನಗರದ ಮತ್ತಿಕೆರೆಯಲ್ಲಿ ಕೊಳಚೆ ಪ್ರದೇಶದಲ್ಲಿರುವ ಜಯರಾಮ್ ಕಾಲೋನಿಯ 40 ಮನೆಗಳು ಹಾನಿಗೊಳಗಾಗುವ ಸಾಧ್ಯತೆ ಇದೆ. ನಮ್ಮ ಕಾರಿಡಾರ್-2 ಯೋಜನೆಗೆ (ಬೆಣ್ಣಿಗೇನಹಳ್ಳಿ-ಚಿಕ್ಕಬಾಣಾವರ) ಇಷ್ಟು ಮನೆಗಳ ಅಗತ್ಯತೆ ಇದೆ. ಈ ಕುರಿತು ಮಾತುಕತೆ ನಡೆದಿದ್ದು, ಯೋಜನೆ ಆರಂಭಕ್ಕೆ ನಿರ್ಧರಿಸಲಾಗಿದೆ.

ಹೀಲಲಿಗೆ-ರಾಜನಗುಂಟೆ ವರೆಗಿನ ಕಾರಿಡಾರ್-4 ವಿಸ್ತರಣೆಗೆ ಸಂಬಂಧಿಸಿದಂತೆ ಕೆಆರ್ ಪುರದ ಸಮೀಪ 138 ಆಸ್ತಿಗಳು ಅಗತ್ಯವಿದೆ. ಇಲ್ಲಿನ ಭೂ ಮಾಲೀಕರಿಗೆ ನಿರ್ದಿಷ್ಟ ಪರಿಹಾರದ ಕುರಿತು ತಿಳಿಸಲು ಸಾಧ್ಯವಾಗಿಲ್ಲ. ಇಲ್ಲಿನದ್ದು ಕಂದಾಯ ಭೂಮಿಯೇ, ಬಿಡಿಎ ಭೂಮಿಯೇ ಇಲ್ಲ ಸ್ವಾಧೀನಕ್ಕೆ ಒಳಪಡುವ ಆಸ್ತಿ ವ್ಯಕ್ತಿ ಹೆಸರಿನಲ್ಲಿದೆಯೆ ಎಂಬ ಆಧಾರದ ಮೇಲೆ ಪರಿಹಾರ ಕ್ರಮಗಳು ಬದಲಾಗುತ್ತವೆ ಎಂದು ಕೆರೈಡ್ ತಿಳಿಸಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+