ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದ್ರಾವಿಡ್ ಸಾಧನೆ ಪಠ್ಯ ಪುಸ್ತಕ ರೂಪದಲ್ಲಿ ಲಭ್ಯ

By Mahesh
|
Google Oneindia Kannada News

ಬೆಂಗಳೂರು, ಮೇ.25: ಭಾರತೀಯ ಕ್ರಿಕೆಟ್ ನ ಅದ್ಭುತ ಆಟಗಾರ, ಮಾಜಿ ಕ್ರಿಕೆಟರ್ ರಾಹುಲ್ ದ್ರಾವಿಡ್ ಅವರ ಸಾಧನೆ ಈಗ ಪಠ್ಯ ಪುಸ್ತಕ ರೂಪದಲ್ಲಿ ಲಭ್ಯವಿದೆ. ಹತ್ತನೇ ತರಗತಿಯ ಎರಡನೇ ಭಾಷಾ ವಿಷಯ ಕನ್ನಡದಲ್ಲಿ ರಾಹುಲ್ ಬಗ್ಗೆ ಓದಬಹುದು.

ಕ್ರಿಕೆಟ್ ಜಗತ್ತಿನ ಜಂಟಲ್ ಮ್ಯಾನ್ ರಾಹುಲ್ ಬಗ್ಗೆ ಎರಡನೇ ಪಾಠದಲ್ಲಿ ರಾಹುಲ್ ಅವರು ಕ್ರಿಕೆಟ್ ಜಗತ್ತಿನ ದಿಗ್ಗಜರಾಗಿ ಬೆಳೆದ ಬಗ್ಗೆ ಸಂಪೂರ್ಣ ವಿವರಗಳಿವೆ. ರಾಹುಲ್ ಅವರು 134 ಟೆಸ್ ಪಂದ್ಯಗಳಲ್ಲಿ 13,000ಕ್ಕೂ ಅಧಿಕ ರನ್ ಗಳಿಸಿದ್ದು, ಏಕದಿನ ಕ್ರಿಕೆಟ್ ನಲ್ಲಿ 344 ಪಂದ್ಯಗಳಲ್ಲಿ 11,000ಕ್ಕೂ ಅಧಿಕ ರನ್ ಕಲೆ ಹಾಕಿದ್ದಾರೆ.

12ನೇ ವಯಸ್ಸಿನಲ್ಲೇ ಕ್ರಿಕೆಟ್ ಬಗ್ಗೆ ವ್ಯಾಮೋಹ ಬೆಳೆಸಿಕೊಂಡ ರಾಹುಲ್ ಅವರು ಕರ್ನಾಟಕ ರಣಜಿ ಟ್ರೋಫಿ ಪಂದ್ಯಾವಳಿಗಾಗಿ 1991ರಲ್ಲಿ ಆಡಿದ್ದು, ಭಾರತ ತಂಡದ ಸದಸ್ಯನಾಗಿ 1996ರಲ್ಲಿ ಸೇರಿದ್ದು, ಉತ್ತಮ ಫೀಲ್ಡರ್, ವಿಕೆಟ್ ಕೀಪರ್ ಆಗಿ ಕೂಡಾ ಗುರುತಿಸಿಕೊಂಡಿದ್ದನ್ನು ವಿವರಿಸಲಾಗಿದೆ.[ಪಠ್ಯ ಪುಸ್ತಕ ಸೇರಿದ 'ಕ್ರಿಕೆಟ್ ದೇವರು']

Students to study Rahul Dravid to score marks

ದ್ರಾವಿಡ್ ಸರ್ ನೇಮ್ ಬಗ್ಗೆ ಕೂಡಾ ವಿವರಣೆ ಇದೆ. ತಂಜಾವೂರು ಮೂಲದ ಅರ್ಚಕ ಸಮುದಾಯಕ್ಕೆ ಸೇರಿದ ದ್ರಾವಿಡರು ಇಂದೋರ್ ಗೆ ಹೋಗಿ ನೆಲೆಸಿದ್ದರು, ಇಂದೋರ್ ನಲ್ಲಿ ರಾಹುಲ್ ಜನನವಾಗಿದೆ. ಆದ್ರೆ, ದಕ್ಷಿಣದಿಂದ ಬಂದವರು ಎಂದು ದ್ರಾವಿಡ್ ಎಂಬ ಹೆಸರು ಜತೆಯಲ್ಲಿ ಕೂಡಿಕೊಂಡಿದೆ.
ದ್ರಾವಿಡ್ ಸಾಧನೆ ಬಗ್ಗೆ ಮಾತನಾಡಿದ ತಾಯಿ ಪುಷ್ಪಾ ಅವರು ಮಗನ ಸಾಧನೆ ಮಕ್ಕಳಿಗೆ ಪಠ್ಯ ಪುಸ್ತಕವಾಗಿರುವುದು ಹೆಮ್ಮೆಯ ವಿಷಯ ಎಂದಿದ್ದಾರೆ. ಬೆಂಗಳೂರು ವಿವಿಯಲ್ಲಿ ಆರ್ಕಿಟೆಕ್ಚರ್ ವಿಭಾಗದಲ್ಲಿ ಉಪನ್ಯಾಸಕಿಯಾಗಿದ್ದ ಪುಷ್ಪಾ ಅವರು ರಾಹುಲ್ ಜೀವನ ಅನುಕರಣೀಯ ಕಠಿಣ ಪರಿಶ್ರಮ, ಸಾಧನೆಗೆ ಕಾರಣ ಎಂದಿದ್ದಾರೆ.

ರಾಹುಲ್ ದ್ರಾವಿಡ್ ಸದಾಕಾಲ ಶಿಕ್ಷಣದ ಮಹತ್ವದ ಬಗ್ಗೆ ಹೇಳುತ್ತಿರುತ್ತಿದ್ದ. ಭಾರತೀಯ ಕ್ರಿಕೆಟ್ ತಂಡಕ್ಕೆ ಮೊದಲ ಬಾರಿಗೆ ಆಯ್ಕೆಯಾದ ಸಂದರ್ಭದಲ್ಲಿ ಆತ ಎರಡನೇ ಸೆಮಿಸ್ಟರ್ ಎಂಬಿಎ ಪರೀಕ್ಷೆ ಬರೆದಿದ್ದ. ಕ್ರೀಡೆಯ ಬಗ್ಗೆ ಇದ್ದ ವ್ಯಾಮೋಹದ ಜತೆಗೆ ವಿದ್ಯೆಯ ಮಹತ್ವದ ಬಗ್ಗೆ ದ್ರಾವಿಡ್ ಎಚ್ಚರದಿಂದಿರುತ್ತಿದ್ದ ಎಂದು ಪುಷ್ಪಾ ಅವರು ಹೇಳಿದ್ದಾರೆ.

English summary
Former Indian top-order batsman Rahul Dravid has made another debut. He has made it into the second language Kannada textbook for Std X reports Bangalore Mirror.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X