ಮುಂದಿನ ಸಂಪುಟದಲ್ಲಿ ಸೋಮಶೇಖರ್ ಸಚಿವರು: ಯಡಿಯೂರಪ್ಪ

ಬೆಂಗಳೂರು, ನವೆಂಬರ್ 30: ಮುಂದಿನ ಸಚಿವ ಸಂಪುಟದಲ್ಲಿ ಎಸ್‌ಟಿ ಸೋಮಶೇಖರ್ ಸಚಿವರಾಗ್ತಾರೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭರವಸೆ ನೀಡಿದ್ದಾರೆ.

ಶನಿವಾರ ಯಶವಂತಪುರ ಬಿಜೆಪಿ ಅಭ್ಯರ್ಥಿ ಎಸ್‌ಟಿ ಸೋಮಶೇಖರ್ ಅವರ ಪರ ಪ್ರಚಾರ ನಡೆಸಿದ ಅವರು, ಇದು ಸೋಮಶೇಖರ್ ಚುನಾವಣೆ ಅಂತಾನಾದ್ರು ತಿಳಿದಿಕೊಳ್ಳಿ ಇಲ್ಲ ಯಡಿಯೂರಪ್ಪ ನವರ ಚುನಾವಣೆ ಅಂತನಾದ್ರು ತಿಳಿದುಕೊಳ್ಳಿ. ಸೋಮಶೇಖರ್ ಅವರಿಗೆ ನೀವು ಮತಹಾಕಬೇಕು ಎಂದರು.

ಮಧ್ಯಂತರ ಚುನಾವಣೆ ನಡೆಸಬೇಕು ಎಂದು ಕಾಂಗ್ರೆಸ್-ಜೆಡಿಎಸ್ ಷಡ್ಯಂತ್ರ ಮಾಡುತ್ತಿದ್ದಾರೆ ಆದರೆ ಅದು ಯಾವತ್ತೂ ಫಲಿಸುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

ST Somashekhar Will Become Minister

ಯಶವಂತಪು ಕ್ಷೇತ್ರ ಬಿಜೆಪಿ ಅಭ್ಯರ್ಥಿ ಎಸ್‌ಟಿ ಸೋಮಶೇಖರ್ ಅವರ ಪರವಾಗಿ ಪ್ರಚಾರ ನಡೆಸಿದ ಅವರು, ಕಾಂಗ್ರೆಸ್-ಜೆಡಿಎಸ್ ನವರು ಅಭಿವೃದ್ದಿ ಬಗ್ಗೆ ಮಾತನಾಡುತ್ತಿಲ್ಲ.

ನಾವು ಚುನಾವಣೆ ಗೆದ್ದ ಬಳಿಕ ಎಸ್.ಟಿ.ಸೋಮಶೇಖರ್ ಏನೇನು ಕಾಮಗಾರಿಗಳನ್ನು ಸೂಚಿಸಿದ್ದಾರೋ ಅವೆಲ್ಲವನ್ನೂ ಪೂರ್ಣಗೊಳಿಸುತ್ತೇವೆ ಎಂದರು. ಇನ್ನು‌ಮೂರೂವರೆ ವರ್ಷದಲ್ಲಿ ಯಶವಂತಪುರವನ್ನು ಮಾದರಿ ಕ್ಷೇತ್ರ ಮಾಡುವ ಸಂಕಲ್ಪ ಮಾಡಿದ್ದೇನೆ.

ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರೂ ಸಹ ಆಲೋಚಿಸಬೇಕು.ನಿಮ್ಮ‌ಮುಖಂಡರು ಏನು ಮಾಡುತ್ತಿದ್ದಾರೆ ಎಂಬುದು ನಿಮಗೂ ಗೊತ್ತು.ಅದನ್ನು ಬಿಟ್ಟು ನಮಗೆ ಸಹಕಾರ ನೀಡಿ ಎಂದು ಮನವಿ ಮಾಡಿದರು.

ಮುಂದಿನ ಸಚಿವ ಸಂಪುಟದ ಎಸ್ ಟಿ ಸೋಮಶೇಖರ್ ಸಚಿವರಾಗ್ತಾರೆ.. ಚುನಾವಣೆ ಮುಗಿದು ಫಲಿತಾಂಶ ಬಂದಾಗ ಜನ ಸೇರುತ್ತಾರಲ್ಲ ಹಾಗೇ ಜನ ಸೇರಿದ್ದೀರಾ.
15 ಕ್ಷೇತ್ರದಲ್ಲಿ 15 ಕ್ಷೇತ್ರ ಗೆಲ್ಲುತ್ತೇವೆ, ಯಾವುದೇ ಶಕ್ತಿ ಬಂದರೂ ಗೆಲುವು ತಡೆಯಲು ಸಾಧ್ಯವಿಲ್ಲ. ಕಾಂಗ್ರೆಸ್ - ಜೆಡಿಎಸ್ ನವರು ಮತ್ತೆ ಕುತಂತ್ರದಿಂದ ಚುನಾವಣೆ ನಡೆಸಬೇಕು ಅಂತ ಹೊರಟಿದ್ದಾರೆ.

ಟೀಕೆ ಟಿಪ್ಪಣಿ ಮಾಡುವ ಬಗ್ಗೆ ತಲೆಕಡೆಸಿಕೊಳ್ಳುವ ಅಗತ್ಯವಿಲ್ಲ, ಕಾಂಗ್ರೆಸ್ ಜೆಡಿಎಸ್ ಮುಂಖಂಡರ ಉದ್ದೇಶ ಗೊತ್ತಿದೆ. ಕಾಂಗ್ರೆಸ್ ಜೆಡಿಎಸ್ ಕಾರ್ಯಕರ್ತರು ನಮಗರ ಸಹಾಯ ಮಾಡಿ ಎಂದರು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+