ಬೆಂಗಳೂರಿನ ಸೋನಲ್ ಅಗರ್ ವಾಲ್ ಪ್ರಕರಣ, ಬಗೆದಷ್ಟೂ ನಿಗೂಢ
ಬೆಂಗಳೂರು, ಸೆ. 22: ಬೆಂಗಳೂರಿನ ಉತ್ತರ ಹಳ್ಳಿ ಸಮೀಪದ ಮಂತ್ರಿ ಅಲ್ಪೈನ್ ನಲ್ಲಿ ಕಿಮ್ಸ್ ವೈದ್ಯನ ಪತ್ನಿ ಸೋನಲ್ ಅಗರ್ ವಾಲ್ ಆತ್ಮಹತ್ಯೆ ಪ್ರಕರಣ ದಿನದಿಂದ ದಿನಕ್ಕೆ ನಿಗೂಢವಾಗುತ್ತಾ ಹೋಗುತ್ತಿದೆ.
ಸೆ.16ರಂದು ಮಂತ್ರಿ ಅಪಾರ್ಟ್ ಮೆಂಟ್ ನ ಐದನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದರು. ಪೊಲೀಸರು ಅವರ ಸಾವಿನ ಕುರಿತು ಯಾವುದೇ ತೀರ್ಮಾನಕ್ಕೆ ಬರಲು ಇನ್ನೂ ಸಾಧ್ಯವಾಗಿಲ್ಲ. ಎಲ್ಲ ಕೋನಗಳಿಂದ ತನಿಖೆ ಮುಂದುವರೆಸಿರುವ ಅಧಿಕಾರಿಗಳು ಇದುವರೆಗೂ ಘಟನೆ ಆತ್ಮಹತ್ಯೆಯೋ ಅಥವಾ ಕೊಲೆಯೋ ಎನ್ನುವ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ.
ಸೋನಲ್ ಅಗರ್ ವಾಲ್ ಅವರನ್ನು ಕೊಲೆ ಮಾಡಲಾಗಿದೆ ಎಂದು ಅವರ ಪತಿ ಡಾ. ಅವಿನಾಶ್ ಆರೋಪ ಮಾಡಿದ್ದರು, ಆದರೆ ಸೋನಲ್ ಸ್ನೇಹಿತೆ ಮನೆಯಲ್ಲಿ ಚಿನ್ನಾಭರಣ ದೋಚುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ ಹಾಗಾಗಿ ಕಿಟಕಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸೊನಾಲ್ ಸ್ನೇಹಿತೆಯ ಪತಿ ಪ್ರಸಾದ್ ಆರೋಪಿಸಿದ್ದರು.

ಇದುವರೆಗೂ ಸಿಕ್ಕಿರುವ ಸಾಂದರ್ಭಿಕ ಸಾಕ್ಷಿಗಳು ಹಾಗೂ ಸೋನಲ್ ಒಳ ಉಡುಪಿನಲ್ಲಿ ಸಿಕ್ಕಿರುವ ಬೀರುವಿನ ನಕಲಿ ಕೀ, ಡಾಲರ್ ಮತ್ತು ಒಡೆವೆಗಳೆಲ್ಲವೂ ಪ್ರಸಾದ್ ಅವರ ಪತ್ನಿಗೆ ಸೇತಿದ್ದು ಎನ್ನುವುದು ತನಿಖೆ ವೇಳೆ ಖಚಿತವಾಗಿದೆ.
ಕಳ್ಳತನ ಇತಿಹಾಸವೇ ಇಲ್ಲ: ಸೋನಲ್ ಅವರಿಗೆ ಪರಿಚಯಸ್ಥರ ಮನೆಯಲ್ಲಿ ಕಳ್ಳತನ ಮಾಡುವ ಅಭ್ಯಾಸ ಇತ್ತು ಎನ್ನುವುದಕ್ಕೆ ಇದುವರೆಗೆ ಪುರಾವೆ ಸಿಕ್ಕಿಲ್ಲ, ಘಟನೆಯಿಂದ ಮತ್ತು ಪ್ರಸಾದ್ ಅವರ ಪತ್ನಿಯ ಆಭರಣಗಳು ತನ್ನ ಪತ್ನಿಯ ಬಳಿ ಇದ್ದುದಕ್ಕೆ ಡಾ. ಅವಿನಾಶ್ ಕೂಡ ಆಘಾತಕ್ಕೆ ಒಳಗಾಗಿದ್ದಾರೆ. ತನಿಖೆ ಪೂರ್ಣಗೊಳ್ಳುವವರೆಗೂ ಅಂತಿಮ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications