ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾಶ್ಮೀರವನ್ನು ಜೈಲಾಗಿಸಿ ಪ್ರಚಾರ ಪಡೆಯುತ್ತಿರುವ ಬಿಜೆಪಿ: ಸಿದ್ದರಾಮಯ್ಯ ಆರೋಪ

|
Google Oneindia Kannada News

Recommended Video

ಬಿಜೆಪಿ ನಾಯಕರ ಕಾಲೆಳೆದ ಸಿದ್ದರಾಮಯ್ಯ | Siddaramaiah | Oneindia Kannada

ಬೆಂಗಳೂರು, ಸೆಪ್ಟೆಂಬರ್ 20: "ನಮ್ಮ ದೇಶಪ್ರೇಮಿ ಬಿಜೆಪಿ ನಾಯಕರು ಮಾತ್ರ ಕಾಶ್ಮೀರವನ್ನು 'ಜೈಲು' ಮಾಡಿದ್ದಕ್ಕಾಗಿ ಪ್ರಚಾರಕ್ಕೆ ಹೊರಟಿದ್ದಾರೆ. ಎಂತಹ ದೇಶಪ್ರೇಮ!" ಎಂದು ಟ್ವೀಟ್ ಮಾಡುವ ಮೂಲಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ನಾಯಕರ ಕಾಲೆಳೆದಿದ್ದಾರೆ.

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370 ನೇ ವಿಧಿಯನ್ನು ಇತ್ತೀಚೆಗೆ ಕೇಂದ್ರ ಸರ್ಕಾರ ರದ್ದುಗೊಳಿಸಿತ್ತು. ಈ ಕುರಿತು ಬಿಜೆಪಿ ಯುವ ಮೋರ್ಚಾ ಜಿಲ್ಲಾವಾರು ಕಾರ್ಯಕ್ರಮ ನಡೆಸಿ, ಪ್ರಚಾರ ನೀಡಲು ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಒಂದು ದೇಶ, ಒಂದು ಸಂವಿಧಾನ ಎಂಬ ವಿಚಾರಗೋಷ್ಠಿಯೂ ನಡೆಯಲಿದೆ.

ಈ ಕುರಿತು ಟ್ವೀಟ್ ಮಾಡಿರುವ ಸಿದ್ದರಾಯ್ಯ, ಕರ್ನಾಟಕದ ಹಲವು ಜಿಲ್ಲೆಗಳು ನೆರೆಯಿಂದ ತತ್ತರಿಸಿ ಹೋಗಿದ್ದರೆ ಅಲ್ಲಿಗೆ ತೆರಳುವ ಬದಲು, ಕೇಂದ್ರ ಸರ್ಕಾರದ ಪ್ರಚಾರಕ್ಕೆ ಮುಂದಾಗಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.

Siddaramaiah blames BJP for campaining for Scrapping of Article 370

"ಅರ್ಧದಷ್ಟು ಖಾತೆಗಳಿಗೆ ಪೂರ್ಣಪ್ರಮಾಣದ ಸಚಿವರಿಲ್ಲ,
ಉಸ್ತುವಾರಿ ಸಚಿವರ ಪತ್ತೆಯಿಲ್ಲ,
ನೆರೆ ಪರಿಹಾರವನ್ನು ಕೇಂದ್ರ ಕೊಡ್ತಿಲ್ಲ.
ಮುಖ್ಯಮಂತ್ರಿಗಳನ್ನು ಪ್ರಧಾನಿ ಭೇಟಿ ಮಾಡ್ತಿಲ್ಲ.

ನಮ್ಮ ದೇಶಪ್ರೇಮಿ
ಬಿಜೆಪಿ ನಾಯಕರು ಮಾತ್ರ ಕಾಶ್ಮೀರವನ್ನು 'ಜೈಲು' ಮಾಡಿದ್ದಕ್ಕಾಗಿ ಪ್ರಚಾರಕ್ಕೆ ಹೊರಟಿದ್ದಾರೆ.
ಎಂತಹ ದೇಶಪ್ರೇಮ!" ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

English summary
Former CM Siddaramaiah blames BJP for not visiting flood hit area and campaining for Scrapping of Article 370.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X