ಬೆಂಗಳೂರಿನ ಎಲ್ಲಾ ಮಾಲ್‌ಗಳಲ್ಲೂ 'Smell Test' ಕಡ್ಡಾಯ

ಬೆಂಗಳೂರು, ಜುಲೈ 28: ನಗರದ ಎಲ್ಲಾ ಮಾಲ್‌ಗಳಲ್ಲಿಯೂ ಕೇವಲ ಟೆಂಪರೇಚರ್ ಪರೀಕ್ಷೆ ಮಾಡಿಸುವುದಲ್ಲ ಸ್ಮೆಲ್ ಟೆಸ್ಟ್(ವಾಸನೆ ಗ್ರಹಿಕೆ ಪರೀಕ್ಷೆ)ಯನ್ನೂ ಕೂಡ ಕಡ್ಡಾಯವಾಗಿ ಮಾಡಿಸಬೇಕಿದೆ.

Recommended Video

      Indian Spy Satellite EMISAT Passes Over Tibet To Observe Chinese Army | Oneindia Kannada

      ಕೊರೊನಾ ಸೋಂಕಿತರನ್ನು ಕಂಡು ಹಿಡಿಯಲು ಸ್ಮೆಲ್ ಟೆಸ್ಟ್ ಕೂಡ ಅಷ್ಟೇ ಮುಖ್ಯವಾದದ್ದು ಎಂದು ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ನಂಬಿದ್ದಾರೆ. ಹೀಗಾಗಿ ಎಲ್ಲಾ ಮಾಲ್‌ಗಳಲ್ಲಿಯೂ ವಾಸನೆ ಗ್ರಹಿಕೆ ಯಂತ್ರವನ್ನು ಅಳವಡಿಸಲು ಸೂಚನೆ ನೀಡಿದ್ದಾರೆ.

      ವಾಸನೆ ಗ್ರಹಿಕೆ ಕಳೆದುಕೊಳ್ಳುವುದು ಕೊರೊನಾ ಸೋಂಕಿನ ಲಕ್ಷಣಗಳಲ್ಲಿ ಒಂದು, ಮಾಲ್‌ಗೆ ಬರುವವರಿಗೆ ವಾಸನೆಯ ಗ್ರಹಿಕೆ ಇದ್ದರೆ ಅವರು ಮಾಲ್‌ ಪ್ರವೇಶಿಸಬಹುದು.

      Smell Test Will Be Compulsory In All Malls In Bengaluru

      ಒಂದೊಮ್ಮೆ ಅವರು ವಾಸನೆಯ ಗ್ರಹಿಕೆ ಮಾಡಲಾಗದಿದ್ದರೆ ಅವರಿಗೆ ಮಾಲ್‌ಗೆ ಬರಲು ಅವಕಾಶವಿಲ್ಲ. ಈ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೂ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ.

      ಯಾರಿಂದ ವಾಸನೆಯ ಗ್ರಹಿಕೆ ಸಾಧ್ಯವಾಗುವುದಿಲ್ಲವೋ ಅಂತವರು ತಕ್ಷಣ ಆಸ್ಪತ್ರೆಗೆ ತೆರಳಿ ಪರೀಕ್ಷೆ ಮಾಡಿಸಿಕೊಳ್ಳುವುದು ಒಳಿತು. ಜ್ವರ, ಕಫ, ಉಸಿರಾಟದ ಯಾವುದೇ ತೊಂದರೆಯಿರಲಿ ಮೊದಲು ವಾಸನೆ ಗ್ರಹಿಕೆ ಶಕ್ತಿಯನ್ನು ವ್ಯಕ್ತಿ ಕಳೆದುಕೊಳ್ಳುತ್ತಾನೆ.

      ಒಂದೊಮ್ಮೆ ವ್ಯಕ್ತಿ ವಾಸನೆ ಗ್ರಹಿಕೆ ಕಳೆದುಕೊಂಡಾಕ್ಷಣ ಅವರಿಗೆ ಕೊರೊನಾ ಸೋಂಕಿದೆ ಎಂದು ಅರ್ಥವಲ್ಲ. ಅದೊಂದು ಲಕ್ಷಣ ಅಷ್ಟೇ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+