ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಂಪುಟ ವಿಸ್ತರಣೆ ಬಿಸಿಯಲ್ಲಿದ್ದ ಸಿದ್ದುಜೀಗೆ ಬಿಬಿಎಂಪಿ ನೆನಪಿಲ್ಲ!

By Mahesh
|
Google Oneindia Kannada News

ಬೆಂಗಳೂರು, ಆಗಸ್ಟ್ 28: ಬಿಬಿಎಂಪಿ ಚುನಾವಣೆ 2015ರ ನಿರಾಶಾದಾಯಕ ಫಲಿತಾಂಶದ ನಂತರ ಸೊಲೊಪ್ಪಿಕೊಂಡ ಸಿಎಂ ಸಿದ್ದರಾಮಯ್ಯ ಅವರು ಬಿಬಿಎಂಪಿ ಬಗ್ಗೆ ಮರೆತು ತಮ್ಮ ಸಂಪುಟ ವಿಸ್ತರಣೆ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಮನೆಯಲ್ಲಿ ಹಬ್ಬದೂಟ ಮರೆತು ರೆಸಾರ್ಟ್ ನಲ್ಲಿ 'ಮೈತ್ರಿ' ಮಾತುಕತೆ ನಡೆಸುತ್ತಿರುವ ಕಾಂಗ್ರೆಸ್ ಮುಖಂಡರ ಬಗ್ಗೆ ಪ್ರಶ್ನಿಸಿದರೆ, 'ನನಗೇನು ಗೊತ್ತಿಲ್ಲ' ಎಂದು ಉತ್ತರಿಸಿದ್ದಾರೆ.

ಬೆಂಗಳೂರಿನ ಐವರು ಸಚಿವರುಗಳು ಹೇಗಾದರೂ ಬಿಬಿಎಂಪಿಯಲ್ಲಿ ತಮ್ಮ ಪ್ರಭಾವ ಬೀರಲು ಹೆಣಗಾಡುತ್ತಿದ್ದಾರೆ. ಇದರಿಂದ ಸಚಿವ ಸಂಪುಟ ವಿಸ್ತರಣೆ ಪ್ರಕ್ರಿಯೆ ಇನ್ನಷ್ಟು ಮುಂದಕ್ಕೆ ಹೋಗುವ ಪರಿಸ್ಥಿತಿ ಉಂಟಾಗಿದೆ. ಸಿದ್ದರಾಮಯ್ಯ ಅವರಿಗೂ ಈ ಪರಿಸ್ಥಿತಿ ಖುಷಿ ತಂದುಕೊಟ್ಟಿದೆ. ಸಚಿವ ಸ್ಥಾನ ಬಯಸುವವರು, ಅತೃಪ್ತರು, ಬಂಡಾಯಗಾರರು ಸಿದ್ದರಾಮಯ್ಯ ಅವರ ತಲೆ ತಿನ್ನುವುದು ತಪ್ಪಿದೆ.

ವಿಸ್ತರಣೆ ಅಷ್ಟೇ: ಕರ್ನಾಟಕಕ್ಕೆ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಬಂದ ಮೇಲೆ ಸಂಪುಟ ವಿಸ್ತರಣೆ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು. ಸಂಪುಟ ಪುನರ್ ರಚನೆ ಮಾಡುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.[ಕಾಂಗ್ರೆಸ್ ತಂತ್ರಕ್ಕೆ ಪ್ರತಿತಂತ್ರ ಹೂಡಿದ ಬಿಜೆಪಿ]

Siddaramaiah on Cabinet re shuffle news says only expansion BBMP Mayor

ಬಿಬಿಎಂಪಿ ಚುನಾವಣೆಯಲ್ಲಿ ಕಾಂಗ್ರೆಸ್ ಸೋತಿರುವುದು ಸಂಪುಟ ಪುನಾರಚನೆ ಪ್ರಕ್ರಿಯೆ ಹಿಂದಕ್ಕೆ ತಳ್ಳಿದ್ದು, ಸೆಪ್ಟೆಂಬರ್ ಎರಡನೇ ವಾರದಲ್ಲಿ ರಾಜ್ಯಕ್ಕೆ ರಾಹುಲ್ ಗಾಂಧಿ ಆಗಮನದ ಬಳಿಕ ವಿಸ್ತರಣೆ ಪ್ರಕ್ರಿಯೆಗೆ ಚಾಲನೆ ಸಿಗುವ ಸಾಧ್ಯತೆ ಇದೆ. [ಸಮೀಕ್ಷೆ: ಮಾಧ್ಯಮಗಳ ಭವಿಷ್ಯ ಸುಳ್ಳಾಗಿದ್ದೇಕೆ?]

ಸದ್ಯಕ್ಕೆ ಸಂಪುಟದಲ್ಲಿ ನಾಲ್ಕು ಸ್ಥಾನಗಳು ಖಾಲಿ ಇವೆ. ಜಾತಿ, ಪ್ರದೇಶ ಹಾಗೂ ಹಿರಿತನದ ಆಧಾರದ ಮೇಲೆ 20ಕ್ಕೂ ಹೆಚ್ಚು ಆಕಾಂಕ್ಷಿಗಳು ಇದ್ದಾರೆ.

ರಾಮಲಿಂಗಾರೆಡ್ಡಿ, ಕೆಜೆ ಜಾರ್ಜ್, ಕೃಷ್ಣಭೈರೇ ಗೌಡ, ದಿನೇಶ್ ಗುಂಡೂರಾವ್, ರೋಷನ್ ಬೇಗ್ ಅವರು ಬಿಬಿಎಂಪಿಯಲ್ಲಿ ತಮ್ಮ ಛಾಪು ಮೂಡಿಸಿ ರಿಪೋರ್ಟ್ ಕಾರ್ಡನ್ನು ರಾಹುಲ್ ಮುಂದೆ ಹಿಡಿಯಲು ಅನ್ಯಮಾರ್ಗ ಅನುಸರಿಸುತ್ತಿದ್ದಾರೆ. ಅದೂ ಕೂಡಾ ನೇರವಾಗಿ ಮಾತುಕತೆಗೆ ಇಳಿಯದೆ ಎಂದು ಸುದ್ದಿ ಬಂದಿದೆ.

ಜೆಡಿಎಸ್ ನ ಚೆಲುವನಾರಾಯಣ ಸ್ವಾಮಿ, ಜಮೀರ್ ಅಹಮದ್, ಶರವಣ ಅವರೊಟ್ಟಿಗೆ ಮಾತುಕತೆ ನಡೆಸುತ್ತಿರುವ ಕಾಂಗ್ರೆಸ್ ಸಚಿವರುಗಳು ಯಾರು ಎಂಬುದು ಸ್ಪಷ್ಟವಾಗಿಲ್ಲ. ಬಿಬಿಎಂಪಿ ಮೇಯರ್ ಅಥವಾ ಉಪ ಮೇಯರ್ ಸ್ಥಾನ ಪಡೆಯುವುದು ಬಿಡುವುದು ಬೆಂಗಳೂರಿನ ಸಚಿವರುಗಳಿಗೆ ಬೇಕೇ ಹೊರತೂ 'ಸಿಎಂ' ಸಿದ್ದರಾಮಯ್ಯಗೆ ಆ ತಲೆಬಿಸಿ ಬೇಕಿಲ್ಲ.

English summary
Karnataka CM Siddaramaiah denied Cabinet reshuffle news says only expansion will happen. Siddaramaiah also said he is unaware about the political activities and alliance meeting between Congress and JDS leaders.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X