ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು ಬೋಂಡಾ, ಮಲಬಾರ್ ಪರೋಟಾ, ಬಂಬೂ ಬಿರಿಯಾನಿ!

By Prasad
|
Google Oneindia Kannada News

ಬೆಂಗಳೂರು, ಜುಲೈ 27 : ಮಂಗಳೂರು ಬೋಂಡಾ, ಘಮ ಘಮಿಸುವ ಫಿಷ್ ಕರಿ, ಹೈದರಾಬಾದ್ ಬಂಬೂ ಬಿರಿಯಾನಿ, ಗುಂಟೂರ್ ಫ್ರೈಡ್ ಗೋಬಿ, ಕೇರಳ ತವಾ ಮೀನು, ಚಿಕನ್ ಪೆಪ್ಪರ್ ಡ್ರೈ, ತಮಿಳುನಾಡಿನ ಮಂಗ ಕರ್ರಿ, ದಂಟಿನ ಸೊಪ್ಪು ಸಾರು.... ಹೆಸರುಗಳನ್ನು ಕೇಳುತ್ತಿದ್ದರೆ ಯಾರಿಗೆ ತಾನೆ ಬಾಯಲ್ಲಿ ನೀರು ಬರುವುದಿಲ್ಲ?

ಮೂಗಿಗೆ ಪರಿಮಳ ಬಡಿಯುತ್ತಿದ್ದರೆ, ಆಸ್ವಾದಿಸಲು ಸಿದ್ಧರಾಗಿ! ಮಳೆಗಾಲದಲ್ಲಿ ಮುದುಡಿದ ಮನಕ್ಕೆ ಬೆಚ್ಚನೆಯ ಅನುಭವ ನೀಡಿ ಹಲವು ಬಗೆಯ ಸ್ವಾದವನ್ನು ನಾಲಿಗೆಗೆ ಪರಿಚಯಿಸುವ ವಿಶಿಷ್ಟ ದಕ್ಷಿಣ ಭಾರತೀಯ ಆಹಾರ ಮೇಳಕ್ಕೆ ಬೆಂಗಳೂರಿನಲ್ಲಿ ಶುಕ್ರವಾರ, ಜುಲೈ 27ರಂದು ಚಾಲನೆ ಸಿಕ್ಕಿತು.

ಯಶವಂತಪುರದ ದ ಫರ್ನ್ ರೆಸಿಡೆನ್ಸಿ ಹೋಟೆಲ್‌ನ ಟಿಂಗ್ ಲಿಂಗ್ ಸ್ಪೈಸಸ್ ರೆಸ್ಟೋರೆಂಟ್‌ನಲ್ಲಿ ಜುಲೈ 27ರಿಂದ ಆಗಸ್ಟ್ 5ರವರೆಗೆ ದಕ್ಷಿಣ ಭಾರತದ ಹಲವಾರು ಬಗೆಯ ಖಾದ್ಯಗಳನ್ನು ಪರಿಚಯಿಸುವ ಇವ್ನಿಂಗ್ ಆಹಾರ ಮೇಳ ಆರಂಭಗೊಂಡಿದ್ದು, ಪ್ರತಿದಿನ ಸಂಜೆ 7.30ರಿಂದ ರಾತ್ರಿ 11.30ರವರೆಗೆ ಬಾಯಲ್ಲಿ ನೀರೂರಿಸುವ ಬಗೆ ಬಗೆಯ ದಕ್ಷಿಣ ಭಾರತದ ಖಾದ್ಯಗಳು ಗ್ರಾಹಕರನ್ನು ಸೆಳೆಯಲಿದೆ.

