• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜೆಪಿ ನಗರ ದೇಗುಲದಲ್ಲಿ 1 ಲಕ್ಷ ಆಟದ ಸಾಮಗ್ರಿ ಬಳಸಿ ವಿಶೇಷ ಆಲಂಕಾರ

|
Google Oneindia Kannada News

ಬೆಂಗಳೂರು ಜುಲೈ 10: ಪ್ರತಿವರ್ಷವೂ ಗುರುಪೂರ್ಣಿಮೆಯನ್ನು ವಿಶೇಷವಾಗಿ ಆಚರಿಸುವ ಜೆಪಿ ನಗರದ ಶ್ರೀಸತ್ಯಗಣಪತಿ ಶಿರಡಿ ಸಾಯಿ ದೇವಸ್ಥಾನದಲ್ಲಿ ಈ ಬಾರಿ 1 ಲಕ್ಷ ಆಟದ ಸಾಮಗ್ರಿಗಳನ್ನು ಬಳಸಿ ವಿಶೇಷ ಆಲಂಕಾರ ವನ್ನು ಮಾಡಲಾಗಿದೆ. ಶಿರಡಿ ಸಾಯಿ ಬಾಬಾ ಅವರ ಸನ್ನಿಧಾನ ಹೊರತುಪಡಿಸಿದರೆ ಬೆಂಗಳೂರು ನಗರದಲ್ಲೇ ಅತ್ಯಂತ ವಿಭಿನ್ನ ಹಾಗೂ ವಿಶೇಷವಾದ ಅಲಂಕಾರವನ್ನು ಈ ದೇವಸ್ಥಾನದಲ್ಲಿ ಮಾಡಲಾಗುತ್ತದೆ.

''ಕ್ರೀಡೆಗಳು ಅದರಲ್ಲೂ ಸಾಂಪ್ರದಾಯಿಕ ಕ್ರೀಡೆಗಳು ನಮ್ಮ ಬದುಕಿನಲ್ಲಿ ಬಹಳ ಮಹತ್ವದ ಪಾತ್ರವಹಿಸುತ್ತವೆ. ಪ್ರತಿನಿತ್ಯ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದರಿಂದ ದೈಹಿಕ ಹಾಗೂ ಮಾನಸಿಕ ವಿಕಸತೆ ಹೆಚ್ಚಾಗುತ್ತದೆ. ಹಾಗೆಯೇ ಆರೋಗ್ಯವೂ ಚೆನ್ನಾಗಿರುತ್ತದೆ'' ಎಂದು ಶ್ರೀ ಸತ್ಯಗಣಪತಿ ಶಿರಡಿ ಸಾಯಿ ದೇವಸ್ಥಾನದ ಟ್ರಸ್ಟಿ ರಾಮ್‌ಮೋಹನರಾಜ್‌ ತಿಳಿಸಿದರು.

ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಖೇಲೋ ಇಂಡಿಯಾ ಘೋಷಣೆಯ ಮೂಲಕ ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಿದ್ದರು. ಈ ಥೀಮನ್ನು ಅಳವಡಿಸಿಕೊಂಡು ಈ ಬಾರಿ ವಿಶೇಷವಾದ ಆಲಂಕಾರವನ್ನು ಮಾಡಲಾಗಿದೆ'' ಎಂದು ಟ್ರಸ್ಟಿ ರಾಮ್‌ಮೋಹನರಾಜ್‌ ಹೇಳಿದರು.

ಕಳೆದ ಬಾರಿ ಕೋವಿಡ್‌ ಇದ್ದಿದ್ದರಿಂದ ಮೂರು ಲಕ್ಷ ಮಾತ್ರೆಗಳನ್ನು ಬಳಸಿ ಆಲಂಕಾರ ಮಾಡಲಾಗಿತ್ತು. ಅದನ್ನ 1 ಲಕ್ಷ ಕುಟುಂಬಗಳಿಗೆ ಹಂಚಲಾಗಿತ್ತು. ಈ ಬಾರಿ ಮಕ್ಕಳು ಆಟ ಆಡುವಂತಹ ಸಾಮಗ್ರಿಗಳಾದ 50 ವಿವಿಧ ಸಾಮಗ್ರಿಗಳನ್ನು ಬಳಸಿ ವಿಶೇಷ ಆಲಂಕಾರವನ್ನು ಮಾಡಲಾಗುತ್ತಿದೆ. ಜುಲೈ 13 ರಿಂದ ಒಂದು ವಾರಗಳ ಕಾಲ ಈ ವಿಶೇಷ ಅಲಂಕಾರವನ್ನು ಸಾರ್ವಜನಿಕರು ಕಣ್ತುಂಬಿಕೊಳ್ಳಬಹುದಾಗಿದೆ.

