ಸೌತ್‌ ಎಂಡ್ ವೃತ್ತದ ನಮ್ಮ ಮೆಟ್ರೋ ಪಿಲ್ಲರ್‌ನಲ್ಲಿ ಬಿರುಕು?

ಬೆಂಗಳೂರು, ಏ.19: ಟ್ರಿನಿಟಿ ವೃತ್ತದ ನಮ್ಮ ಮೆಟ್ರೋ ಪಿಲ್ಲರ್‌ನಲ್ಲಿ ಬಿರುಕು ಕಾಣಿಸಿಕೊಂಡು ಕೆಲವು ದಿನಗಳ ಕಾಲ ಪ್ರಯಾಣಿಕರಲ್ಲಿ ಆತಂಕ ಉಂಟು ಮಾಡಿತ್ತು.

ಇದೀಗ ಸೌತ್‌ ಎಂಡ್ ವೃತ್ತದ ಪಿಲ್ಲರ್ ನಂಬರ್ 67ರಲ್ಲೂ ಕೂಡ ಬಿರುಕು ಕಾಣಿಸಿಕೊಂಡಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಆದರೆ ಇದನ್ನು ಬಿಎಂಆರ್‌ಸಿಎಲ್ ಎಂಡಿ ಅಜಯ್ ಸೇಠ್ ನಿರಾಕರಿಸಿದ್ದಾರೆ.

ಪಿಲ್ಲರ್‌ನ ಸೀಟಿಂಗ್ ಭಾಗದಲ್ಲಿ ಬಿರುಕು ಕಾಣಿಸಿಕೊಂಡಿದೆ. ಪ್ರತಿ ಮೆಟ್ರೋ ಪಿಲ್ಲರ್ ನ್ನು ಬಿಎಂಆರ್‌ಸಿಎಲ್ ಮತ್ತೊಂದು ಬಾರಿ ಪರಿಶೀಲಿಸಬೇಕು ಎಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.

Structural flaw shows up on Metro pillar near South End Circle station

ಹಸಿರು ಮಾರ್ಗ ಬಸವನಗುಡಿ ಹತ್ತಿರವಿರುವ ಸೌತ್ ಎಂಡ್ ವೃತ್ತಕ್ಕೆ 2017ರಿಂದ ಮೆಟ್ರೋ ಓಡಾಟ ನಡೆಸುತ್ತಿದೆ. ಮೆಟ್ರೋ ಸಂಚರಿಸುವಾಗ ಹೆಚ್ಚಿನ ಒತ್ತಡ ಬೀಳುವ ಕಾರಣ ಪಾಟ್ ಬೇರಿಂಗ್‌ನಲ್ಲಿ ಬಿರುಕು ಕಾಣಿಸಿಕೊಳ್ಳುತ್ತದೆ ಎಂದು ತಜ್ಞರು ಹೇಳುತ್ತಾರೆ.

2018ರ ಡಿಸೆಂಬರ್ 9ರಂದು ಟ್ರಿನಿಟಿ ವೃತ್ತದ ಮೆಟ್ರೋ ಪಿಲ್ಲರ್‌ನಲ್ಲಿ ನಿರ್ಮಿಸಿದ್ದ ಹನಿಕೂಂಬ್‌ನಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಇದಕ್ಕೆ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಅವರು ಪ್ರತಿಕ್ರಿಯಿಸಿದ್ದು ನಮ್ಮ ಮೆಟ್ರೋ ಮೊದಲನೇ ಹಂತದ ಎಲ್ಲಾ ನಿಲ್ದಾಣಗಳಲ್ಲಿಯೂ ಪರಿಶೀಲನೆ ನಡೆಸಬೇಕು ಹಾಗೂ ಉನ್ನತ ಮಟ್ಟದ ತಂತ್ರಜ್ಞಾನವನ್ನು ಬಳಕೆ ಮಾಡಿ ಭದ್ರತೆ ಕಲ್ಪಿಸುವಂತೆ ಸೂಚನೆ ನೀಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+