ಬೆಂಗಳೂರಿನ 85 ರಸ್ತೆಗಳಲ್ಲಿ ಸ್ಮಾರ್ಟ್ ಪಾರ್ಕಿಂಗ್, ಎಲ್ಲೆಲ್ಲಿ?

ಬೆಂಗಳೂರು, ನವೆಂಬರ್ 7: ಬೆಂಗಳೂರಿನ 85 ರಸ್ತೆಗಳಲ್ಲಿ ಸ್ಮಾರ್ಟ್ ಪಾರ್ಕಿಂಗ್ ನಿರ್ಮಾಣವಾಗಲಿದೆ.ಬಿಬಿಎಂಪಿಯು ಸ್ಮಾರ್ಟ್ ಪಾರ್ಕಿಂಗ್ ಹೆಸರಿನಲ್ಲಿ ಪಾರ್ಕಿಂಗ್ ಶುಲ್ಕ ಸಂಗ್ರಹಕ್ಕೆ ಸಿದ್ಧವಾಗಿ ನಿಂತಿದೆ.

ಈ ಯೋಜನೆಯನ್ನು ಪ್ರಾಯೋಗಿಕವಾಗಿ ಕಸ್ತೂರ್‌ ಬಾ ರಸ್ತೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ನವೆಂಬರ್ ಅಂತ್ಯದೊಳಗೆ ಈ ರಸ್ತೆಯಲ್ಲಿ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆ ಜಾರಿಗೆ ತರಲಿದೆ.

ಸಾರ್ವಜನಿಕ ಸಹಭಾಗಿತ್ವದಲ್ಲಿ ಬಿಬಿಎಂಪಿಯು ನಗರದ 85 ರಸ್ತೆಗಳಲ್ಲಿ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆ ಜಾರಿಗೆ ಯೋಜನೆ ಸಿದ್ಧಪಡಿಸಿ ಕಾರ್ಯಾದೇಶ ನೀಡಿದೆ. ವಾಹನ ನಿಲುಗಡೆಗೆ ಬೇಕಾದ ಸಿದ್ಧತೆಗೆ ಗುತ್ತಿಗೆದಾರರಿಗೆ 8 ತಿಂಗಳು ಕಾಲಾವಕಾಶ ನೀಡಲಾಗಿದೆ.

ಅಪ್ಲಿಕೇಷನ್‌ನಿಂದ ರಸ್ತೆ ಬಗ್ಗೆ ಮಾಹಿತಿ

ಅಪ್ಲಿಕೇಷನ್‌ನಿಂದ ರಸ್ತೆ ಬಗ್ಗೆ ಮಾಹಿತಿ

ಪಾರ್ಕಿಂಗ್ ಶುಲ್ಕ ವಸೂಲಿ ಮತ್ತು ಟಿಕೆಟ್ ನೀಡುವುದಕ್ಕೆ ಪಾರ್ಕಿಂಗ್ ಮೀಟರ್ ಯಂತ್ರಗಳನ್ನು ಅಳವಡಿಸಲಾಗುತ್ತದೆ. ಸವಾರರು ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಅಥವಾ ಪ್ರತಿದಿನ ವಾಹನ ನಿಲ್ಲಿಸುವುದಾದರೆ ಸ್ಮಾರ್ಟ್ ಕಾರ್ಡ್ ಪಡೆದುಕೊಂಡು ಶುಲ್ಕ ಪಾವತಿಸಬಹುದಾಗಿದೆ.

