Siddaramaiah: ಸುಡಾನ್‌ನಲ್ಲಿ ಸಿಲುಕಿರುವ ಹಕ್ಕಿ ಪಿಕ್ಕಿ ಜನರನ್ನು ರಕ್ಷಿಸಿ: ಕೇಂದ್ರಕ್ಕೆಸಿದ್ದರಾಮಯ್ಯ ಆಗ್ರಹ
ಬೆಂಗಳೂರು, ಏಪ್ರಿಲ್ 18: ಸುಡಾನ್‌ನಲ್ಲಿ ಸೇನಾ ಪಡೆಗಳು ಹಾಗೂ ನಾಗರಿಕರ ಸಂಘರ್ಷ ತೀವ್ರ ಸ್ವರೂಪ ಪಡೆದಿದೆ. ಅಲ್ಲಿನ ಅಂತರ್ಯುದ್ಧಲ್ಲಿ ಕರ್ನಾಟಕದ ಬುಡಕಟ್ಟು ಜನರು ಸಿಲುಕಿಕೊಂಡಿದ್ದು ಅವರನ್ನು ಕೂಡಲೇ ಸುರಕ್ಷಿತವಾಗಿ ಕರೆತರುವಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಆಗ್ರಹಿಸಿದ್ದಾರೆ.
ಮಂಗಳವಾರ ಈ ಕುರಿತು ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯನವರು ಸುಡಾನ್‌ನ ಅಂತರ್ಯುದ್ಧದಲ್ಲಿ ಕರ್ನಾಟಕದ ಹಕ್ಕಿಪಿಕ್ಕಿ ಬುಡಕಟ್ಟಿಗೆ ಸೇರಿದ 31 ಜನರು ಸಿಲುಕಿದ್ದಾರೆ ಎಂದು ವರದಿ ಆಗಿದೆ. ಸಂಘರ್ಷ ಸಮಯದಲ್ಲಿ ಕರ್ನಾಟಕದ ಈ ಬುಡಕಟ್ಟು ನಿವಾಸಿಗಳು ಅಲ್ಲಿ ಆಹಾರವಿಲ್ಲದೇ ತತ್ತರಿಸಿದ್ದಾರೆ. ಹೀಗಿದ್ದರೂ ಕೇಂದ್ರ ಸರ್ಕಾರ ಏನು ಕ್ರಮ ಕೈಗೊಂಡಿಲ್ಲ ಎಂದು ಅವರು ದೂರಿದ್ದಾರೆ.

