NICE Road: ನೈಸ್ ರಸ್ತೆಯಲ್ಲಿ ವೇಗಮಿತಿ ನಿಗದಿ; ದ್ವಿಚಕ್ರ ವಾಹನ ಸಂಚಾರಕ್ಕೆ ನಿಷೇಧ! ಮಾಹಿತಿ, ವಿವರ
ನೈಸ್ ರಸ್ತೆಯಲ್ಲಿ ಅಪಘಾತಗಳ ಸಂಖ್ಯೆಯನ್ನು ಕಡಿಮೆ ಮಾಡಲು ಟ್ರಾಫಿಕ್ ಪೊಲೀಸರು ಮುಂದಾಗಿದ್ದು, ಹಲವು ಕಠಿಣ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ರಸ್ತೆಯಲ್ಲಿ ಚಲಿಸುವ ವಾಹನಗಳಿಗೆ ವೇಗಮಿತಿಯನ್ನು ನಿಗದಿ ಮಾಡಿದ್ದು ಅಧಿಸೂಚನೆ ಹೊರಡಿಸಿದೆ.
ಸಾರ್ವಜನಿಕರ ಹಿತದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನೈಸ್ ರಸ್ತೆಯಲ್ಲಿ ಸಂಚರಿಸುವ ಎಲ್ಲಾ ವಾಹನಗಳಿಗೆ ನಿಗದಿಯನ್ನು ಏರ್ಪಡಿಸಲಾಗಿದೆ.

ದ್ವಿಚಕ್ರ ವಾಹನ ಸಂಚಾರ ನಿಷೇಧ
ಅಪಘಾತಗಳನ್ನು ಕಡಿಮೆ ಮಾಡುವ ದೃಷ್ಟಿಯಿಂದ ನೈಸ್ ರಸ್ತೆಯಲ್ಲಿ ರಾತ್ರಿ ವೇಳೆಯಲ್ಲಿ ದ್ವಿಚಕ್ರ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ವಾರದ ಎಲ್ಲಾ ದಿನಗಳಲ್ಲಿ ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ದ್ವಿಚಕ್ರ ವಾಹನಗಳು ನೈಸ್ ರಸ್ತೆಯಲ್ಲಿ ಸಂಚರಿಸದಂತೆ ನಿರ್ಬಂಧ ವಿಧಿಸಲಾಗಿದೆ.
"ಸಂಚಾರ ಸಲಹೆ / Traffic advisory" pic.twitter.com/RpdB6Le1xG
— ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) August 2, 2024
ವಿವಿಧ ಮಾದರಿಗಳ ವಾಹನಗಳಿಗೆ ಸಂಚಾರ ಮಿತಿಯನ್ನು ಕೂಡ ನಿಗದಿ ಮಾಡಲಾಗಿದೆ.
ವಾಹನ ಚಾಲಕ ಸೇರಿ 8 ಕ್ಕಿಂತ ಹೆಚ್ಚು ಪ್ರಯಾಣಿಕರನ್ನು ಕರೆದೊಯ್ಯುವ ವಾಹನಗಳು (ಎಂ 1 ವರ್ಗದ ವಾಹನಗಳು) 120 ಕಿ.ಮೀ. ವೇಗದ ಮಿತಿಯನ್ನು ಹೇರಲಾಗಿದೆ.
ವಾಹನ ಸವಾರನು ಸೇರಿ 9ಕ್ಕಿಂತ ಹೆಚ್ಚು ಜನರನ್ನು ಕರೆದೊಯ್ಯುವ ವಾಹನಗಳಿಗೆ (ಎಂ -2 ಮತ್ತು ಎಂ-3 ವರ್ಗದ ವಾಹನಗಳು) 100 ಕಿ.ಮೀ. ವೇಗದ ಮಿತಿಯನ್ನು ಹೇರಲಾಗಿದೆ.
ಗೂಡ್ಸ್ ವಾಹನಗಳು (ಎನ್ ವರ್ಗದ ವಾಹನಗಳು) 80 ಕಿ.ಮೀ ವೇಗದ ಮಿತಿ. ದ್ವಿಚಕ್ರ ವಾಹನಗಳು 80 ಕಿಮೀ ವೇಗದ ಮಿತಿ.
ಆಗಸ್ಟ್ 2ರಿಂದಲೇ ಈ ನಿಯಮವನ್ನು ಜಾರಿಗೆ ತರಲಾಗಿದ್ದು, ಎಲ್ಲಾ ವಾಹನ ಸವಾರರು ಸೂಚನೆಯನ್ನು ಪಾಲಿಸಬೇಕು ಎಂದು ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.












Click it and Unblock the Notifications