ಬೆಂಗಳೂರಿನ ಸಬ್‌ಅರ್ಬನ್ ರೈಲು ಕಾರಿಡಾರ್‌ಗಳಿಗೆ ಹೂವುಗಳ ಹೆಸರು

ಬೆಂಗಳೂರು, ಮಾರ್ಚ್ 08: ಬೆಂಗಳೂರು ನಗರ ಕಾತುರದಿಂದ ಕಾಯುತ್ತಿರುವ 148 ಕಿ.ಮೀ ಉದ್ದದ ಸಬ್‌ಅರ್ಬನ್ ರೈಲು ಕಾರಿಡಾರ್‌ಗಳಿಗೆ ಕನ್ನಡದ ಹೂವುಗಳ ಹೆಸರು ನಾಮಕರಣ ಮಾಡಲಾಗುತ್ತಿದೆ.

ನಗರದ ನಾಲ್ಕು ಉಪನಗರ ರೈಲು ಕಾರಿಡಾರ್‌ಗಳಿಗೆ ಸಂಪಿಗೆ, ಮಲ್ಲಿಗೆ, ಪಾರಿಜಾತಾ, ಕನಕ ಎಂದು ಹೆಸರಿಡಲು ನಿರ್ಧರಿಸಲಾಗಿದೆ. ಕೆ-ರೈಡ್ ರಾಜ್ಯ ಸರ್ಕಾರ ಮತ್ತು ರೈಲ್ವೆ ಸಚಿವಾಲಯ ಜಂಟಿಯಾಗಿ ಯೋಜನೆ ರೂಪಿಸಿದೆ.

ಮೂಲಗಳು ಪ್ರಕಾರ, ಹೂವುಗಳನ್ನು ಆರಿಸಿಕೊಂಡಿರುವುದು ಸಂಪಿಗೆ(Sampige), ಮಲ್ಲಿಗೆ(Mallige), ಪಾರಿಜಾತ(Parijaata), ಕನಕ(Kanaka). ಇದರ ಮೊದಲ ಅಕ್ಷರ ಆರಿಸಿಕೊಂಡರೆ ಅದು 'ಸಂಪರ್ಕ' ಎಂದಾಗುತ್ತದೆ.

Bengaluru Suburban Rail Corridors May Be Named After Flowers

ಮೆಜೆಸ್ಟಿಕ್ ಬಸ್‌ ನಿಲ್ದಾಣದೆದುರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣವಿದೆ. ಯಲಹಂಕ-ದೇವನಹಳ್ಳಿ ಕಾರಿಡಾರ್‌ಗೆ ಸಂಪಿಗೆ, ಬೈಯಪ್ಪನಹಳ್ಳಿ -ಯಶವಂತಪುರ-ಚಿಕ್ಕಬಾಣಾವರ ಕಾರಿಡಾರ್‌ಗೆ ಮಲ್ಲಿಗೆ, ಕೆಂಗೇರಿ-ಕಂಟೋನ್ಮೆಂಟ್-ವೈಟ್‌ಫೀಲ್ಡ್ ಕಾರಿಡಾರ್‌ಗೆ ಪಾರಿಜಾತಾ ಹಾಗೂ ಹೀಳಲಿಗೆ, ಯಲಹಂಕ-ರಾಜಾನುಕುಂಟೆ ಕಾರಿಡಾರ್‌ಗೆ ಕನಕ ಎಂದು ನಾಮಕರಣ ಮಾಡಲಾಗುತ್ತದೆ.

ಮೊದಲು ಕನಕ ಹಾಗೂ ಮಲ್ಲಿಗೆ ಕಾರಿಡಾರ್ ಕಾರ್ಯ ನಿರ್ಮಾಣವಾಗುತ್ತದೆ. ನಗರದ ನಮ್ಮ ಮೆಟ್ರೋಗೆ ಹಸಿರು, ನೇರಳೆ, ಹಳದಿ, ಗುಲಾಬಿ, ನೀಲಿ ಬಣ್ಣಗಳ ಹೆಸರಿಟ್ಟಂತೆ, ಉಪನಗರ ರೈಲು ಕಾರಿಡಾರ್‌ಗೆ ಹೂವುಗಳ ಹೆಸರಿಡಲು ಚಿಂತನೆ ನಡೆಸಲಾಗಿದೆ.

ಇದು 16,000 ಕೋಟಿ ವೆಚ್ಚದ ಯೋಜನೆಯಾಗಿದ್ದು, 148 ಕಿ.ಮೀ ವ್ಯಾಪ್ತಿಯನ್ನು ಹೊಂದಿದೆ. ಎಲ್ಲಾ ಕಾರಿಡಾರ್‌ಗಳು ಸೇರಿ ಒಟ್ಟು 57 ನಿಲ್ದಾಣಗಳು ಬರಲಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+