ಬೆಂಗಳೂರು:16ನೇ ಮಹಡಿಯಿಂದ ಗೃಹಿಣಿ ಬಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

ಬೆಂಗಳೂರು, ಅ.3: ಯಶವಂತಪುರ ಬಳಿಯ ಅಪಾರ್ಟ್ ಮೆಂಟ್ ನ 16ನೇ ಮಹಡಿಯಿಂದ ಬಿದ್ದು ಗೃಹಿಣಿಯೊಬ್ಬರು ಮೃತಪಟ್ಟಿದ್ದರು. ಅದಕ್ಕೆ ರೋಚಕ ತಿರುವು ದೊರೆತಿದ್ದು, ಮಗನ ಹೇಳಿಕೆ ಮೇಲೆ ಆಕೆಯ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಏನಿದು ಘಟನೆ: ಆಗಸ್ಟ್ ಕೊನೆಯ ವಾರದಲ್ಲಿ ಯಶವಂತಪುರ ಬಳಿ ಇರುವ ಗೋಲ್ಡನ್ ಗ್ರ್ಯಾಂಡ್ ಅಪಾರ್ಟ್ ಮೆಂಟ್ ನಿಂದ ಬಿದ್ದು ಕಿರಣ್ ಭಾಟಿಯಾ(43) ಅನುಮಾನಾಸ್ಪದವಾಗಿ ಮೃತಪಟ್ಟಿದ್ದರು. ಆದರೆ ಸಾವಿಗೆ ಕಾರಣವೇನೆಂಬುದು ತಿಳಿದಿರಲಿಲ್ಲ.

ಪ್ರಕರಣ ರೋಚಕ ತಿರುವು ಪಡೆದಿದ್ದು ಮಗನ ಹೇಳಿಕೆ ಮೇರೆಗೆ ಪತಿಯನ್ನು ಬಂಧಿಸಲಾಗಿದೆ. ಪತಿ ದೇವೇಂದ್ರ ಅವರು ಕಿರಣ್ ಅವರಿಗೆ ಮಾನಸಿಕ ಮತ್ತು ದೈಹಿಕವಾಗಿ ಹಿಂಸೆ ನೀಡುತ್ತಿದ್ದರು ಹಾಗೆಯೇ ಆತ್ಮಹತ್ಯೆಗೆ ಪ್ರಚೋದನೆ ನೀಡುತ್ತಿದ್ದರು ಎಂದು ಅವರ ಪುತ್ರ ಹರ್ಷಲ್ ಆರೋಪಿಸಿದ್ದಾರೆ.

Son gives clue on mothers murder case

ಈ ಘಟನೆ ಆಕಸ್ಮಿಕವಾಗಿ ನಡೆದಿದೆ ಎಂದು ನಂಬಲಾಗಿತ್ತು, ಆದರೆ ತಾಯಿಯ ಸಾವಿಗೆ ತನ್ನ ತಂದೆಯೇ ಕಾರಣ ಎಂದು ತಿಂಗಳ ಬಳಿಕ ಮಗನೇ ಪೊಲೀಸರ ಎದುರು ಬಾಯ್ಬಿಟ್ಟಿದ್ದಾನೆ. ಇತ್ತೀಚೆಗೆ ತಂದೆ-ತಾಯಿ ಇಬ್ಬರೂ ಜಗಳವಾಡುತ್ತಿದ್ದರು.

ಒಂದು ದಿನ ಅವರ ಜಗಳ ವಿಪರೀತವಾಗಿತ್ತು, ಕೊಠಡಿಯಲ್ಲಿ ಓದುತ್ತಿದ್ದ ನಾನು ಹಾಲ್ ಗೆ ಬಂದು ವಿಚಾರಿಸಿದ್ದೆ, ಆಗ ನನ್ನನ್ನು ನೋಡಿ ಬಾಲ್ಕನಿ ಕಡೆ ಹೋದರುಕೆಲ ಹೊತ್ತಿನ ಬಳಿಕ ತಾಯಿ ಕಾಣಿಸಲೇ ಇಲ್ಲ ಆ ಕುರಿತು ತಂದೆಯನ್ನು ವಿಚಾರಿಸಿದಾಗ ನಾನೇನು ಮಾಡಿಲ್ಲ ಆಕೆಯೇ ಆಕಸ್ಮಿಕವಾಗಿ ಕೆಳಗೆ ಬಿದ್ದಿದ್ದಾಳೆ ಎಂದು ಹೇಳಿದ್ದರು.

ಹಲವು ದಿನಗಳು ಕಳೆದ ಬಳಿಕ ತಾಯಿ ಕೆಳಗೆ ಬಿದ್ದು ಸಾಯಲು ತಂದೆಯೇ ಕಾರಣ ಎಂದು ಅನ್ನಿಸುತ್ತಿತ್ತು, ಅಷ್ಟೇ ಅಲ್ಲದೆ ಆಗಾಗ್ಗ ನಿನ್ನನ್ನು ಸಾಯಿಸುತ್ತೇನೆ ಎಂದು ಅವರು ಹೇಳುತ್ತಿದ್ದ ಮಾತುಗಳು ನೆನಪಾಗಿ ತಾಯಿಯ ಸಾವಿಗೆ ಅವರೇ ಕಾರಣ ಎನ್ನುವುದು ಖಾತ್ರಿಯಾಗಿತ್ತು ಎಂದು ಹರ್ಷಲ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+