• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಚ್‌ಎಸ್‌ಆರ್ ಲೇಔಟ್‌ನಲ್ಲಿ ನಾಡ ಧ್ವಜಕ್ಕೆ ಬೆಂಕಿ ಹಚ್ಚಿದ ಟೆಕ್ಕಿ

|
Google Oneindia Kannada News

ಬೆಂಗಳೂರು, ಡಿ.06: ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುವ ವಾರಣಾಸಿ ಮೂಲದ 30 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರು ಭಾನುವಾರ ಎಚ್‌ಎಸ್‌ಆರ್ ಲೇಔಟ್‌ನಲ್ಲಿ ನಾಡ ಧ್ವಜಕ್ಕೆ ಬೆಂಕಿ ಹಚ್ಚಿದ್ದಾರೆ.

ಎಚ್‌ಎಸ್‌ಆರ್ ಲೇಔಟ್‌ ಪೊಲೀಸರು ವಾರಣಾಸಿ ಮೂಲದ ಅಮೃತೇಶ್ ತಿವಾರಿ ಅವರನ್ನು ಬಂಧಿಸಿ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ. ದೆಹಲಿಯ ಐಐಟಿಯಲ್ಲಿ ಓದಿರುವ ತಿವಾರಿ ಕಳೆದ ಎರಡು ತಿಂಗಳಿಂದ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವುದಾಗಿ ಎಂದು ಪೊಲೀಸರಿಗೆ ತಿಳಿಸಿದ್ದಾರೆ.

'ರಾಷ್ಟ್ರಗೀತೆ'ಗೆ ಅವಮಾನಿಸಿದ್ರೆ ಮೂರು ವರ್ಷ ಜೈಲು: 'ನಾಡಗೀತೆ'ಗೆ ಅವಮಾನ ಮಾಡಿದ್ರೆ?'ರಾಷ್ಟ್ರಗೀತೆ'ಗೆ ಅವಮಾನಿಸಿದ್ರೆ ಮೂರು ವರ್ಷ ಜೈಲು: 'ನಾಡಗೀತೆ'ಗೆ ಅವಮಾನ ಮಾಡಿದ್ರೆ?

ಸಾಮಾಜಿಕ ಕಾರ್ಯಕರ್ತ ನವೀನ್ ನರಸಿಂಹ ನೀಡಿರುವ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಲಾಗಿದೆ. ದೂರಿನಲ್ಲಿ ಪರಂಗಿಪಾಳ್ಯದ 24ನೇ ಮುಖ್ಯಸ್ತೆಯ 22ನೇ ಕ್ರಾಸ್‌ನಲ್ಲಿ ರಾತ್ರಿ 10 ಗಂಟೆ ಸುಮಾರಿಗೆ ವ್ಯಕ್ತಿಯೊಬ್ಬರು ಕರ್ನಾಟಕ ಧ್ವಜಕ್ಕೆ ಬೆಂಕಿ ಹಚ್ಚಿರುವುದು ಕಂಡು ಬಂದಿದೆ ಎಂದು ಎಚ್‌ಎಸ್‌ಆರ್ ಲೇಔಟ್ ಪೊಲೀಸರಿಗೆ ನವೀನ್ ನರಸಿಂಹ ತಿಳಿಸಿದ್ದಾರೆ.

ಬೆಂಕಿ ಹಚ್ಚಿದನ್ನು ಕಂಡು ಆರೋಪಿಯಿಂದ ಧ್ವಜವನ್ನು ಕಸಿದುಕೊಂಡು ಬೆಂಕಿಯನ್ನು ನಂದಿಸಿದ್ದಾರೆ. ಬಳಿಕ ಘಟನೆ ತಿಳಿದ ಹೊಯ್ಸಳ ಪೊಲೀಸರು ಸ್ಥಳಕ್ಕೆ ಧಾವಿಸಿ ತಿವಾರಿ ಅವರನ್ನು ಠಾಣೆಗೆ ಕರೆದುಕೊಂಡು ಹೋಗಿದ್ದರು.

(ಮಾಹಿತಿ ಕೃಪೆ; ಡೆಕ್ಕನ್ ಹೆರಾಲ್ಡ್)

English summary
Software engineer burnt the Karnataka flag in HSR Layout. Police arrested Amritesh Tiwari and released him on bail. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X