ರೆಸಾರ್ಟ್‌ನಲ್ಲಿ ಜೆಡಿಎಸ್ ಶಾಸಕರ ಯೋಗ, ಭರ್ಜರಿ ಬಾಡೂಟ
ಬೆಂಗಳೂರು, ಜುಲೈ 10: ಕಾಂಗ್ರೆಸ್ ನಾಯಕರು, ಶಾಸಕರು ರಸ್ತೆಗೆ ಇಳಿದು ಪ್ರತಿಭಟನೆ ನಡೆಸುತ್ತಿದ್ದರೆ, ಇತ್ತ ರೆಸಾರ್ಟ್‌ನಲ್ಲಿ ಇರುವ ಜೆಡಿಎಸ್ ಶಾಸಕರು ಆರಾಮವಾಗಿ ಕಾಲ ಕಳೆಯುತ್ತಿದ್ದಾರೆ.
ದೇವನಹಳ್ಳಿ ಬಳಿ ನಂದಿ ರಸ್ತೆಯಲ್ಲಿರುವ ಪ್ರೆಸ್ಟಿಜ್ ಲಾಂಫ್ಶೈರ್ ರೆಸಾರ್ಟ್‌ನಲ್ಲಿ ತಂಗಿರುವ ಜೆಡಿಎಸ್‌ನ ಕೆಲ ಶಾಸಕರು ಆರಾಮವಾಗಿ ಕಾಲ ಕಳೆಯುತ್ತಿದ್ದಾರೆ.
ಮೂರು ದಿನಗಳಿಂದ ರೆಸಾರ್ಟ್‌ನಲ್ಲಿರುವ ಶಾಸಕರು, ಬೆಳಿಗ್ಗೆ ಎದ್ದು ಯೋಗ ಮಾಡಿದ್ದಾರೆ, ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣಸ್ವಾಮಿ, ಸಚಿವ ಬಂಡೆಪ್ಪ ಕಾಶೆಂಪುರ ಸೇರಿದಂತೆ ಹಲವು ಶಾಸಕರು ರೆಸಾರ್ಟ್‌ಗೆ ಹತ್ತಿರದಲ್ಲೇ ಇರುವ ಕೋಡುಗುರ್ಕಿ ಗ್ರಾಮದಲ್ಲಿ ನಡೆಯುತ್ತಿರುವ ಜಾತ್ರೆಗೆ ತೆರಳಿದ್ದಾರೆ.

ಕೋಡುಗುರ್ಕಿ ಗ್ರಾಮದಲ್ಲಿ ಜೆಡಿಎಸ್ ಮುಖಂಡ ಮಂಜುನಾಥ ಅವರ ಮನೆಯಲ್ಲಿ ಭರ್ಜರಿ ಬಾಡೂಟವನ್ನೂ ಜೆಡಿಎಸ್ ಶಾಸಕರು ಸವಿದಿದ್ದಾರೆ.
ಅತ್ತ ಕಾಂಗ್ರೆಸ್ ಮುಖಂಡರು ರಾಜಭವನದ ಬಳಿ ಬಿಜೆಪಿ ವಿರುದ್ಧ ಪ್ರತಿಭಟನೆ ನಡೆಸಿ ಪೊಲೀಸರ ವಶಕ್ಕೆ ಸಿಕ್ಕಿದ್ದಾರೆ. ಇನ್ನು ಮುಂಬೈನಲ್ಲಿ ಡಿಕೆ.ಶಿವಕುಮಾರ್ ಅವರು ಸತತ ಆರು ಗಂಟೆ ಕಾಲ ಅತೃಪ್ತ ಶಾಸಕರು ತಂಗಿರುವ ಹೊಟೆಲ್ ಮುಂದೆ ಕಾದು ಅವರೂ ಪೊಲೀಸರ ವಶಕ್ಕೆ ಸಿಲುಕಿದ್ದಾರೆ.

ಕೆಲವು ಜೆಡಿಎಸ್ ಶಾಸಕರು ಮುಖಂಡರೂ ಸಹ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಜಿಟಿ ದೇವೇಗೌಡ, ನಾರಾಯಣಗೌಡ, ಸಿ.ಎನ್.ಬಾಲಕೃಷ್ಣ ಅವರುಗಳು ಡಿ.ಕೆ.ಶಿವಕುಮಾರ್ ಅವರ ಜೊತೆ ಮುಂಬೈಗೆ ತೆರಳಿದ್ದಾರೆ. ಸ್ವತಃ ಜೆಡಿಎಸ್ ವರಿಷ್ಠ ದೇವೇಗೌಡ ಅವರು ಕಾಂಗ್ರೆಸ್ ನಾಯಕರು ನಡೆಸಿದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.












Click it and Unblock the Notifications