ವಾರ್ಷಿಕ 31 ಕೋಟಿ ಆದಾಯ

ವಾರ್ಷಿಕ 31 ಕೋಟಿ ಆದಾಯ

ಗುತ್ತಿಗೆ ಪಡೆದಿರುವ ಸಂಸ್ಥೆ 85 ರಸ್ತೆಗಳಲ್ಲಿ ಸ್ಮಾರ್ಟ್ ಪಾರ್ಕಿಂಗ್‌ಗೆ ಬೇಕಾದ ಮೂಲ ಸೌಕರ್ಯ ಅಳವಡಿಕೆ ಮಾಡಬೇಕು. ಪಾಲಿಕೆಗೆ ವರ್ಷಕ್ಕೆ 31 ಕೋಟಿ ರೂ.ನಂತೆ ಮುಂದಿನ 10 ವರ್ಷ ಪಾಲಿಕೆಗೆ ಶುಲ್ಕ ಪಾವತಿಸಬೇಕು.ಹತ್ತು ವರ್ಷಕ್ಕೆ ಬಿಬಿಎಂಪಿಗೆ ಸುಮಾರು 315.60 ಕೋಟಿ ಆದಾಯ ಬರಲಿದೆ. 85 ರಸ್ತೆಗಳಲ್ಲಿ 3,600 ಕಾರುಗಳು ಹಾಗೂ 10 ಸಾವಿರ ದ್ವಿಚಕ್ರ ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಲಾಗುತ್ತದೆ.

ಮಾದರಿ ರಸ್ತೆಯಲ್ಲಿ ಮೂರು ರೀತಿಯ ಶುಲ್ಕ

ಮಾದರಿ ರಸ್ತೆಯಲ್ಲಿ ಮೂರು ರೀತಿಯ ಶುಲ್ಕ

ಮಾದರಿ ರಸ್ತೆಯಲ್ಲಿ ಎ(ಪ್ರೀಮಿಯಂ) ದ್ವಿಚಕ್ರ ವಾಹನಕ್ಕೆ 15 ರೂ, ನಾಲ್ಕು ಷಕ್ರದ ವಾಹನಕ್ಕೆ 30 ರೂ., ಬಿ(ವಾಣಿಜ್ಯ) ದ್ವಿಚಕ್ರ ವಾಹನಕ್ಕೆ 10 ರೂ.ನಾಲ್ಕು ಚಕ್ರದ ವಾಹನಕ್ಕೆ 20 ರೂ. ಸಿ(ಸಾಮಾನ್ಯ) ದ್ವಿಚಕ್ರ ವಾಹನಕ್ಕೆ 5ರೂ. ನಾಲ್ಕು ಚಕ್ರದ ವಾಹನಕ್ಕೆ 15 ರೂ ಶುಲ್ಕ ನೀಡಬೇಕಾಗುತ್ತದೆ.

ಯಾವ್ಯಾವ ರಸ್ತೆಯಲ್ಲಿ ಸ್ಮಾರ್ಟ್ ಪಾರ್ಕಿಂಗ್

ಯಾವ್ಯಾವ ರಸ್ತೆಯಲ್ಲಿ ಸ್ಮಾರ್ಟ್ ಪಾರ್ಕಿಂಗ್

ಕಸ್ತೂರ್ ಬಾ ರಸ್ತೆ, ಅವೆನ್ಯೂ ರಸ್ತೆ, ರೇಸ್‌ಕೋರ್ಸ್‌, ಕನ್ನಿಂಗ್‌ಹ್ಯಾಮ್ ರಸ್ತೆ, ಡಿಕನ್ಸನ್ , ಕಮರ್ಷಿಯಲ್ ಸ್ಟ್ರೀಟ್, ಬ್ರಿಗೆಡ್ ರೋಡ್, ರಾಜಾರಾಮ್ ಮೋಹನ್ ರಾಯ್ ರಸ್ತೆ, ಮಲ್ಯ ರಸ್ತೆ, ರೆಸಿಡೆನ್ಸಿ ರಸ್ತೆ, ಕಾಳಿದಾಸ ರಸ್ತೆ, ಶೇಷಾದ್ರಿರಸ್ತೆ, ಧನ್ವಂತರಿ ರಸ್ತೆ, ಲಿಂಕ್ ರೋಡ್, ಲೇಡಿ ಕರ್ಜನ್ ರೋಡ್, ಇಮ್ರಾಹಿಂ ಸಾಹೇಬ್ ಸ್ಟ್ರೀಟ್, ವೀರಪಿಳ್ಳೈ ರಸ್ತೆ, ನೃಪತುಂಗ ರಸ್ತೆ ಸೇರಿದಂತೆ ಒಟ್ಟು 82 ರಸ್ತೆಗಳಲ್ಲಿ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆ ಮಾಡಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+