ಕುಡಿಯುವ ನೀರು ಮಾರಾಟ, ಬೆಂಗಳೂರಲ್ಲಿ ಹೊಸ ವಂಚನೆ ಬಯಲು

ಬೆಂಗಳೂರು, ಫೆಬ್ರವರಿ 23: ಬೇಸಿಗೆ ಆರಂಭವಾಗುತ್ತಿದ್ದಂತೆಯೇ ಬೆಂಗಳೂರು ನಗರದಲ್ಲಿ ಕುಡಿಯುವ ನೀರಿನ ಲಭ್ಯತೆ ಕುರಿತು ಚರ್ಚೆಗಳು ಪ್ರಾರಂಭವಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಗರದ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲು ನಗರದಲ್ಲಿ 600ಕ್ಕೂ ಅಧಿಕ ಶುದ್ಧ ಕುಡಿಯುವ ನೀರಿನ ಘಟಕವನ್ನು ನಿರ್ಮಾಣ ಮಾಡಿದೆ. ಆದರೆ ನಗರದಲ್ಲಿ ಕುಡಿಯುವ ನೀರಿನ ವಿಚಾರದಲ್ಲಿ ಹೊಸ ವಂಚನೆಯೊಂದು ಬಯಲಾಗಿದೆ.

ನಗರದಲ್ಲಿ ಹಲವು ಅಂಗಡಿಗಳು ಶುದ್ಧ ಕುಡಿಯುವ ನೀರನ್ನು ಮನೆ ಬಾಗಿಲಿಗೆ ಪೂರೈಕೆ ಮಾಡುತ್ತವೆ. ಆದರೆ ಇದರ ದರಗಳು ಹೆಚ್ಚಾದ ಕಾರಣ ಜನರಿಗೆ ಅನುಕೂಲ ಮಾಡಿಕೊಡಲು ಬಿಬಿಎಂಪಿ 5 ರೂ.ಗೆ ನೀರು ಸಿಗುವ ಶುದ್ಧ ಕುಡಿಯುವ ನೀರಿನ ಘಟಕವನ್ನು ಆರಂಭಿಸಿದೆ. ಆದರೆ ಇದನ್ನು ಉಪಯೋಗಿಸಿಕೊಳ್ಳುವ ಅಂಗಡಿಗಳು ಜನರನ್ನು ವಂಚಿಸುತ್ತಿವೆ.

Store Keepers Fetch Water From RO Plant Sell To Customers With High Price

ಈ ಶುದ್ಧ ಕುಡಿಯುವ ನೀರಿನ ಘಟಕದಿಂದ 5 ರೂ.ಗೆ ನೀರು ತುಂಬಿಕೊಂಡು ಹೋಗುವ ಕೆಲವು ಅಂಗಡಿಗಳನ್ನು ಅದನ್ನು ಎರಡು, ಮೂರು ಪಟ್ಟು ದರಕ್ಕೆ ಜನರಿಗೆ ಮಾರಾಟವನ್ನು ಮಾಡುತ್ತಿವೆ. ಮನೆಯ ಸಮೀಪ ಶುದ್ಧ ಕುಡಿಯುವ ನೀರಿನ ಘಟಕ ಇಲ್ಲದವರು, ಅಲ್ಲಿಂದ ನೀರು ತರಲು ವಾಹನ ವ್ಯವಸ್ಥೆ ಇಲ್ಲದ ಜನರು ಅಂಗಡಿಗಳ ಮೊರೆ ಹೋಗಿದ್ದಾರೆ.

ಜನರ ಅಸಹಾಯಕತೆಯನ್ನು ಬಂಡವಾಳ ಮಾಡಿಕೊಳ್ಳುವ ಇಂತಹ ಅಂಗಡಿಗಳು 5 ರೂ.ಗೆ 20 ಲೀಟರ್ ಕ್ಯಾನ್‌ ತುಂಬಾ ನೀರು ತುಂಬಿಕೊಂಡು ಹೋಗಿ, ಅದನ್ನು ಜನರಿಗೆ ಮೂರು ಪಟ್ಟು ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತವೆ. ನಗರದ ಹಲವು ಪ್ರದೇಶಗಳಲ್ಲಿ ಈ ಮಾದರಿ ಮಾರಾಟ ನಡೆಯುತ್ತಿದೆ ಎಂಬ ಮಾಹಿತಿ ಸಿಕ್ಕಿದೆ.

