ಬೆಂಗಳೂರಿನಿಂದ ಪಂಢರಾಪುರಕ್ಕೆ ವಿಶೇಷ ರೈಲು ವ್ಯವಸ್ಥೆ

ಬೆಂಗಳೂರು, ಸೆಪ್ಟೆಂಬರ್, 14 : ಭಾರತೀಯ ರೈಲ್ವೆ ಇಲಾಖೆಯು ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರಿನಿಂದ ಪಂಢರಾ ಪುರಕ್ಕೆ ವಿಶೇಷ ರೈಲು ಸೌಲಭ್ಯ ಕಲ್ಪಿಸಿದ್ದು, ಈ ವ್ಯವಸ್ಥೆಯು ನವೆಂಬರ್ ತಿಂಗಳಿನಿಂದ ಜಾರಿಗೊಳಿಸಲಾಗಿದೆ.

ಈ ವಿಶೇಷ ರೈಲುಗಳು ನವೆಂಬರ್ 2ರ ಸೋಮವಾರದಿಂದ ರಿಂದ 23 ರವರೆಗೆ ಸಂಚರಿಸುತ್ತವೆ. ಇವು ಪ್ರತಿ ಸೋಮವಾರ ಮತ್ತು ಗುರುವಾರ, ಬೆಂಗಳೂರಿನ ಯಶವಂತಪುರದಿಂದ ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಪಂಢರಾಪುರಕ್ಕೆ ಹೊರಡುತ್ತದೆ.[ಮಹಿಳೆ ಸುರಕ್ಷತೆಗೆ ಹೊಸ ಆಪ್ ಜಾರಿಗೆ ತಂದ ಭಾರತೀಯ ರೈಲ್ವೆ]

Special trains for dasara from Bengaluru Yeshwantpur to Pandharpur

ಯಶವಂತಪುರದಿಂದ ಹೊರಡುವ ನಂಬರ್ 06541 ರೈಲು ಸಂಜೆ 6 ಗಂಟೆ ರೈಲ್ವೆ ನಿಲ್ದಾಣದಿಂದ ಹೊರಡುತ್ತದೆ. ಇದೇ ರೈಲು ಮಾರನೇ ದಿನ ಪಂಢರಾಪುರದಿಂದ ಬೆಳಿಗ್ಗೆ 11.35 ಕ್ಕೆ ಹೊರಟು ಬೆಂಗಳೂರಿಗೆ ಬರಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಪಂಢರಾಪುರದಿಂದಲೂ ವಿಶೇಷ ರೈಲುಗಳ ಸೌಲಭ್ಯ ದೊರೆಯಲಿದ್ದು, ನವೆಂಬರ್ 3 ರ ಮಂಗಳವಾರದಿಂದ 24 ರವರೆಗೆ ಮುಂದುವರೆಯಲಿದೆ. ಇಲ್ಲಿಂದ 06542 ನಂಬರಿನ ರೈಲು ಪ್ರತಿ ಮಂಗಳವಾರ ಮತ್ತು ಶುಕ್ರವಾರ ಮಧ್ಯಾಹ್ನ 1.35 ಕ್ಕೆ ಹೊರಟು, ಮರುದಿನ 6.20ಕ್ಕೆ ಬೆಂಗಳೂರಿನ ಯಶವಂತಪುರ ತಲುಪುತ್ತದೆ.

ಈ ವಿಶೇಷ ರೈಲು ಪ್ರತಿವಾರ ವಿಶೇಷವಾಗಿ 21 ಕೋಚ್ ವ್ಯವಸ್ಥೆ ಮಾಡಲಾಗಿದೆ. ಅಂದರೆ ಒಂದು AC ಫಸ್ಟ್ ಕ್ಲಾಸ್, ಒಂದು AC 2 ಟೈರ್ ಕೋಚ್. 4 Ac 3 ಟೈರ್ ಕೋಚ್, 10 ಸೆಕೆಂಡ್ ಕ್ಲಾಸ್ ಸ್ಲೀಪರ್, 2 ಜನರಲ್ ಸೆಕೆಂಡ್ ಕ್ಲಾಸ್, 2 ಸೆಕೆಂಡ್ ಕ್ಲಾಸ್ ಆಸನಗಳನ್ನು ಇದು ಒಳಗೊಳ್ಳಲಿದೆ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಏನಿದು ಮಹಾರಾಷ್ಟ್ರದ ದಸರಾ?

ದಕ್ಷಿಣ ಭಾರತದಲ್ಲಿ ವಿಜಯದಶಮಿಯನ್ನು ದಸರಾ ಎಂದು ಕರೆದರೆ, ಉತ್ತರ ಭಾರತದಲ್ಲಿ ದಶೆರಾ, ದುಸ್ಸೆರಾ, ದುಸೆಹ್ರಾ ಎಂದು ಕರೆಯುತ್ತಾರೆ. ಮಹಾರಾಷ್ಟದಲ್ಲಿ ಆಚರಿಸುವ ಹಬ್ಬಕ್ಕೆ ದುಸ್ಸೆಹ್ರಾ ಎಂದು ಕರೆಯಲಾಗುತ್ತದೆ. ಇದನ್ನು ರಾಮ ರಾವಣನನ್ನು ಕೊಂದ ನೆನಪಿಗಾಗಿ ಆಚರಣೆ ಮಾಡಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+