ವೈಜ್ಞಾನಿಕ ತ್ಯಾಜ್ಯ ವಿಲೇವಾರಿ ಬಿಬಿಎಂಪಿಗೆ ಈಗಲೂ ಸವಾಲು
ಬೆಂಗಳೂರು, ಮಾರ್ಚ್ 15: ಹಸಿ ಮತ್ತು ಒಣತ್ಯಾಜ್ಯ ವಿಂಗಡಣೆ ವಿಚಾರದಲ್ಲಿ ಬಿಬಿಎಂಪಿ ಹಿಂದೆ ಬಿದ್ದಿದೆ. ಈವರೆಗೆ ಶೇ.54 ತ್ಯಾಜ್ಯ ವಿಂಗಡಣೆ ಪ್ರಮಾಣ ಸಾಧಿಸಲಷ್ಟೇ ಶಕ್ತರಾಗಿರುವುದೇ ಇದಕ್ಕೆ ನಿದರ್ಶನವಾಗಿದೆ.
ತ್ಯಾಜ್ಯ ನಿರ್ವಹಣೆ ಸರಿಯಾಗಿ ಮಾಡದ ಕಾರಣಕ್ಕೆ ಐದು ವರ್ಷಗಳ ಹಿಂದೆ ನಗರದಲ್ಲಿ ಕಸದ ಸಮಸ್ಯೆ ಆರಂಭವಾಗಿತ್ತು. ಅದನ್ನು ಸರಿಪಡಿಸಲು ಈವರೆಗೆ ಬಿಬಿಎಂಪಿ ಹರಸಾಹಸ ಪಡುತ್ತಿದೆ. ಅದರಲ್ಲೂ ಕಸ ಸಮಸ್ಯೆ ನಿವಾರಣೆಗೆ ಹಸಿ ಮತ್ತು ಒಣ ತ್ಯಾಜ್ಯ ವಿಂಗಡಿಸಿ ಸಂಸ್ಕರಿಸುವುದು ಉತ್ತಮ ಎಂದು ಬಿಬಿಎಂಪಿ ಅರಿತಿದೆ.
ಆದರೆ, ಅದಕ್ಕೆ ತಕ್ಕಂತೆ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಅಧಿಕಾರಿಗಳು ವಿಫಲರಾಗುತ್ತಿದ್ದಾರೆ. ಹೀಗಾಗಿಯೇ ಕಳೆದ ಮೂರು ವರ್ಷಗಳ ಪ್ರಯತ್ನದ ನಂತರವೂ ಬೆಂಗಳೂರಲ್ಲಿ ಉತ್ಪತ್ತಿಯಾಗುವ ತ್ಯಾಜ್ಯದಲ್ಲಿ ಶೇ.54 ವಿಂಗಡಣೆ ಮಾಡಲಾಗುತ್ತಿದೆ. ಉಳಿದ ಕಸ ಮಿಶ್ರ ತ್ಯಾಜ್ಯವಾಗಿ ಕಲ್ಲು ಕ್ವಾರಿಗಳಲ್ಲಿ ವಿಲೇವಾರಿ ಮಾಡಲಾಗುತ್ತಿದೆ.

ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಶೇ.19 ಹೆಚ್ಚಳ: ಕಟ್ಟುನಿಟ್ಟಾಗಿ ಜಾರಿಗೊಳಿಸಲು ಕಳೆದ ಫೆಬ್ರವರಿಯಲ್ಲಿ ಪ್ರತಿ ಮನೆಯಲ್ಲೂ ಕಡ್ಡಾಯವಾಗಿ ಕಸ ವಿಂಗಡಣೆ ಮಾಡಬೇಕು ಎಂದು ಆದೇಶಿಸಲಾಗಿತ್ತು. ಅಲ್ಲಿಯವರೆಗೆ ಶೇ.35 ತ್ಯಾಜ್ಯ ವಿಂಗಡಣೆಯಾಗುತ್ತಿತ್ತು. ಆಗಿನಿಂದ ಈವರೆಗೆ ಬಿಬಿಎಂಪಿ ಸತತ ಪ್ರಯತ್ನದ ನಂತರ ತ್ಯಾಜ್ಯ ವಿಂಗಡಣೆ ಪ್ರಮಾಣ ಶೇ.19ರಷ್ಟು ಹೆಚ್ಚಾಗಿದೆ.












Click it and Unblock the Notifications