Shamitha Malnad:'ದರ್ಶನ್‌ ಮತ್ತು ವಿಜಯಲಕ್ಷ್ಮಿ ನಡುವೆ ಯಾರೂ ಬರಲು ಸಾಧ್ಯವಿಲ್ಲ'

ಬೆಂಗಳೂರು, ಜುಲೈ 2: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಜೈಲುಪಾಲಾಗಿದ್ದು, ದರ್ಶನ್‌ ಪರ ಗಾಯಕಿ ಶಮಿತಾ ಮಲ್ನಾಡ್‌ ಮಾತನಾಡಿದ್ದಾರೆ. ಈ ವೇಳೆ ಅವರು ದರ್ಶನ್‌ ಮತ್ತು ವಿಜಯಲಕ್ಷ್ಮಿ ಸಂಬಂಧ ಹೇಗಿದೆ ಎನ್ನುವುದರ ಬಗ್ಗೆ ಸವಿವರವಾಗಿ ಮಾತನಾಡಿದ್ದಾರೆ.

ನಿಜವಾಗಿಯೂ ಹೇಳಬೇಕು ಎಂದರೆ ದರ್ಶನ್‌ ಮತ್ತು ವಿಜಯಲಕ್ಷ್ಮಿ ನಡುವೆ ಯಾರೂ ಬರಲು ಸಾಧ್ಯವಿಲ್ಲ. ಮೂರು ಆರು ಎಲ್ಲಾ ಇಲ್ಲವೇ ಇಲ್ಲ. ಅವರ ಜೀವನದಲ್ಲಿ ಇವರಿಬ್ಬರೇ ಜೊತೆಗೆ ವಿನೀಷ್‌ ಅಷ್ಟೆ. ಆದರೆ ಇಲ್ಲಿ ಕೆಲವು ಸಲ ಸಹಾಯ ಮಾಡಲು ಹೋಗಿ ಸಿಕ್ಕಿ ಹಾಕಿಕೊಳ್ಳುವ ಪ್ರಸಂಗ ಜಾಸ್ತಿ ಇರುತ್ತದೆ. ಈ ಪ್ರಕರಣದಲ್ಲಿ ಆತರನೂ ಆಗಿರಬಹುದು ಎನ್ನುವುದು ನನ್ನ ಭಾವನೆ.

Singer Shamitha Malnad Talks About Actor Darshan And His Wife Vijayalakshmi Relationship

ಇನ್ನೊಂದು ವಿಚಾರವೆಂದರೆ ನಾವು ಅಂದುಕೊಂಡ ಹಾಗೆ ಕೆಲವು ವಿಚಾರಗಳು ಇರುವುದಿಲ್ಲ. ಅವರಿಬ್ಬರ ಮಧ್ಯೆ ಮೂರನೇವರಾಗಲಿ, ನಾಲ್ಕನೇ ಅವರಾಗಲೀ ಇವರೆಲ್ಲಾ ಚಾಲೆಂಜಿಂಗ್‌ ಸ್ಟಾರ್‌ ಆದ ಮೇಲೆ ಬಂದಿರೋರು. ಆದರೆ ಕುಟುಂಬ ಎನ್ನುವುದಕ್ಕೆ ಚಾಲೆಂಜಿಂಗ್‌ ಸ್ಟಾರ್‌ ಬರುವುದಿಲ್ಲ. ಅಲ್ಲಿ ಬರೀ ದರ್ಶನ್‌ ಅವರು ಮಾತ್ರ ಇರುತ್ತಾರೆ. ವಿಜಯಲಕ್ಷ್ಮಿ ಹಾಗೂ ವಿನೀಶ್‌ ಜೊತೆ ದರ್ಶನ್‌ ಅಷ್ಟೇ.