South Indian Food Festival : Bengaluru to Kanyakumari

3 ಅಡಿ ಅಳತೆಯ ಬೃಹತ್ ಪರೋಟಾ : ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ 3 ಅಡಿ ಸುತ್ತಳತೆಯ ಗೋಧೀ ಪರೋಟಾವನ್ನು ತಯಾರಿಸಿದ್ದು ಎಲ್ಲರ ಗಮನ ಸೆಳೆಯಿತು. ಬೃಹತ್ ಮಂಗಳೂರು ಬೋಂಡಾ, ಘಮ ಘಮಿಸುವ ಫಿಷ್ ಕರಿ, ಹೈದರಾಬಾದ್ ಬಂಬೂ ಬಿರಿಯಾನಿ ಸಹಿತ ದಕ್ಷಿಣ ಭಾರತದ ಬಹುತೇಕ ಎಲ್ಲ ಆಹಾರಗಳೂ ಇಲ್ಲಿ ಲಭಿಸಲಿವೆ.

ಗುಂಟೂರ್ ಫ್ರೈಡ್ ಗೋಬಿ, ಕೇರಳ ತವಾ ಮೀನು, ಚಿಕನ್ ಪೆಪ್ಪರ್ ಡ್ರೈನಂತಹ ಸ್ಟಾರ್ಟರ್‌ಗಳು ಇಡೀ ಉತ್ಸವಕ್ಕೆ ಆರಂಭಿಕ ಮೆರುಗು ನೀಡಲಿದ್ದು, ಬಳಿಕ ಬಾಯಲ್ಲಿ ನೀರೂರಿಸುವ ವಿವಿಧ ಖಾದ್ಯಗಳು ಮನತಣಿಸಲಿವೆ.

ಅಂತಾರಾಷ್ಟ್ರೀಯ ಮ್ಯಾಗಜೀನ್ ನಲ್ಲಿ ಕುಡ್ಲ ಆಹಾರ ಸಂಸ್ಕೃತಿ ಘಮ ಘಮ ಅಂತಾರಾಷ್ಟ್ರೀಯ ಮ್ಯಾಗಜೀನ್ ನಲ್ಲಿ ಕುಡ್ಲ ಆಹಾರ ಸಂಸ್ಕೃತಿ ಘಮ ಘಮ

ತಮಿಳುನಾಡಿನ ಮಂಗ ಕರ್ರಿ, ದಂಟಿನ ಸೊಪ್ಪು ಸಾರು, ಕೋಸು ಪೊರಿಯಾಲ್, ಮುರಾಂಕ ಸಾಂಬಾರ್, ಕಡೈ ಪರಪ್ಪು, ಸ್ಟೀಮ್ ರೈಸ್, ರಸಂ, ದೊನ್ನೆ ಚಿಕನ್ ಬಿರಿಯಾನಿ, ಕೋಕೊನೆಟ್ ರೈಸ್, ಕೇರಳ ಫಿಷ್ ಕರ್ರಿ, ಗಲಗಲ, ಪರುಪ್ಪು ಪಾಯಸ, ಸಲಾಡ್, ಗಟ್ಟಿ ಚಟ್ನಿ, ಸೆಟ್ ದೋಸೆ ಸಹಿತ ಹಲವು ಖಾದ್ಯಗಳು ಗ್ರಾಹಕರ ಬಯಕೆ ತೀರಿಸಲಿವೆ ಎನ್ನುತ್ತಾರೆ ಹೋಟೆಲ್ ಪ್ರವರ್ತಕರಾದ ರೋಹಿತ್ ಹಾಗೂ ನವದೀಪ್.

South Indian Food Festival : Bengaluru to Kanyakumari

ಎಲ್ಲವೂ ಖುಷಿ ಖುಷಿ : ಆಹಾರ ಎಂದರೆ ಅದರಲ್ಲಿ ಜೀವನವೂ ಅಡಗಿರುತ್ತದೆ. ದಕ್ಷಿಣ ಭಾರತೀಯರ ಆಹಾರ ಉತ್ಸವ ಎಂದ ಮೇಲೆ ದಕ್ಷಿಣ ಭಾರತೀಯರ ಜೀವನವನ್ನು ಅಲ್ಲಿ ಬಿಂಬಿಸಬೇಕು. ಅದಕ್ಕಾಗಿಯೇ ಕುರ್ತಾ, ಧೋತಿ ತೊಟ್ಟ ಸಿಬ್ಬಂದಿಯೇ ಉತ್ಸವದ ಆಕರ್ಷಣೆ. ಈ ಉತ್ಸವಕ್ಕೆ ಬಂದು ಹೋದರೆ ದಕ್ಷಿಣ ಭಾರತದ ವಿವಿಧ ನಗರಗಳಿಗೆ ತೆರಳಿದ ಅನುಭವ ಆಗುವುದು ನಿಶ್ಚಿತ ಎನ್ನುತ್ತಾರೆ ಹೋಟೆಲ್‌ನ ಜನರಲ್ ಮ್ಯಾನೇಜರ್ ಅರಿಂದಂ ಸರ್ಕಾರ್.

