ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

KSRTC e bus; ಶೀಘ್ರದಲ್ಲೇ ಬೆಂಗಳೂರಿನಿಂದ ಆರು ಮಾರ್ಗಗಳಲ್ಲಿ ಸಂಚಾರ, ನಿರ್ವಾಹಕರ ವೆಚ್ಚದ ವಿವರ

|
Google Oneindia Kannada News

ಬೆಂಗಳೂರು, ಡಿಸೆಂಬರ್‌, 05: ಕೆಎಸ್‌ಆರ್‌ಟಿಸಿಯಿಂದ ಮೊದಲ ಬಾರಿಗೆ ಬೆಂಗಳೂರಿನಿಂದ ಬೇರೆ ಜಿಲ್ಲೆಗಳ ಮಾರ್ಗಗಳಿಗೆ ಎಲೆಕ್ಟ್ರಿಕ್ ಬಸ್‌ಗಳನ್ನು ಬಿಡಲು ನಿರ್ಧರಿಸಿತ್ತು. ಕೇಂದ್ರ ಸರ್ಕಾರದ ಫಾಸ್ಟರ್ ಅಡಾಪ್ಷನ್ ಮತ್ತು ಮ್ಯಾನುಫ್ಯಾಕ್ಚರಿಂಗ್ ಆಫ್ ಎಲೆಕ್ಟ್ರಿಕ್ ವೆಹಿಕಲ್ಸ್ ಯೋಜನೆಯಡಿಯಲ್ಲಿ ನಿಗಮವು 50 ಎಸಿ ಬಸ್‌ಗಳನ್ನು ಬಿಡಲು ಸಿದ್ಧವಾಗಿದೆ. ಖಾಸಗಿ ನಿರ್ವಾಹಕರು 10 ವರ್ಷಗಳ ಕಾಲ ಬಸ್‌ಗಳನ್ನು ನಿರ್ವಹಿಸುವ ಒಟ್ಟು ವೆಚ್ಚದ ಗುತ್ತಿಗೆ ಆಧಾರದ ಮೇಲೆ ಅವುಗಳನ್ನು ನಡೆಸಲಾಗುವುದು. ಕೆಎಸ್‌ಆರ್‌ಟಿಸಿಯು ಖಾಸಗಿ ನಿರ್ವಾಹಕರಿಗೆ ಕಾರ್ಯಾಚರಣೆ ವೆಚ್ಚವಾಗಿ ಪ್ರತಿ ಕಿಲೋಮೀಟರ್‌ಗೆ 55 ರೂಪಾಯಿ ಪಾವತಿಸುತ್ತದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಕ್ರಿಸ್‌ಮಸ್‌, ಹೊಸ ವರ್ಷಕ್ಕೆ ಬೆಂಗಳೂರಿನಿಂದ ಕೆಎಸ್‌ಆರ್‌ಟಿಸಿ ವಿಶೇಷ ಬಸ್‌ ಸೇವೆಕ್ರಿಸ್‌ಮಸ್‌, ಹೊಸ ವರ್ಷಕ್ಕೆ ಬೆಂಗಳೂರಿನಿಂದ ಕೆಎಸ್‌ಆರ್‌ಟಿಸಿ ವಿಶೇಷ ಬಸ್‌ ಸೇವೆ

ಬೆಂಗಳೂರಿನಿಂದ ಮೈಸೂರು, ಮಡಿಕೇರಿ, ವಿರಾಜಪೇಟೆ, ಚಿಕ್ಕಮಗಳೂರು, ದಾವಣಗೆರೆ ಮತ್ತು ಶಿವಮೊಗ್ಗ ಮಾರ್ಗವಾಗಿ ಈ ಬಸ್‌ಗಳು ಕಾರ್ಯನಿರ್ವಹಿಸಲಿವೆ. "ಹೈದರಾಬಾದ್ ಮೂಲದ ಎಲೆಕ್ಟ್ರಿಕ್ ಬಸ್ ತಯಾರಕರನ್ನು ಫಾಸ್ಟರ್ ಅಡಾಪ್ಷನ್ ಮತ್ತು ಮ್ಯಾನುಫ್ಯಾಕ್ಚರಿಂಗ್ ಆಫ್ ಎಲೆಕ್ಟ್ರಿಕ್ ವೆಹಿಕಲ್ಸ್ ಅಡಿಯಲ್ಲಿ ಬಸ್‌ಗಳನ್ನು ನಿರ್ವಹಿಸಲು ಆಯ್ಕೆ ಮಾಡಲಾಗಿದೆ. ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಓಡಿಸಲು ಆರು ಮಾರ್ಗಗಳನ್ನು ಆಯ್ಕೆ ಮಾಡಲಾಗಿದೆ. ಡಿಸೆಂಬರ್ ಅಂತ್ಯದ ವೇಳೆಗೆ ಬಸ್‌ನ ಮೂಲ ಮಾದರಿಯು ಲಭ್ಯವಾಗುವ ನಿರೀಕ್ಷೆಯಿದೆ ಎನ್ನುವ ಮಾಹಿತಿ ವಿವಿಧ ಮೂಲಗಳಿಂದ ಲಭ್ಯವಾಗಿದೆ.