Special decoration using sports equipment Sai Baba Temple in JP Nagar Guru Purnima

''ಗೋಲಿ, ಬುಗರಿ, ಗಿಲ್ಲಿದಾಂಡು, ಕ್ಯಾಟರ್‌ ಪಿಲ್ಲರ್‌ ನಂತಹ ಸಾಂಪ್ರದಾಯಿಕ ಆಟದ ಸಾಮಗ್ರಿಗಳು, ಅಲ್ಲದೇ, ಕ್ರಿಕೆಟ್‌, ಟೆನ್ನೀಸ್‌, ಹಾಕಿ ಬ್ಯಾಟುಗಳು ಸೇರಿದಂತೆ ಹಲವಾರು ವಿಧಧ ಕ್ರೀಡಾ ಸಾಮಗ್ರಿಗಳನ್ನು ಇಲ್ಲಿ ಬಳಸಲಾಗುತ್ತಿದೆ. ಗುರುಪೂರ್ಣಿಮೆ ಮುಗಿದ ನಂತರ ಈ ಸಾಮಗ್ರಿಗಳನ್ನು ಅಗತ್ಯವಿರುವಂತವರಿಗೆ ಉಚಿತವಾಗಿ ನೀಡಲಾಗುವುದು. ಕ್ರೀಡಾ ಸಾಮಗ್ರಿಗಳ ಅಗತ್ಯವಿರುವಂತಹ ಖಾಸಗಿ ಹಾಗೂ ಸರಕಾರಿ ಶಾಲೆಗಳು, ವಸತಿ ಸಮುಚ್ಚಯದ ಸಂಘಗಳು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಬೇಡಿಕೆಯನ್ನು ನೋಡಿಕೊಂಡು ದೇವಸ್ಥಾನ ಮಂಡಳಿಯವರು ಉಚಿತವಾಗಿ ಆಟದ ಸಾಮಗ್ರಿಗಳನ್ನು ವಿತರಿಸಲಿದ್ದಾರೆ'' ಎಂದು ರಾಮ್‌ಮೋಹನ ರಾಜ್‌ ತಿಳಿಸಿದರು.

ಪ್ರತಿಬಾರಿಯೂ ವಿಶೇಷ ಅಲಂಕಾರ:
ಪ್ರತಿಬಾರಿಯೂ ಭಕ್ತರಿಗೆ ಹೊಸದನ್ನು ನೀಡಬೇಕು ಎನ್ನುವ ಉದ್ದೇಶ ಹೊಂದಿರುವ ಜೆಪಿ ನಗರದ ಪುಟ್ಟೇನ ಹಳ್ಳಿಯ ಶ್ರೀ ಸತ್ಯ ಗಣಪತಿ ಶಿರಡಿ ಸಾಯಿ ಟ್ರಸ್ಟ್‌, ಅದಕ್ಕೂ ಮುನ್ನ ಕಬ್ಬನ್ನು ಬಳಸಿ ಗಣಪನ ಮೂರ್ತಿಯನ್ನು ನಿರ್ಮಿಸಲಾಗಿತ್ತು ಹಾಗೂ ಅದಕ್ಕೂ ಹಿಂದಿನ ವರ್ಷ 400 ಕೆಜಿ ಹತ್ತಿ ಬಳಸಿ ಬೃಹತ್‌ ಗಣಪನ ಮೂರ್ತಿಯನ್ನು ನಿರ್ಮಿಸಲಾಗಿತ್ತು. ಗಣೇಶ ಚತುರ್ಥಿಯನ್ನು ಪರಿಸರ ಸ್ನೇಹಿಯಾಗಿ ಆಚರಿಸುವ ದೃಷ್ಟಿಯಿಂದ ಈ ಬಾರಿ 30 ಅಡಿ ಎತ್ತರದ ಕಬ್ಬಿನಲ್ಲಿಯೇ ನಿರ್ಮಿಸಲಾಗಿರುವ ಗಣೇಶ ಮೂರ್ತಿ ನಿರ್ಮಿಸಲಾಗಿತ್ತು. 50 ಟನ್ ಕಬ್ಬನ್ನು ಬಳಸಲಾಗಿದ್ದು, 50 ಕ್ಕೂ ಹೆಚ್ಚು ಕಾರ್ಮಿಕರು ಈ ಗಣಪತಿಯನ್ನು ನಿರ್ಮಿಸಲು ಹಗಲಿರುಳು ಶ್ರಮಿಸಿದ್ದರು.

