ಮೆಟ್ರೋ ಭೂ ಸ್ವಾಧೀನ ಪ್ರಕ್ರಿಯೆಗೆ ಭಾರಿ ಮೊತ್ತ ಬಿಡುಗಡೆ ಮಾಡಿದ ಸರ್ಕಾರ
ಬೆಂಗಳೂರು, ಅಕ್ಟೋಬರ್ : ಎರಡನೇ ಹಂತದ ನಮ್ಮ ಮೆಟ್ರೋ ಭೂಸ್ವಾಧೀನ ಪ್ರಕ್ರಿಯೆ ಚುರುಕುಗೊಂಡಿದ್ದ ಭಾರಿ ಮೊತ್ತದ ಹಣ ಬಿಡುಗಡೆ ಮಾಡಲಾಗಿದೆ. ರಾಜ್ಯ ಸರ್ಕಾರ ಮೀಸಲಿಟ್ಟಿದ್ದ 2,296,96 ಕೋಟಿ ರೂ ಅನುದಾನದಲ್ಲಿ 1,148 ಕೋಟಿ ರೂ ಬಿಡುಗಡೆ ಮಾಡಲಾಗಿದೆ.
ಎರಡನೇ ಹಂತದ ಯೋಜನೆಗೆ 310 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ. ಭ ಮಾಲೀಕರಿಗೆ ಪರಿಹಾರ ನೀಡಲು 2,296,96 ಕೋಟಿ ರೂ ಮೀಸಲಿಡಲಾಗಿದೆ.
ಭೂ ಸ್ವಾಧೀನ ಮಾಡಿಕೊಳ್ಳಲು 1,500 ಕೋಟಿ ರೂಗಳನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ರಾಜ್ಯ ಸರ್ಕಾಋಕ್ಕೆ ಬಿಎಂಆರ್‌ಸಿಎಲ್ ಮನವಿ ಮಾಡಿತ್ತು. 72 ಕಿ.ಮೀ ಉದ್ದದ ಮಾರ್ಗದ ಎರಡನೇ ಹಂತದ ಯೋಜನೆಯನ್ನು ಸಾಧ್ಯವಾದಷ್ಟು ಮಟ್ಟಿಗೆ ರಸ್ತೆಯ ನಡುವೆ ಮಾರ್ಗ ನಿರ್ಮಿಸುವ ಪ್ರಯತ್ನ ಮಾಡಲಾಗಿದೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ಮಾರ್ಗ ಕೂಡ ಅಂತಿಮವಾಗಿದೆ ಹೆಬ್ಬಾಳದ ಮೂಲಕವೇ ಏರ್‌ಪೋರ್ಟ್ ಗೆ ಮೆಟ್ರೋ ಮಾರ್ಗ ನಿರ್ಮಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಒಂದನೇ ಹಂತದ ಯೋಜನೆಯಿಂದ ಪಾಠ ಕಲಿತ ಅಧಿಕಾರಿಗಳು ಸರ್ಕಾರಿ ಜಾಗದಲ್ಲೇ ಮಾರ್ಗ ಹೋಗುವಂತೆ ವಿನ್ಯಾಸವನ್ನು ತಯಾರಿಸಿದ್ದಾರೆ.
310 ಎಕರೆಯ ಪೈಕಿ 92,07ಎಕರೆ ಸರ್ಕಾಋಇ ಹಾಗೂ 218.20 ಎಕರೆ ಖಾಸಗಿ ಭೂಮಿಯಾಗಿದೆ. ಇದರಲ್ಲಿ ಸುಮಾರು 200 ಎಕರೆ ಜಾಗ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದೆ.












Click it and Unblock the Notifications