'ಸಿದ್ದರಾಮಯ್ಯ ಬೇಕೇ ಬೇಕು': ನಿತ್ಯ ಸಿಎಂ ಹೆಸರು ದುರ್ಬಳಕೆ: ಸಚಿವರಿಗೆ 'ಡಿಕೆ ಶಿವಕುಮಾರ್' ಟಾಂಗ್
ಬೆಂಗಳೂರು, ಫೆಬ್ರವರಿ 17: ಕಾಂಗ್ರೆಸ್ ಪಕ್ಷ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರನ್ನು ಎರಡು ಭಾರಿ ಸಿಎಂ ಆಗಿ ಮಾಡಿದೆ. ಅವರು ಉತ್ತಮವಾಗಿ ಕೆಲಸ ಮಾಡಿಕೊಂಡು ಬಂದಿದ್ದಾರೆ. ಅವರು ಮುಂದಿನ ಎಲ್ಲ ಚುನಾವಣೆಗಳಿಗೂ ಬೇಕೇ ಬೇಕು. ಇದರಲ್ಲಿ ಎರಡು ಮಾತಿಲ್ಲ. ಆದರೆ ಅವರ ಹೆಸರನ್ನು ಪ್ರತಿನಿತ್ಯವು ದುರ್ಬಳಕೆ ಆಗುತ್ತಿದೆ ಎಂದು ಕೆಲವು ಸಚಿವರಿಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರು ಟಾಂಗ್ ನೀಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಮ್ಮ ನಾಯಕರು ಎಂದು ಭಾನುವಾರರ ಸುದ್ದಿಗಾರರ ಕೆಲವು ಪ್ರಶ್ನೆಗಳಿಗೆ ಉತ್ತರಿಸಿದರು. ಮುಖ್ಯಮಂತ್ರಿ ಬೇಕೇ ಬೇಕು ಎಂದು ನಿತ್ಯವು ಸಚಿವರು ಹೇಳುತ್ತಿದ್ದಾರೆ. ಈ ಪ್ರಶ್ನೆಗೆ ಅವರು ತೀಕ್ಷ್ಣವಾಗಿ ಉತ್ತರಿಸಿದರು. ದಿನಬೆಳಗಾದರೆ ಸಿಎಂ ಸಿದ್ದರಾಮಯ್ಯ ಅವರ ಹೆಸರು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಸಿಎಂ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಹೆಸರು ಮಾಧ್ಯಮಗಳಿಗೆ ಆಹಾರವಾಗುವಂತೆ ಮಾತನಾಡುವುದು. ಪದೇ ಪದೆ ಅವರ ಹೆಸರು ತರುವುದು. ಗೊಂದಲ ಉಂಟು ಮಾಡುವಂತೆ ಮಾಡುವುದು ಬೇಡ ಎಂದು ಸಚಿವರಿಗೆ ತಿಳಿ ಹೇಳಿದ್ದಾರೆ. ಕಾಂಗ್ರೆಸ್‌ನಲ್ಲಿ ಯಾವುದೇ ಗೊಂದಲ ಇಲ್ಲ. ಕಾಂಗ್ರೆಸ್ ಪಕ್ಷ ಎಲ್ಲವನ್ನು ಗಮನಿಸುತ್ತಿದೆ ಎಂದು ಅವರು ಯಾರೆಲ್ಲ ಸಿಎಂ ಹೆಸರು ದುರ್ಬಳಕೆ ಮಾಡುತ್ತಿದ್ದಾರೋ ಅವರಿಗೆ ಟಾಂಗ್ ನೀಡಿದ್ದಾರೆ.
ಮುಂದಿನ ಸ್ಥಳೀಯ ಚುನಾವಣೆಗಳು, ಜಿಲ್ಲಾ ಪಂಚಾಯಿತಿ, ತಾಲೂಕು, ಪಂಚಾಯಿತಿ ಸೇರಿದಂತೆ ಎಲ್ಲ ಚುನಾವಣೆಗೂ ಮುಖ್ಯಮಂತ್ರಿ ಬೇಕು. ಪಕ್ಷ ಅವರನ್ನು ಸಿಎಂ ಮಾಡಿದೆ. ಅಂತವರು ಬೇಕು ಬೇಕು ಎಂದು ಬೇಡದ, ಗೊಂದಲದ ಹೇಳಿಕೆ ನೀಡಬಾರದು. ಪಕ್ಷದಲ್ಲಿ ಗೊಂದಲ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಚುನಾವಣೆ ಸಿದ್ಧತೆ: ಡಿಕೆಶಿ ಹೇಳಿದ್ದೇನು?
ಚುನಾವಣೆ ಸಿದ್ಧತೆ ಕುರಿತು ಮಾತನಾಡಿದ ಅವರು, ಕಾಂಗ್ರೆಸ್ ಮುಂದೆ ಎದುರಾಗಲಿರುವ ಎಲ್ಲ ಸ್ಥಳೀಯ ಚುನಾವಣೆಗಳಿಗೆ ಸಿದ್ಧತೆ ಆರಂಭಿಸುತ್ತಿದೆ. ಈ ಸಂಬಂಧ ನ್ಯಾಯಾಲಯದ ಸಲಹೆ ಸೂಚನೆ ನಿರೀಕ್ಷೆ ಮಾಡುತ್ತಿದ್ದೇವೆ. ಚುನಾವಣೆಗಳಿಗೆ ಬೇಕಾದ ಎಲ್ಲ ಸಿದ್ಧತೆಗಳನ್ನು ನಾವು ಮಾಡಿಕೊಳ್ಳುತ್ತಿದ್ದೇವೆ.
ಪಂಚಾಯಿತಿ ಸಮಿತಿ ರಚನೆ: ಡಿಕೆಶಿ
ಬೃಹತ್ ಬೆಂಗಳೂರು ಮಾಹನಗರ ಪಾಲಿಕೆ ಚುನಾವಣೆಗೆ ಅಗತ್ಯ ತಯಾರಿ ನಡೆದಿದೆ. ಪಾಲಿಕೆಗೆ ಯಾವಾಗ ಬೇಕಾದರರೂ ಚುನಾವಣೆ ಘೋಷಣೆ ಆಗಬಹುದು. ಆದ್ದರಿಂದ ನಾವು ಸೂಕ್ತ ತಯಾರಿಯಲಿದ್ದೇವೆ. ಸದ್ಯ ಮುಂದೆ ಎದುರಾಗುವ ಜಿಲ್ಲಾ ಪಂಚಾಯತ್, ತಾಲೂಕು, ನಗರ ಸ್ಥಳೀಯ ಪಂಚಾಯಿತಿಗಳಿಗೆ ಸಮಿತಿ ರಚನೆ ಮಾಡುತ್ತಿದ್ದೇವೆ ಎಂದು ಅವರು ಮಾಹಿತಿ ನೀಡಿದರು.












Click it and Unblock the Notifications