ಇ-ಬಸ್‌ಗಳಿಗೆ ಚಾರ್ಜಿಂಗ್‌ ವ್ಯವಸ್ಥೆ

ಇ-ಬಸ್‌ಗಳಿಗೆ ಚಾರ್ಜಿಂಗ್‌ ವ್ಯವಸ್ಥೆ

ಬಸ್‌ಗಳ ಕಾರ್ಯಾಚರಣೆಯನ್ನು ಸುಲಭಗೊಳಿಸಲು ವಿಶೇಷ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಬಸ್‌ಗಳು ಕಾರ್ಯನಿರ್ವಹಿಸುವ ನಗರಗಳ ಮತ್ತು ಡಿಪೋಗಳಂತಹ ವಿವಿಧ ಸ್ಥಳಗಳಲ್ಲಿ ಚಾರ್ಜಿಂಗ್ ಮೂಲಸೌಕರ್ಯಗಳು ಲಭ್ಯವಿರುತ್ತವೆ. ಒಂದು ಬಾರಿ ಚಾರ್ಜ್ ಮಾಡಿದರೆ 250 ಕಿಲೋ ಮೀಟರ್‌ವರೆಗೂ ಬಸ್ ಓಡಿಸಬಹುದಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಒಟ್ಟು ದಿನಕ್ಕೆ ಈ ಬಸ್‌ಗಳು 450 ಕಿಲೋ ಮೀಟರ್‌ ದೂರವನ್ನು ಕ್ರಮಿಸಬಹುದಾಗಿದೆ. ಇನ್ನು ಎಲೆಕ್ಟ್ರಾನಿಕ್‌ ಬಸ್‌ಗಳನ್ನು ಓಡಿಸಲು ಗುರುತಿಸಲಾದ ಮಾರ್ಗಗಳು 250 ಕಿಲೋ ಮೀಟರ್‌ ವ್ಯಾಪ್ತಿಯಲ್ಲಿ ಬರುತ್ತವೆ ಮತ್ತು ನಿಗಮದ ಜನಪ್ರಿಯ ಮಾರ್ಗಗಳಾಗಿವೆ ಎನ್ನಲಾಗಿದೆ.

ಮಂಗಳೂರು ವಿಮಾನ ನಿಲ್ದಾಣಕ್ಕೆ KSRTC ಬಸ್ : ಸಿಟಿಯಿಂದ ಬಸ್‌ ದರ ಹೀಗಿದೆಮಂಗಳೂರು ವಿಮಾನ ನಿಲ್ದಾಣಕ್ಕೆ KSRTC ಬಸ್ : ಸಿಟಿಯಿಂದ ಬಸ್‌ ದರ ಹೀಗಿದೆ

ನಿರ್ವಾಹಕರಿಗೆ ಸುಗುವ ವೆಚ್ಚದ ವಿವರ

ನಿರ್ವಾಹಕರಿಗೆ ಸುಗುವ ವೆಚ್ಚದ ವಿವರ

ಪ್ರತಿ ಕಿಲೋ ಮೀಟರ್‌ಗೆ 55 ರೂಪಾಯಿ ಕಾರ್ಯಾಚರಣೆಯ ವೆಚ್ಚವನ್ನು ನಿರ್ವಾಹಕರಿಗೆ ಪಾವತಿಸಲಾಗುವುದು. ಹತ್ತು ವರ್ಷಗಳ ಅವಧಿಗೆ ಚಾಲಕ, ನಿರ್ವಹಣೆ ಮತ್ತು ಇತರರನ್ನು ನೇಮಿಸಿಕೊಳ್ಳುವ ವೆಚ್ಚವನ್ನು ನಿರ್ವಾಹಕರು ಭರಿಸಬೇಕಾಗುತ್ತದೆ. ಎಲೆಕ್ಟ್ರಿಕ್ ಬಸ್‌ಗಳ ಜೊತೆಗೆ, ಕೆಎಸ್‌ಆರ್‌ಟಿಸಿ ಬಿಎಸ್‌ವಿಐ ಮಲ್ಟಿ ಆಕ್ಸಲ್ ಸ್ಲೀಪರ್ ಬಸ್‌ಗಳನ್ನು ಓಡಿಸಲು ಯೋಜಿಸುತ್ತಿದೆ. KSRTC ಹೊಸ ಸೇವೆಗಳಿಗಾಗಿ ಟ್ಯಾಗ್‌ಲೈನ್ ಮತ್ತು ಗ್ರಾಫಿಕ್ಸ್‌ನೊಂದಿಗೆ ಬ್ರಾಂಡ್ ಹೆಸರು ಕೊಡುವ ಬಗ್ಗೆ ಸಾರ್ವಜನಿಕರಿಂದ ಸಲಹೆಗಳನ್ನು ಆಹ್ವಾನಿಸಿತ್ತು.