ದರ್ಶನ್‌, ವಿಜಯಲಕ್ಷ್ಮಿ ಹಾಗೂ ವಿನೀಶ್‌ ಅವರದು ಬಹಳ ಪುಟ್ಟ ಪ್ರಪಂಚ. ಅದೇ ಪ್ರಪಂಚದಲ್ಲಿ ಅವರು ಖುಷಿಯಾಗಿದ್ದಾರೆ. ಅವರಗೇನು ಬೇಕು ಇವರು ಮಾಡುತ್ತಾರೆ. ಅವರಿಗೆ ಏನು ಬೇಕು ಇವರು ಮಾಡುತ್ತಾರೆ. ಮೊದಲಿನಿಂದಲೂ ಇದು ಹಾಗೇ ಇದೆ. ಇವಾಗ ಏನು ತಿಳಿದು ಬರುತ್ತಿದೆ ಅಂದರೆ ದರ್ಶನ್‌ ಮತ್ತು ವಿಜಯಲಕ್ಷ್ಮಿ ಜೀವನ ಇನ್ನೂ ಗಟ್ಟಿಯಾಗುತ್ತದೆ.

ಇನ್ನು ಈ ಪ್ರಕರಣದಲ್ಲಿ ದರ್ಶನ್‌ ನಿರಪರಾಧಿಯಾಗಿ ಹೊರ ಬರುತ್ತಾರೆ ಎನ್ನುವ ನಂಬಿಕೆ ತುಂಬಾ ಇದೆ. ಹೊರಗೆ ಬಂದ ಮೇಲೆ ಅವರು ಏನು ಮಾಡುತ್ತಾರೆ ಎನ್ನುವ ನಿರೀಕ್ಷೆ ಇದೆ. ಚಿತ್ರರಂಗವನ್ನು ಇನ್ನಷ್ಟು ಮೇಲಕ್ಕೆ ಕರೆದುಕೊಂಡು ಹೋಗುವ ಸಾಮರ್ಥ್ಯ ಅವರಿಗಿದೆ. ಅರ್ಧ ಚಿತ್ರರಂಗ ಈಗ ಸಮಸ್ಯೆಯಲ್ಲಿದೆ. ಹೀಗಾಗಿ ದೊಡ್ಡ ದೊಡ್ಡ ಹೀರೋಗಳ ಸಿನಿಮಾಗಳನ್ನೇ ಜನ ಬಯಸುತ್ತಾರೆ.

Singer Shamitha Malnad Talks About Actor Darshan And His Wife Vijayalakshmi Relationship

ಸದ್ಯ ಯಾವುದೂ ಸಿನಿಮಾ ಬರುತ್ತಿಲ್ಲ. ಗ್ಯಾಪ್‌ ಆಗುತ್ತಿದೆ. ಯಾವ ಸಿನಿಮಾಗಳು ಸರಿಯಾಗಿ ನಡೆಯುತ್ತಿಲ್ಲ. ದುಡ್ಡು ಬರುತ್ತಿಲ್ಲ. ಈ ಎಲ್ಲದರ ಮಧ್ಯ ಅವರು ಹೊರಗಡೆ ಬಂದಾಗ ಅವರ ಮೇಲೆ ನಿರೀಕ್ಷೆ ಜಾಸ್ತಿನೇ ಇರುತ್ತದೆ. ಯಾಕೆಂದರೆ ಅವರು ಸಿನಿಮಾ ಬಗ್ಗೆ ಹೆಚ್ಚು ಯೋಚನೆ ಮಾಡುತ್ತಾರೆ ಅಂತಾ ನನಗೆ ಅನಿಸುತ್ತದೆ. ಹೀಗಾಗಿ ಅವರು ಹೊರಗಡೆ ಬಂದ ಮೇಲೆ ಏನು ಮಾಡುತ್ತಾರೆ ಎನ್ನುವುದರ ಬಗ್ಗೆ ಜಾಸ್ತಿ ನಿರೀಕ್ಷೆ ಇದೆ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+