Bengaluru 287km Circular Train Network: ನೈಋತ್ಯ ರೈಲ್ವೆ ಪ್ರಸ್ತಾಪಿಸಿದ ಹೊಸ ಯೋಜನೆ, ಮಾರ್ಗ, ಸ್ಥಳಗಳ ಪೂರ್ಣ ಮಾಹಿತಿ
ಬೆಂಗಳೂರು, ನವೆಂಬರ್ 09: ಬೆಂಗಳೂರಿನಲ್ಲಿರುವ ದಟ್ಟಣೆ, ಹಾಲಿ ರೈಲು ಜಾಲಗಳ ಮೇಲಿನ ಒತ್ತಡ ಕಡಿಮೆ ಮಾಡಲು ನೈಋತ್ಯ ರೈಲ್ವೆಯು (SWR) ವೃತ್ತಾಕಾರದಲ್ಲಿ (Bengaluru Circular Train Network) ನಗರದ ಸುತ್ತಲೂ ರೈಲು ಜಾಲ ನಿರ್ಮಿಸಲು ನಿರ್ಧರಿಸಿದೆ.
ಈಗಾಗಲೇ ಬೆಂಗಳೂರಿನಲ್ಲಿ ಉಪನಗರ ರೈಲು ಯೋಜನೆ ಅಸ್ತಿತ್ವದಲ್ಲಿದೆ. ಅದರ ವಿಸ್ತರಣೆ ಮಾರ್ಗದ ಕೆಲಸಗಳು ನಡೆಯುತ್ತಿವೆ. ಈ ಮಧ್ಯೆ ನೈಋತ್ಯ ರೈಲ್ವೆ ವಿಭಾಗವು ಬೆಂಗಳೂರಿನ ಸುತ್ತಲೂ ಒಟ್ಟು 287 ಕಿಲೋ ಮೀಟರ್ ರೈಲು ಜಾಲವನ್ನು ವೃತ್ತಾಕಾರದಲ್ಲಿ ನಿರ್ಮಿಸುವ ಯೋಜನೆ ಪ್ರಸ್ತಾಪಿಸಿದೆ. ಈ ಮೂಲಕ ಪ್ರಯಾಣಿಕರಿಗೆ ಸದೃಢ ರೈಲು ಸೇವೆಗಳು ಲಭ್ಯವಾಗುವಂತೆ ಮಾಡಲು ಯೋಜನೆ ರೂಪಿಸಿದೆ.

ನೈಋತ್ಯ ರೈಲ್ವೆಯ ಈ ಪ್ರಸ್ತಾವನೆಯನ್ನು ಆಧರಿಸಿರುವ ಭಾರತೀಯ ರೈಲ್ವೆ ಸಚಿವಾಲಯವು ಡಬಲ್ ಲೈನ್ ವೃತ್ತಾಕಾರದ ರೈಲು ಜಾಲಕ್ಕಾಗಿ ಅಂತಿಮ ಸ್ಥಳ ಸಮೀಕ್ಷೆ (FLS) ನಡೆಸುವಂತೆ ಸಹಮತ ನೀಡಿದೆ ಎಂದು ರೈಲ್ವೆ ಪ್ರಧಾನ ವ್ಯವಸ್ಥಾಪಕ ಸಂಜೀವ್ ಕಿಶೋರ್ ಅವರು ತಿಳಿಸಿದ್ದಾರೆ ಎಂದು 'ಟಿಓಐ' ವರದಿ ಮಾಡಿದೆ.
ಬೆಂಗಳೂರಿನಿಂದ ಈ ಸ್ಥಳಗಳಿಗೆ ಸಂಪರ್ಕ
ಉದ್ದೇಶಿದ ಈ ಸರ್ಕುಲರ್ (ವೃತ್ತಾಕಾರ) ರೈಲ್ವೆ ಜಾಲದಲ್ಲಿ 'ಬೆಂಗಳೂರು ನಗರದ ಸುತ್ತಲಿನ ಉದ್ದೇಶಿತ ನೆಟ್‌ವರ್ಕ್ ದೇವನಹಳ್ಳಿ, ಮಾಲೂರು, ಹೀಲಳಿಗೆ, ಸೋಲೂರು, ನಿಡವಂಡ, ದೊಡ್ಡಬಳ್ಳಾಪುರಕ್ಕೆ ಸಂಪರ್ಕ ಕಲ್ಪಿಸುತ್ತದೆ. ಬೆಂಗಳೂರಿನ ರೈಲು ಸಾಮರ್ಥ್ಯವನ್ನು ಹೆಚ್ಚಿಸಲು ಮತ್ತು ಭವಿಷ್ಯದ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ರೈಲ್ವೆ ಜಾಲದಲ್ಲಿ ಹಾಲಿ ಅಡಚಣೆ ನಿವಾರಿಸಲು ಇಲಾಖೆ ಗುರಿ ಹೊಂದಿದೆ ಎಂದರು.