12 ವಾಟರ್ ಕ್ಯಾನ್ ತುಂಬಿಸಿದ ವ್ಯಕ್ತಿ: ಅಂಗಡಿಯಲ್ಲಿ ಕೆಲಸ ಮಾಡುವ ವ್ಯಕ್ತಿಯೊಬ್ಬ ಮಾರುತಿ ಒಮಿನಿ ಕಾರಿನಲ್ಲಿ ಬಂದು 12 ಕ್ಯಾನ್‌ನಲ್ಲಿ ಶುದ್ಧ ಕುಡಿಯುವ ನೀರಿನ ಘಟಕದಿಂದ ನೀರನ್ನು ತೆಗೆದುಕೊಂಡು ಹೋದ. ಅನುಮಾನದಲ್ಲಿ ಆತನನ್ನು ಹಿಂಬಾಲಿಸಿದಾಗ ಈ ದಂಧೆ ಬೆಳಕಿಗೆ ಬಂದಿದೆ.

ಆ ಅಂಗಡಿಯಿಂದ ಮನೆಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತದೆ. ಆದರೆ ಅವರು ಶುದ್ಧ ಕುಡಿಯುವ ನೀರಿನ ಘಟಕದಿಂದ 5 ರೂ.ಗೆ ನೀರನ್ನು ತೆಗೆದುಕೊಂಡು ಹೋಗಿ ಅದನ್ನು ಜನರಿಗೆ 25 ರಿಂದ 30 ರೂ.ಗೆ ಮಾರಾಟ ಮಾಡುವುದು ತಿಳಿದು ಬಂದಿತು. ಈ ಮಾದರಿಯಲ್ಲಿ ನಗರದ ಹಲವು ಕಡೆ ನಡೆಯುತ್ತಿದೆ ಎಂಬ ಮಾಹಿತಿಯೂ ಈಗ ಹೊರಬರುತ್ತಿದೆ.

ನಗರದಲ್ಲಿನ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಖಾಸಗಿ ವ್ಯಕ್ತಿಗಳು ನಿರ್ವಹಣೆ ಮಾಡುತ್ತಾರೆ. ಹಲವು ಕಡೆಗಳಲ್ಲಿ ದಿನದ 24 ಗಂಟೆಯೂ ಈ ಘಟಕ ಕಾರ್ಯ ನಿರ್ವಹಣೆ ಮಾಡುತ್ತದೆ. ರಾತ್ರಿ ವೇಳೆ ಯಾರೂ ಇಲ್ಲದಾಗ 10, 15 ಕ್ಯಾನ್ ನೀರನ್ನು ತುಂಬಿಕೊಂಡು ಹೋಗಿ ಅದನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಾರೆ.

ಶುದ್ಧ ಕುಡಿಯುವ ನೀರಿನ ಘಟಕದಿಂದ ಅಂಗಡಿಗಳಿಗೆ ನೀರನ್ನು ಮಾರಾಟ ಮಾಡುವಂತಿಲ್ಲ ಎಂಬ ನಿಯಮವಿದೆ. ಗೃಹ ಉಪಯೋಗಕ್ಕಾಗಿ ಜನರು ಇಲ್ಲಿಂದ 5 ರೂ. ನಾಣ್ಯ ಹಾಕಿ ನೀರನ್ನು ತೆಗೆದುಕೊಂಡು ಹೋಗಬೇಕು ಎಂದು ನಿಯಮ ರೂಪಿಸಲಾಗಿದೆ. ಆದರೆ ಕೆಲವರು 10, 12 ಕ್ಯಾನ್ ನೀರು ತುಂಬಿಕೊಂಡು ಹೋಗಿ ಅದನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಹಣಗಳಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+