ಆಟಿ ತಿಂಗಳಲ್ಲಿ ತುಳುನಾಡಿನ ಮನೆಗಳಲ್ಲಿ ವೈವಿಧ್ಯ ತಿನಿಸುಗಳ ಘಮಲು ಆಟಿ ತಿಂಗಳಲ್ಲಿ ತುಳುನಾಡಿನ ಮನೆಗಳಲ್ಲಿ ವೈವಿಧ್ಯ ತಿನಿಸುಗಳ ಘಮಲು

ಸಸ್ಯಾಹಾರ ಪ್ರಿಯರಿಗೆ ವೆಜ್ ಮತ್ತು ಮಾಂಸಾಹಾರ ಪ್ರಿಯರಿಗೆ ನಾನ್‌ವೆಜ್ ಖಾದ್ಯ ಒಂದೆಡೆ ಸಿಗುವುದರ ಜತೆಗೆ ವಿಶಿಷ್ಟ ರುಚಿ, ಸ್ವಾದದೊಂದಿಗೆ ಉಪಚರಿಸುವುದು ಇಲ್ಲಿನ ವಿಶೇಷತೆ. ದಕ್ಷಿಣ ಭಾರತದ ವಿವಿಧ ರಾಜ್ಯಗಳಲ್ಲಿನ ಖಾದ್ಯಗಳನ್ನು ತಯಾರಿಸಿ ಅನುಭವ ಹೊಂದಿರುವ ಬಾಣಸಿಗರ ದೊಡ್ಡ ಗುಂಪೇ ಇಲ್ಲಿದ್ದು, ಗ್ರಾಹಕರ ಇಷ್ಟಕ್ಕೆ ತಕ್ಕಂತೆ ರುಚಿ ರುಚಿಯಾದ ಆಹಾರ ಸಿದ್ಧಪಡಿಸಿ ಕೊಡಲಿದ್ದಾರೆ. ಕೇವಲ ರಾತ್ರಿಯಷ್ಟೇ ಅಲ್ಲ, ಮೊದಲಾಗಿ ಆರ್ಡರ್ ಮಾಡಿದರೆ, ವಿಶೇಷ ಖಾದ್ಯಗಳನ್ನು ಹಗಲು ಹೊತ್ತಿನಲ್ಲೂ ಮಾಡಿ ಕೊಡುವ ವ್ಯವಸ್ಥೆ ಇಲ್ಲಿದೆ.

ದರ ಪಟ್ಟಿ : ಊಟದ ದರವೂ ಕೈಗೆಟುಕುವ ಮಟ್ಟದಲ್ಲೇ ಇದೆ. ನಾನ್‌ವೆಜ್ ಊಟಕ್ಕೆ ವಯಸ್ಕರಿಗೆ 650 ರೂಪಾಯಿ ಪ್ಲಸ್ ಟ್ಯಾಕ್ಸ್. ಸಸ್ಯಾಹಾರಕ್ಕೆ ವಯಸ್ಕರಿಗೆ 575 ರೂಪಾಯಿ ಪ್ಲಸ್ ಟ್ಯಾಕ್ಸ್. ಮಕ್ಕಳಿಗೆ 350 ರೂಪಾಯಿ ನಿಗದಿಪಡಿಸಲಾಗಿದೆ.

English summary
South Indian Food Festival in Bengaluru organized at hotel The Fern in Yeshwantpur. The food festival will serve delicacies from all parts of South India, including Mangaluru, Dakshina Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X