ಸದ್ಯ ಯೋಜನೆ ಅಡಿಯಲ್ಲಿ 7.2 ಕೋಟಿ ರೂ.ಗಳ ಹಣದಲ್ಲಿ ಎಫ್‌ಎಲ್‌ಎಸ್ ಯಾರ್ಡ್ ಯೋಜನೆಗಳು, ಟರ್ಮಿನಲ್ ಸೌಲಭ್ಯಗಳು, ಭೂಮಿ ಅಗತ್ಯತೆ ಎಷ್ಟಿದೆ, ಸೇತುವೆಗಳು ಸೇರಿದಂತೆ ಇನ್ನಿತರ ಅಗತ್ಯತೆಗಳು, ನಿಲ್ದಾಣಗಳ ಜೋಡಣೆ ಒಳಗೊಂಡಂತೆ ಮ್ಯಾಪಿಂಗ್ ಕಾರ್ಯ ನಡೆದಿದೆ.
ಹಾಲಿ ಉಪನಗರ ರೈಲು-ನಮ್ಮ ಮೆಟ್ರೋ ಒತ್ತಡ ಕಡಿಮೆ
ಈ ಯೋಜನೆ ಸಾಕಾರವಾದರೆ ಬೆಂಗಳೂರು ಉಪನಗರ ರೈಲು ಯೋಜನೆ (BSRP)ಮತ್ತು ನಮ್ಮ ಮೆಟ್ರೋ (Namma Metro) ಗೆ ಪೂರಕವಾಗಲಿದೆ. ಈ ಸರ್ಕುಲರ್ ಯೋಜನೆಯಿಂದ ಪ್ರಮಾಣಿಕರು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿರುವ ದೇವನಹಳ್ಳಿ, ಕೈಗಾರಿಕಾ ಪ್ರದೇಶಗಳಿಗೆ, ದೊಡ್ಡಬಳ್ಳಾಪುರ, ಹೊಸಕೋಟೆ ಸೇರಿದಂತೆ ಇನ್ನಿತರ ಭಾಗಗಳಿಗೆ ಸೂಕ್ತ ಸಂಪರ್ಕ ಸಾಧ್ಯವಾಗುತ್ತದೆ.
ಈ ಹೊಸ ರೈಲ್ವೆ ಯೋಜನೆಯ ಜಾಲದಲ್ಲಿ ಮೆಮೂ/ಡೆಮೂ (Memu/Demu Trains) ರೈಲುಗಳ ಕಾರ್ಯ ನಿರ್ವಹಣೆ ಮಾಡಲಾಗುತ್ತದೆ. ಇದು ಅಸ್ತಿತ್ವದಲ್ಲಿರುವ ರೈಲುಗಳ ಮೇಲಿನ ಒತ್ತಡ ಕಡಿಮೆ ಮಾಡಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಯೋಜನೆಯ ಹೆಚ್ಚುವರಿ ಮಾಹಿತಿ ಇಲ್ಲಿದೆ
ಬೆಂಗಳೂರಿನ ಸುತ್ತಮುತ್ತಲಿನ ಊರುಗಳಲ್ಲಿ ವಾಸಿಸುವ ಪ್ರಯಾಣಿಕರು ಮುಂದಿನ ದಿನಗಳಲ್ಲಿ ಈ ವೃತ್ತಾಕಾರದ ರೈಲ್ವೆ ಜಾಲದ ಮೂಲಕ ಸುಗಮವಾಗಿ ನಗರಕ್ಕೆ ಬಂದು ಹೋಗಬಹುದು. ಉದ್ದೇಶಿತ ಯೋಜನೆಯ ಈ 287 ಕಿಮೀ ಮಾರ್ಗದಲ್ಲಿ ಎರಡೂ ದಿಕ್ಕುಗಳಲ್ಲಿ ಮೀಸಲಾದ ರೈಲುಗಳನ್ನು ನಿರ್ವಹಿಸಲಾಗುವುದು ಎಂದು ತಿಳಿಸಿದರು.
ಈ ರೈಲು ಜಾಲವು ಸೇಲಂ ಮಾರ್ಗದಿಂದ ಮೈಸೂರು ಮಾರ್ಗದ ಕಡೆಗೆ, ಪ್ರತಿಯಾಗಿ ರೈಲುಗಳ ಚಲನೆಯನ್ನು ಬಿಡುವಿಲ್ಲದ ಬೈಯಪ್ಪನಹಳ್ಳಿ-ಬೆಂಗಳೂರು ಕಂಟೋನ್ಮೆಂಟ್-ಬೆಂಗಳೂರು ನಗರ ವಿಭಾಗದ ಮೂಲಕ ಮಾಡಲಾಗುವುದು.
ನಗರದೊಳಗೆ ತೀವ್ರ ದಟ್ಟಣೆ ಉಂಟಾಗುವುದರಿಂದ ಎಕ್ಸ್‌ಪ್ರೆಸ್ ರೈಲು ಸೇರಿದಂತೆ ಕೆಲವು ರೈಲುಗಳು ನಿಲ್ದಾಣದಿಂದ ದೂರವೇ ತಡೆ ಹಿಡಿಯಲಾಗುತ್ತದೆ.
ಸದ್ಯ ಬೆಂಗಳೂರಿನ ಹೊರಗಡೆಯೇ ಕೆಲವು ರೈಲುಗಳನ್ನು ತಡೆಹಿಡಿಯಲಾಗುತ್ತದೆ. ಇದನ್ನು ತಪ್ಪಿಸಲು ಪೆರಿಫೆರಲ್ ಲೈನ್ ಮೂಲಕ ಹೆಜ್ಜಾಲವನ್ನು ಹೀಲಲಿಗೆ ಸಂಪರ್ಕಿಸಲಾಗುವುದು. ನಗರದ ಮಿತಿಗಳಲ್ಲಿ ಹೆಚ್ಚು ಜನರ ಓಡಾಟದ (ಪೀಕ್) ಸಮಯದಲ್ಲಿ ಮಾರ್ಗದ ಸಾಮರ್ಥ ಹೆಚ್ಚಿಸಲಾಗುವುದು. ಇನ್ನೂ ರೈಲ್ ಇನ್‌ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಕಂಪನಿ (ಕರ್ನಾಟಕ) ಲಿಮಿಟೆಡ್ (KRIDE) 148 ಉಪನಗರ ರೈಲು ಜಾಲಗಳಿಗೆ ರೈಲು ಪೂರೈಕೆ ಮಾಡಲಿದೆ.












Click it and Unblock the Notifications