Recommended Video

   ಭಾರತದಲ್ಲಿ 5 ವರ್ಷಗಳಾದ್ಮೇಲೆ ಪೆಟ್ರೋಲ್ ಸಿಗೋದಿಲ್ಲ: ಶಾಕಿಂಗ್ ಹೇಳಿಕೆ ಕೊಟ್ಟ ನಿತಿನ್ ಗಡ್ಕರಿ | OneIndia Kannada

   ಕೊರೊನಾ ಸಾಂಕ್ರಾಮಿಕ ರೋಗದ ವಿರುದ್ದ ಹೋರಾಟದಲ್ಲಿ ಪ್ರಮುಖವಾಗಿ ಬಳಕೆ ಆಗಿರುವಂತಹ ವಸ್ತುಗಳಾದ ಮಾಸ್ಕ್‌, ಪ್ಯಾರಾಸಿಟಮಾಲ್‌, ವಿಟಮಿನ್‌ ಸಿ, ಆಲ್ಕಾಫ್‌, ಬಿ ಕಾಂಫ್ಲೆಕ್ಸ್‌ ನಂತಹ ಮಾತ್ರೆಗಳನ್ನೇ ಬಳಸಿಕೊಂಡು ಬೇರೆ ಯಾರೂ ಮಾಡದಂತಹ ವಿಶಿಷ್ಟವಾದ ಆಲಂಕಾರವನ್ನು ಶ್ರೀ ಸತ್ಯ ಸಾಯಿ ಗಣಪತಿ ದೇವಸ್ಥಾನದಲ್ಲಿ ಮಾಡಲಾಗಿತ್ತು.

   ಈ ಆಲಂಕಾರದಲ್ಲಿ ಬಳಸಿಕೊಂಡಿರುವ ಎಲ್ಲಾ ಔಷಧ ಹಾಗೂ ರೇಷನ್‌ ಕಿಟ್‌ನ ಪದಾರ್ಥಗಳನ್ನು ಮಾನವರು, ಹಸುಗಳು ಹಾಗೂ ನಾಯಿಗಳಿಗೆ ದಾನದ ರೂಪದಲ್ಲಿ ನೀಡಲಾಗಿತ್ತು. ರೇಷನ್‌ ಕಿಟ್‌ ವಸ್ತುಗಳಾದ ಅಕ್ಕಿ, ಬೇಳೆ ಗೋಧಿ ಹಿಟ್ಟು, ಮೈದಾ ಹಿಟ್ಟು, ಸಕ್ಕರೆ, ಉಪ್ಪು, ರವೆ, ಎಣ್ಣೆ, ಈರುಳ್ಳಿ, ಮೆಕ್ಕೆ ಜೋಳ, ಬಿಸ್ಕತ್‌, ತೆಂಗಿನಕಾಯಿ ಎಲ್ಲವನ್ನು ದಾನವಾಗಿ ನೀಡಲಾಗಿತ್ತು

   English summary
   Sai Baba Temple in JP Nagar, Bengaluru has organised special decoration using sports equipment and event on the occasion of Guru Purnima from July 10.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X