90 ಎಲೆಕ್ಟ್ರಿಕ್‌ ಬಸ್‌ಗಳು ಸಂಚಾರ

90 ಎಲೆಕ್ಟ್ರಿಕ್‌ ಬಸ್‌ಗಳು ಸಂಚಾರ

ಹೀಗೆ ಮುಂದುವರೆದಂತೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಎಲೆಕ್ಟ್ರಿಕ್‌ ಬಸ್‌ಗಳನ್ನು ಓಡಿಸಲು ಪ್ರಾರಂಭಿಸಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ 90 ಎಲೆಕ್ಟ್ರಿಕ್‌ ಬಸ್‌ಗಳು ಈಗಾಗಲೇ ಸಂಚರಿಸುತ್ತಿವೆ. FAME-2 ಅಡಿಯಲ್ಲಿ ಇನ್ನೂ 300 ಬಸ್‌ಗಳು ಹಂತಹಂತವಾಗಿ ಕಾರ್ಯನಿರ್ವಹಿಸುತ್ತಿವೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಬೆಂಗಳೂರು-ಮೈಸೂರು ನಡುವೆ ಬಸ್‌ ಓಡಾಟ

ಬೆಂಗಳೂರು-ಮೈಸೂರು ನಡುವೆ ಬಸ್‌ ಓಡಾಟ

ಬೆಂಗಳೂರು-ಮೈಸೂರು ನಡುವೆ ಡಿಸೆಂಬರ್‌ 18ರಿಂದ ಎಲೆಕ್ಟ್ರಿಕ್ ಬಸ್ ಪ್ರಾಯೋಗಿಕ ಸಂಚಾರ ಆರಂಭವಾಗಲಿದೆ. ಇದೇ ರೀತಿ ಮುಂದಿನ ದಿನಗಳಲ್ಲಿ ಬೆಂಗಳೂರು ನಗರದಿಂದ ದಾವಣಗೆರೆ, ಶಿವಮೊಗ್ಗ, ಚಿಕ್ಕ ಮಗಳೂರು ಸೇರಿದಂತೆ ಕೆಲ ಜಿಲ್ಲೆಗಳಿಗೆ ಎಲೆಕ್ಟ್ರಿಕ್ ಬಸ್ ಸೇವೆ ಆರಂಭಿಸಲು ಕೆಎಸ್‌ಆರ್‌ಟಿಸಿ ನಿರ್ಧರಿಸಿದೆ. ಎಲೆಕ್ಟಾನಿಕ್‌ -ಬಸ್‌ಗಳಲ್ಲಿ ಟ್ರ್ಯಾಕಿಂಗ್ ಘಟಕಗಳು, ಸಿಸಿಟಿವಿ ಮತ್ತು ಪ್ರಾಯಣಿಕರ ಸುರಕ್ಷತೆಗಾಗಿ ಹೆಚ್ಚುವರಿ ಕ್ರಮಗಳನ್ನು ಅಳವಡಿಸಲಾಗಿದೆ. ಕೆಎಸ್‌ಆರ್‌ಟಿಸಿ ಖರೀದಿಸುತ್ತಿರುವ ಎಲೆಕ್ಟಾನಿಕ್‌-ಬಸ್ 12 ಮೀಟರ್ ಉದ್ದವಿರಲಿದ್ದು, ಸಂಪೂರ್ಣ ಹವಾ ನಿಯಂತ್ರಿತವಾಗಿರುತ್ತದೆ. ಹಾಗೂ ಈ ಬಸ್‌ಗಳಲ್ಲಿ 43 ಸೀಟುಗಳು ಇರಲಿವೆ. ಒಂದು ಬಾರಿ ಫುಲ್ ಚಾರ್ಜ್ ಮಾಡಿದರೆ ಬಸ್‌ಗಳು 250ರಿಂದ 300 ಕಿಲೋ ಮೀಟರ್‌ವರೆಗೂ ಸಂಚಾರ ಮಾಡಲಿವೆ ಎನ್ನುವ ಮಾಹಿತಿಯೂ ಹೊರಬಿದ್ದಿದೆ.

English summary
Soon will be KSRTC electric buses run on six routes from Banguluru, Cost details of electric buses operator, KSRTC pays private operators Rs 55 per km, know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X