ಕೂಡಲೇ ಕೇಂದ್ರ ಬಿಜೆಪಿ ಸರ್ಕಾರ, ಪ್ರಧಾನಿ ಕಾರ್ಯಾಲಯ ಹಾಗೂ ಪ್ರಧಾನಿ ನರೇಂದ್ರ ಮೋದಿಯಾವರು ಮಧ್ಯೆ ಪ್ರವೇಶಿಸಬೇಕು. ಸುಡಾನ್‌ನಲ್ಲಿ ಪರದಾಡುತ್ತಿರುವ ಕನ್ನಡಿಗರನ್ನು ರಕ್ಷಣೆ ಮಾಡಬೇಕು. ಈ ಕುರಿತು ಸರ್ಕಾರವು ತಕ್ಷಣವೇ ರಾಜತಾಂತ್ರಿಕ ಚರ್ಚೆಗಳನ್ನು ಮಾಡಿ ಹಕ್ಕಿ ಪಿಕ್ಕಿಗಳ ಜನಾಂಗದವರು ಯೋಗಕ್ಷೇಮ ಖಚಿತಪಡಿಸಿಕೊಳ್ಳಬೇಕು. ಅದಕ್ಕಾಗಿ ಅಂತಾರಾಷ್ಟ್ರೀಯ ಏಜೆನ್ಸಿಗಳಿಗೆ ಸೂಚಿಸಬೇಕು ಎಂದು ಅವರು ಟ್ವೀಟ್‌ನಲ್ಲಿ ಆಗ್ರಹಿಸಿದ್ದಾರೆ.
ಸುಡಾನ್ ಸಂಘರ್ಷದಲ್ಲಿ 180 ಮಂದಿ ಮೃತ
ಸೇನೆ-ಅರೆಸೇನಾ ಮತ್ತು ನಾಗರಿಕರ ಮಧ್ಯೆದ ಸಂಘರ್ಷವು ಮೂರನೇ ದಿನಕ್ಕೆ ಕಾಲಿಟ್ಟಿದೆ. ಸಂಘರ್ಷದಲ್ಲಿ ಮೃತಪಟ್ಟವರ ಸಂಖ್ಯೆ 180ಕ್ಕೆ ಹೆಚ್ಚಾಗಿದೆ. ಇತ್ತ ಲಕ್ಷಾಂತರ ಜನರು ಮನೆಯಿಂದ ಹೊರ ಬರಲಾರದೇ ಕಂಗಾಗಲಾಗಿದ್ದಾರೆ. ಆಹಾರ ಪದಾರ್ಥಗಳು, ದಿನಬಳಕೆ ವಸ್ತುಗಳು ಅವರಿಗೆ ಸಿಗುತ್ತಿಲ್ಲ. ಎಲ್ಲೆಡೆ ಭಯದ ವಾತಾವರಣ ನಿರ್ಮಾಣವಾಗಿದೆ.
ಕರ್ನಾಟಕದ ಹಕ್ಕಿಪಿಕ್ಕಿ ಬುಡಕಟ್ಟು ಜನಾಂಗದ 31 ಮಂದಿ ಸೇರಿದಂತೆ ಭಾರತೀಯ ಪ್ರಜೆಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಘರ್ಷ ಸ್ಥಳದಲ್ಲಿ ಸಿಲುಕಿಕೊಂಡಿದ್ದಾರೆ ಎಂದು ವರದಿ ಆಗಿದೆ. ಶನಿವಾರ ಘರ್ಷಣ ಆರಂಭವಾಗಿದೆ. ಅಲ್ಲಿ ಸಿಲುಕಿದವರ ವಿಚಾರ ತಿಳಿಯುತ್ತಿದ್ದಂತೆ ಭಾರತದ ವಿದೇಶಾಂಗ ಸಚಿವಾಲಯ ಅಲ್ಲಿನ ಭಾರತೀಯ ರಕ್ಷಣೆಗೆ ಮತ್ತು ಸಹಾಯಕ್ಕಾಗಿ ನಿಯಂತ್ರಣ ಕೊಠಡಿ ಸ್ಥಾಪಿಸಿದೆ.

ಭಾರತೀಯರಿಗಾಗಿ ಸಹಾಯವಾಣಿ
ಸುಡಾನ್ ನಲ್ಲಿ ಭಾರತೀಯರ ಸಹಾಯಕ್ಕಾಗಿ ಸಹಾಯವಾಣಿ ಆರಂಭಿಸಲಾಗಿದೆ. ಸಹಾಯವಾಣಿ 800 11 8797 (ಟೋಲ್ ಫ್ರೀ) +91-11-23012113 ಅಥವಾ 91-11-23014104 ಅಥವಾ 91-11-23017905; ಮೊಬೈಲ್: +91 99682 91988 ಸಂಖ್ಯೆ ಮತ್ತು ಇಮೇಲ್ [email protected] ವಿಳಾಸ ಹಂಚಿಕೊಳ್ಳಲಾಗಿದೆ.
ಸೇನಾ ಪಡೆಗಳು ಗುಂಡಿನ ಮಳೆಗರೆಯುತ್ತಿರುವುದು ಸಾಮಾನ್ಯ ಎಂಬಂತಾಗಿದೆ. ಎಲ್ಲಿ ನೋಡಿದರೂ ಗುಂಡಿ ಸದ್ದುಗಳೇ ಕೇಳಿ ಬರುತ್ತಿವೆ. ಇದೇ ವೇಳೆ ದುಷ್ಕರ್ಮಿಗಳು ಕಂಡ ಕಂಡ ಮನೆಗಳಲ್ಲಿ ಲೂಟಿ ಆರಂಭಿಸಿದ್ದಾರೆ. ಮೊದಲೇ ಸಂಘರ್ಷದಿಂದ ಬೇಸತ್ತ ಅಲ್ಲಿನ ಜನರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ ಎಂದು ವರದಿಯಾಗಿದೆ.
ಭಾರತೀಯ ಪೈಕಿ ಕನ್ನಡಿಗರು ಸಿಲುಕಿದ್ದರಿಂದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರಕ್ಕೆ ಮಧ್ಯ ಪ್ರವೇಶಿಸುವಂತೆ ಮನವಿ ಮಾಡಿದ್ದಾರೆ.












Click it and Unblock the Notifications