ತೇಜಸ್ವಿ 79: ಚಿತ್ರಕಲಾ ಪರಿಷತ್ತಿನಲ್ಲಿ ವಿಶಿಷ್ಟ ಜೇಡಲೋಕ
ಬೆಂಗಳೂರು, ಸೆ. 07: ಕನ್ನಡದ ವಿಶಿಷ್ಟ ಸಾಹಿತಿ ದಿವಂಗತ ಕೆಪಿ ಪೂರ್ಣಚಂದ್ರ ತೇಜಸ್ವಿ ಅವರ ಬದುಕು ಬರಹ ಹಾಗೂ ಚಿಂತನೆಗಳನ್ನು ಎಲ್ಲರ ಮುಂದಿಡುವ ನಿಟ್ಟಿನಲ್ಲಿ ಪ್ರತಿ ವರ್ಷ ಚಿತ್ರಕಲಾ ಪರಿಷತ್ತಿನಲ್ಲಿ ವಿಶಿಷ್ಟ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.
ಈ ಬಾರಿ ತೇಜಸ್ವಿ ಜೀವಲೋಕ 79- ಜೇಡಲೋಕ ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಛಾಯಾಚಿತ್ರ ಪ್ರದರ್ಶನ, ಸಾಕ್ಷ್ಯಚಿತ್ರ ಪ್ರದರ್ಶನ ಹಾಗೂ ಸಂವಾದ ಕಾರ್ಯಕ್ರಮವಿರುತ್ತದೆ.
ಕಾರ್ಯಕ್ರಮ ವಿವರ:
ದಿನಾಂಕ : ಸೆಪ್ಟೆಂಬರ್ 08,2017. ಶುಕ್ರವಾರ.
ಬೆಳಗ್ಗೆ : 11:30ಕ್ಕೆ

ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ತು, ಕುಮಾರಕೃಪಾ ರಸ್ತೆ,ಬೆಂಗಳೂರು.
ಉದ್ಘಾಟನೆ: ಪ್ರಕಾಶ್ ರೈ, ನಟ, ನಿರ್ದೇಶಕ
ಮುಖ್ಯ ಅತಿಥಿ:
* ಬಸವರಾಜ ರಾಯರೆಡ್ಡಿ, ಉನ್ನತ ಶಿಕ್ಷಣ ಸಚಿವ
* ಡಾ. ಎಂ ಸಂಜಪ್ಪ, ವಿಶ್ರಾಂತ ವಿಜ್ಞಾನಿ, ನಿವೃತ್ತ ನಿರ್ದೇಶಕರು, ಭಾರತೀಯ ಸಸ್ಯ ಸರ್ವೇಕ್ಷಣಾ ಸಂಸ್ಥೆ.
* ಡಾ. ಸೀನಪ್ಪ, ಜೇಡ ವಿಜ್ಞಾನಿ
ಅಧ್ಯಕ್ಷತೆ
ಡಾ. ಬಿ. ಎಲ್ ಶಂಕರ್, ಅಧ್ಯಕ್ಷರು, ಚಿತ್ರಕಲಾ ಪರಿಷತ್, ಬೆಂಗಳೂರು
ಆಯೋಜನೆ: ಈಶ್ವರ್ ಪ್ರಸಾದ್, ನಿಸರ್ಗ ಸಂರಕ್ಷಣಾ ಸಂಸ್ಥೆ. (ಒನ್ಇಂಡಿಯಾ ಸುದ್ದಿ)












Click it and Unblock the Notifications