ವಂಚನೆಗೊಳಗಾದ ಹಜ್ ಯಾತ್ರಿಕರಿಗೆ ಸರ್ಕಾರದಿಂದಲೇ ಯಾತ್ರೆ: ಜಮೀರ್
ಬೆಂಗಳೂರು, ಆಗಸ್ಟ್ 11: ಮೋಸಕ್ಕೊಳಗಾದ ಹಜ್ ಯಾತ್ರಿಕರನ್ನು ರಾಜ್ಯ ಸರ್ಕಾರದ ವೆಚ್ಚದಲ್ಲಿ ಮುಂದಿನ ವರ್ಷ ಹಜ್ ಯಾತ್ರೆಗೆ ಕಳುಹಿಸಲಾಗುವುದು ಎಂದು ಅಲ್ಪಸಂಖ್ಯಾತರ ಅಭಿವೃದ್ಧಿ ಹಾಗೂ ಹಜ್ ಖಾತೆ ಸಚಿವ ಜಮೀರ್ ಅಹಮದ್ ಖಾನ್ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಡ ಹಜ್ ಯಾತ್ರಿಕರನ್ನು ಹಜ್ ಯಾತ್ರೆಗೆ ಕಳುಹಿಸುವುದಾಗಿ ಹೇಳಿ ಮೋಸವೆಸಗಿ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ಈಗಾಗಲೇ ಪೊಲೀಸರಿಗೆ ದೂರು ನೀಡಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ.
ಬಡವರ ಹಣ ವಸೂಲಿ ಮಾಡಿದ ವಂಚಕರಿಂದಲೇ ಹಣವನ್ನು ವಸೂಲಿ ಮಾಡಿ ವಾಪಸ್ ಕೊಡಲಾಗುವುದು ಅಲ್ಲದೆ, ಸರ್ಕಾರದಲ್ಲಿ ವೆಚ್ಚದಲ್ಲಿ ಮುಂದಿನ ವರ್ಷದ ಹಜ್ ಯಾತ್ರೆಗೆ ಯಾತ್ರಿಕರನ್ನು ಕಳುಹಿಸಲಾಗುವುದು, ಹಜ್ ಯಾತ್ರೆಗೆ ಬಡವರನ್ನು ಕಳುಹಿಸಲು ಅನುದಾನ ಒದಗಿಸಲು ಸರ್ಕಾರದಲ್ಲಿ ಅವಕಾಶವಿದೆ ಎಂದು ತಿಳಿಸಿದರು.

ಪ್ರತಿ ವರ್ಷವು ಹಜ್ ಯಾತ್ರೆಗೆ ಲಕ್ಷಾಂತರ ಮಂದಿ ತೆರಳುತ್ತಾರೆ ಹಾಗೆಯೇ ಬಡವರ ಹಣವನ್ನು ಪಡೆದು ವಂಚನೆ ಮಾಡುವ ಸಾಕಷ್ಟು ಪ್ರಕರಣಗಳು ಬೆಳಕಿಗೆ ಬಂದಿವೆ ಇಂತವರನ್ನು ನಂಬಬೇಡಿ, ಯಾರ ಬಳಿಯೋ ಹಣವನ್ನು ನೀಡಿ ಯಾಮಾರಬೇಡಿ, ಕಳೆದುಕೊಂಡ ಹಣವನ್ನು ಮರಳಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದರು.












Click it and Unblock the Notifications