ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು : ಶಬರಿಮಲೆಗೆ ರಾಜಹಂಸ ಬಸ್ ಸೇವೆ

|
Google Oneindia Kannada News

ಬೆಂಗಳೂರು, ಡಿ. 6 : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಶಬರಿಮಲೆಗೆ ತೆರಳುವ ಭಕ್ತರ ಅನುಕೂಲಕ್ಕಾಗಿ ಬೆಂಗಳೂರಿನಿಂದ ಪಂಪಾಗೆ ರಾಜಹಂಸ ಬಸ್ ಸೇವೆಯನ್ನು ಆರಂಭಿಸುತ್ತಿದೆ. ಡಿ. 12 ರಿಂದ ಜ. 12ರವರೆಗೆ ಈ ಬಸ್ ಸಂಚರಿಸಲಿದೆ.

ಎರಡು ತಿಂಗಳ ಪವಿತ್ರ ಶಬರಿಮಲೆ ಯಾತ್ರೆ ಈಗಾಗಲೇ ಆರಂಭಗೊಂಡಿದ್ದು, ಲಕ್ಷಾಂತರ ಭಕ್ತರು ಅಯ್ಯಪ್ಪ ಸ್ವಾಮಿ ದೇವರ ದರ್ಶನಕ್ಕೆ ತೆರಳುತ್ತಿದ್ದಾರೆ. ಆದ್ದರಿಂದ ಕೆಎಸ್‌ಆರ್‌ಟಿಸಿ ಭಕ್ತರ ಅನುಕೂಲಕ್ಕಾಗಿ ರಾಜಹಂಸ ಬಸ್ ಸೇವೆಯನ್ನು ಆರಂಭಿಸಲಿದೆ. [ಸ್ವಾಮಿಯೇ ಅಯ್ಯಪ್ಪ, ಭಕ್ತಿ ಪರವಶತೆಯ ಮಹಾಪೂರ]

Sabarimala

ಬಸ್ ಮಾರ್ಗ : ಡಿ. 12 ರಿಂದ ಜ. 12ರವರೆಗೆ ಈ ಬಸ್ ಸಂಚರಿಸಲಿದ್ದು, ಮೈಸೂರು, ಗುಂಡ್ಲುಪೇಟೆ, ಕ್ಯಾಲಿಕಟ್, ಗುರುವಾಯೂರು, ಕೊಟ್ಟಾಯಂ ಮಾರ್ಗವಾಗಿ ಪಂಪಾಗೆ ತೆರಳಲಿದೆ. [ಚಿತ್ರಗಳಲ್ಲಿː ಶಬರಿಮಲೆಗೆ ಭಕ್ತರ ತಂಡ]

ಸಮಯ : ರಾಜಹಂಸ ಬಸ್ ಮಧ್ಯಾಹ್ನ 1 ಗಂಟೆಗೆ ಬೆಂಗಳೂರಿನಿಂದ ಹೊರಡಲಿದ್ದು, ಮರುದಿನ ಬೆಳಗ್ಗೆ 8.30ಕ್ಕೆ ಪಂಪಾ ತಲುಪಲಿದೆ. ಅಲ್ಲಿಂದ ಮಧ್ಯಾಹ್ನ 3ಕ್ಕೆ ಹೊರಡುವ ಬಸ್ ಮರುದಿನ ಬೆಳಗ್ಗೆ 10ಕ್ಕೆ ಬೆಂಗಳೂರಿಗೆ ಮರಳಲಿದೆ ಅಂದಹಾಗೆ ಬಸ್ ಪ್ರಯಾಣ ದರ 825. ರೂ ಗಳಾಗಿದೆ. [ಟಿಕೆಟ್ ಬುಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ]

20 ತಾಸು ಸಂಚಾರ ಬಂದ್ : ಕಾಸರಗೋಡು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಕುಂಬಳೆ ಸಮೀಪದ ಗುರುವಾರ ಮಧ್ಯರಾತ್ರಿ ಗ್ಯಾಸ್ ಟ್ಯಾಂಕರ್‌ವೊಂದು ಅಪಘಾತಕ್ಕೀಡಾದ ಪರಿಣಾಮ ಸಣ್ಣ ಪ್ರಮಾಣದಲ್ಲಿ ಅನಿಲ ಸೋರಿಕೆ ಉಂಟಾಗಿತ್ತು. ಇದರಿಂದಾಗ ಗುರುವಾರ ಮಧ್ಯರಾತ್ರಿಯಿಂದ ಶುಕ್ರವಾರ ರಾತ್ರಿ 7 ಗಂಟೆ ವರೆಗೆ ಸುಮಾರು 20 ತಾಸುಗಳ ಕಾಲ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಯಿತು. ಟ್ಯಾಂಕರ್ ಬಿದ್ದ ಸ್ಥಳದ ಪಕ್ಕದಲ್ಲೇ ರೈಲು ಹಳಿ ಇರುವುದರಿಂದ ಈ ಮಾರ್ಗವಾಗಿ ಸಾಗುವ ಎಲ್ಲ ರೈಲು ಸಂಚಾರವನ್ನೂ ಸ್ಥಗಿತಗೊಳಿಸಲಾಗಿತ್ತು.

English summary
For the convenience of pilgrims going to Sabarimala Karnataka State Road Transport Corporation (KSRTC) will introduce Rajahamsa bus services from Bengaluru to Pamba (Sabarimala) from December 12 to January 12.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X